ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ : ಮೂಲಗಳು

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮೂಲಗಳ ಪ್ರಕಾರ ಈ ಅಧಿವೇಶನದಲ್ಲಿ ನೂತನ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನ ವಿಶೇಷ … Continued

ಕರ್ನಾಟಕದ ಮೂರು ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ

ನವದೆಹಲಿ : ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಈ ಸೇರ್ಪಡೆಯಿಂದಾಗಿ ಭಾರತದಲ್ಲಿ 42 ನೇ ಸ್ಥಳ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣದ ಪಟ್ಟಿಗೆ ಸೇರಿದಂತಾಗಿದೆ. ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವು ಈ … Continued

ಭಾರತ vs ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ : ಮೊದಲ ಎರಡು ಪಂದ್ಯಕ್ಕೆ ಕೆ.ಎಲ್‌. ರಾಹುಲ್ ನಾಯಕ, ಆರ್ ಅಶ್ವಿನ್ ಪೂರ್ಣ ಸರಣಿಗೆ ಆಯ್ಕೆ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಎರಡು ಸೆಟ್ ತಂಡಗಳನ್ನು ಆಯ್ಕೆ ಮಾಡಿದೆ. ಮೊದಲ ಎರಡು ಏಕದಿನದ ಪಂದ್ಯಗಳಿಗೆ ಕೆ.ಎಲ್. ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಆರ್ ಅಶ್ವಿನ್ 2022 ರ ನಂತರ ಮೊದಲ ಬಾರಿಗೆ ಏಕದಿನದ ಪಂದ್ಯಾವಳಿಯ ತಂಡಕ್ಕೆ ಮರಳಿದ್ದಾರೆ ಮತ್ತು ಸಂಪೂರ್ಣ ಸರಣಿಗೆ ಅವರು ಆಯ್ಕೆಯಾಗಿದ್ದಾರೆ. ಅಂತಿಮ ಏಕದಿನ ಪಂದ್ಯಕ್ಕೆ ಭಾರತವು ತನ್ನ … Continued

ರಸ್ತೆಯಲ್ಲಿ ಸಾರ್ವಜನಿಕರ ಎದುರೇ ಹೊಡೆದಾಡಿಕೊಂಡ ಇಬ್ಬರು ಪೊಲೀಸರು : ತನಿಖೆ ಆರಂಭ | ವೀಡಿಯೊ

ಬಿಹಾರದ ನಳಂದಾದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಹಗಲು ಹೊತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ಪೊಲೀಸರು ನಳಂದಾದಲ್ಲಿ ರಸ್ತೆಯ ಮಧ್ಯದಲ್ಲಿ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಅಧಿಕಾರಿ ಸಾರ್ವಜನಿಕರ ಮುಂದೆಯೇ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮೊದಲ ಪೋಲೀಸರು ಅಲ್ಲಿಂದ ತೆರಳಲು ಯತ್ನಿಸಿದಾಗ ಮತ್ತೋರ್ವ ಪೋಲೀಸ್‌ … Continued

ಹಣಕ್ಕಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಅರಣ್ಯದಲ್ಲಿ ಶವ ಎಸೆದಿದ್ದ ಮೂವರು ಆರೋಪಿಗಳ ಬಂಧನ

ಶಿರಸಿ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಶವವನ್ನು ತಾಲೂಕಿನ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಎಸೆದು ಹೋಗಿದ್ದರು. ಅರಣ್ಯದಲ್ಲಿ ಅಪರಿಚಿತ ವ್ಯಕ್ತಿಯ ಪತ್ತೆಯಾದ 24 ಗಂಟೆಗಳ ಒಳಗೆ ಮೂವರು ಕೊಲೆ ಆರೋಪಿಗಳನ್ನೂ ಬಂಧಿಸಲಾಗಿದೆ ಬಂಧಿತ … Continued

ಪ್ರಜ್ವಲ್​​ ರೇವಣ್ಣಗೆ ತಾತ್ಕಾಲಿಕ ರಿಲೀಫ್​ : ಸಂಸದ ಸ್ಥಾನ ಅನರ್ಹಗೊಳಿಸಿದ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಪ್ರಜ್ವಲ್ ರೇವಣ್ಣ ಲೋಕಸಭೆಯಲ್ಲಿ ಜೆಡಿಎಸ್‌ನ ಏಕೈಕ ಸಂಸದ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ … Continued

ಭಾರತೀಯ ವರ್ಣಚಿತ್ರಕಾರಳ ಈ ಕಲಾಕೃತಿಯು ದಾಖಲೆಯ 61.8 ಕೋಟಿ ರೂ.ಗಳಿಗೆ ಮಾರಾಟ…!

ನವದೆಹಲಿ : ದಿವಂಗತ ಸಿಖ್‌- ಹಂಗೇರಿಯ ವರ್ಣಚಿತ್ರಕಾರರಾದ ಅಮೃತಾ ಶೇರ್‌ಗಿಲ್‌ ಅವರ ‘ದಿ ಸ್ಟೋರಿ ಟೆಲ್ಲರ್‌’ ಪೇಂಟಿಂಗ್ ಇತ್ತೀಚೆಗೆ 61.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ. 1937ರ ದಿನಾಂಕದ ಈ ವರ್ಣಚಿತ್ರವು ವಿಶ್ವದಾದ್ಯಂತ ಹರಾಜಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. ಆಯಿಲ್ ಆನ್ ಕ್ಯಾನ್ವಾಸ್ ಪೇಂಟಿಂಗ್ ನಲ್ಲಿ ಸೈಯದ್ ಹೈದರ್ ರಾಝಾ ಅವರ ‘ಗೆಸ್ಟೇಷನ್’ ಎಂಬ ಶೀರ್ಷಿಕೆಯ … Continued

ಬಿಜೆಪಿ ಜೊತೆ ಮೈತ್ರಿ ಇಲ್ಲ, ಚುನಾವಣೆ ವೇಳೆ ಈ ಬಗ್ಗೆ ನಿರ್ಧಾರ : ಎಐಎಡಿಎಂಕೆ ನಾಯಕ

ಚೆನ್ನೈ: ಬಿಜೆಪಿ ಪಕ್ಷದ ಜೊತೆ ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಮತ್ತು ಚುನಾವಣೆಯ ಸಮಯದಲ್ಲಿ ಮಾತ್ರ ಮೈತ್ರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ. ದ್ರಾವಿಡ ನಾಯಕ ಸಿಎನ್ ಅಣ್ಣಾದೊರೈ ಅವರನ್ನು ಟೀಕಿಸಿದ್ದಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ ಎಐಎಡಿಎಂಕೆಯ ಹಿರಿಯ ನಾಯಕ ಡಿ.ಜಯಕುಮಾರ … Continued

ಬೆಂಗಳೂರು : ಕೋಟಿ ಮೌಲ್ಯದ ನೋಟು-ನಾಣ್ಯಗಳಿಂದ ಅಲಂಕೃತವಾಗಿರುವ ಗಣಪ | ವೀಡಿಯೊ

ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ವೈಭವದ ಗಣೇಶೋತ್ಸವ ನಡೆದಿದ್ದು, ಗಣೇಶನ ದೇವಸ್ಥಾನ ನೋಟು ಮತ್ತು ನಾಣ್ಯಗಳಿಂದ ಶೃಂಗಾರಗೊಂಡಿದೆ. 10, 20, 50, ನೂರು ಹಾಗೂ 500 ರೂಪಾಯಿ ನೋಟುಗಳ ಹಾರಗಳನ್ನು ಮಾಡಿ ಸುಂದರವಾಗಿ ಪೋಣಿಸಿ ಅಲಂಕಾರ ಮಾಡಲಾಗಿದೆ. ಜೊತೆಗೆ ನಾಣ್ಯಗಳ ಮೂಲಕವೂ ದೇಗುಲಕ್ಕೆ ಅಲಂಕಾರ ಮಾಡಲಾಗಿದೆ. 10, 20ರ … Continued

ಜಿಎಸ್‌ಬಿ ಸೇವಾ ಮಂಡಳದ ಗಣೇಶ ಅತ್ಯಂತ ಶ್ರೀಮಂತ ….: 69 ಕೆ.ಜಿ. ಚಿನ್ನ, 336 ಕೆ.ಜಿ. ಬೆಳ್ಳಿಯಿಂದ ಗಣೇಶನಿಗೆ ಅಲಂಕಾರ, ಈ ವರ್ಷದ ವಿಮೆ ಮೊತ್ತ 360 ಕೋಟಿ ರೂ. | ವೀಕ್ಷಿಸಿ

ಮುಂಬೈ: ಮುಂಬೈನ ಜನಪ್ರಿಯ ಗಣೇಶ ಮಂಡಳದಲ್ಲಿ ಒಂದಾದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸೇವಾ ಮಂಡಲವು ಹಬ್ಬದ ಪೂರ್ವಭಾವಿಯಾಗಿ ಸೋಮವಾರ 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿಯಿಂದ ಅಲಂಕರಿಸಲ್ಪಟ್ಟ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಈ ವರ್ಷ ಗಣೇಶ ಚತುರ್ಥಿಗೆ ದೇಣಿಗೆಯಾಗಿ 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನದ ಪೆಂಡೆಂಟ್ ಸ್ವೀಕರಿಸಿದ್ದೇವೆ … Continued