ಇಸ್ರೇಲಿ ಅಧಿಕಾರಿಗಳು ಸೋಮವಾರ ಹಮಾಸ್ ಭಯೋತ್ಪಾದಕರು ವೀಡಿಯೊ ಮುಂದೆ ದಾಳಿ ಬಗ್ಗೆ ತಪ್ಪೊಪ್ಪಿಕೊಂಡ ವೀಡಿಯೊ ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ, ಹಮಾಸ್ ಉಗ್ರರು ಇಸ್ರೇಲ್ ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ ಒತ್ತೆಯಾಳಾಗಿ ಒಯ್ದರೆ ತಮಗೆ ಹಮಾಸ್ ನಾಯಕರು ಭಾರೀ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ(ISA)ಯು ಹಮಾಸ್ ಭಯೋತ್ಪಾದಕರು ವಿಚಾರಣೆಯ ಸಮಯದಲ್ಲಿ ಇಸ್ರೇಲ್‌ನಿಂದ ಗಾಜಾಕ್ಕೆ ನಾಗರಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದಕ್ಕಾಗಿ ಹಣಕಾಸು ನೀಡುವ ಭರವಸೆ ನೀಡಿದ್ದರು ಎಂದು ಹಮಾಸ್ ಉಗ್ರರು ತಪ್ಪೊಪ್ಪಿಕೊಂಡ ವೀಡಿಯೊವನ್ನು ಹಂಚಿಕೊಂಡಿದೆ.
ಯಾರು ಒತ್ತೆಯಾಳನ್ನು ಅಪಹರಿಸಿ ಅವರನ್ನು ಗಾಜಾಕ್ಕೆ ಕರೆತರುತ್ತಾರೋ ಅವರಿಗೆ 10,000 ಅಮೆರಿಕನ್ ಡಾಲರ್ ಸ್ಟೈಫಂಡ್ ಮತ್ತು ಅಪಾರ್ಟ್ಮೆಂಟ್ ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು ಎಂದು ಸೆರೆಹಿಡಿಯಲಾದ ಹಮಾಸ್ ಭಯೋತ್ಪಾದಕ ವೀಡಿಯೊದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.ಆದರೆ ವೀಡಿಯೊದ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯವಾಗಲಿಲ್ಲ.
ವಯಸ್ಸಾದ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ನಿರ್ದಿಷ್ಟವಾಗಿ ಹೇಳಲಾಗಿದೆ ಎಂದು ಸೆರೆಸಿಕ್ಕ ಹಮಾಸ್ ಭಯೋತ್ಪಾದಕರು ಬಹಿರಂಗಪಡಿಸಿದ್ದಾರೆ. “ಮನೆಗಳನ್ನು ಖಾಲಿ ಮಾಡಿ ಮತ್ತು ಸಾಧ್ಯವಾದಷ್ಟು ಕೈದಿಗಳನ್ನು ಅಪಹರಿಸಿ” ಎಂದು ಅವರು ತಮ್ಮ ಮೇಲಧಿಕಾರಿಗಳು ಆದೇಶಿಸಿದ್ದರು ಎಂದು ಹೇಳಿದ್ದಾರೆ.
ಭಯೋತ್ಪಾದಕ ತಾನು ಆಗಲೇ ಸತ್ತಿದ್ದ ಇಸ್ರೇಲಿ ಮಹಿಳೆ ಮೇಲೆ ಗುಂಡು ಹಾರಿಸಿದಾಗ ತನ್ನ ಕಮಾಂಡರ್ ‘ಗುಂಡುಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ತನ್ನ ಮೇಲೆ ಕೂಗಾಡಿದ್ದ ಎಂದು ಹಮಾಸ್ ಉಗ್ರ ಬಹಿರಂಗಪಡಿಸಿದ್ದಾನೆ. “ಅವಳ (ಒಬ್ಬ ಮೃತ ಮಹಿಳೆ) ನಾಯಿ ಹೊರಬಂದಿತು ಮತ್ತು ನಾನು ಅದನ್ನು ಗುಂಡಿಟ್ಟು ಕೊಂದೆ ಎಂದು ಭಯೋತ್ಪಾದಕನು ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಅವಳ ದೇಹವು ನೆಲದ ಮೇಲೆ ಬಿದ್ದಿತ್ತು, ನಾನು ಅವಳಿಗೂ ಗುಂಡು ಹಾರಿಸಿದೆ. ಕಮಾಂಡರ್ ನನ್ನ ಮೇಲೆ ಕೂಗಾಡಿದ. ನಾನು ಶವದ ಮೇಲೆ ಗುಂಡುಗಳನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ಆತ ಕೋಪಗೊಂಡ ಎಂದು ಹೇಳಿದ್ದಾನೆ.
ದಾಳಿಯ ಸಂದರ್ಭದಲ್ಲಿ ಎರಡು ಮನೆಗಳನ್ನು ಸುಟ್ಟುಹಾಕಿದ್ದಾಗಿ ಮತ್ತೊಬ್ಬ ಭಯೋತ್ಪಾದಕ ತಪ್ಪೊಪ್ಪಿಕೊಂಡಿದ್ದಾನೆ. “ನಾವು ಮಾಡಲು ಬಂದದ್ದನ್ನು ಮುಗಿಸಿದ್ದೇವೆ ಮತ್ತು ನಂತರ ಎರಡು ಮನೆಗಳನ್ನು ಸುಟ್ಟುಹಾಕಿದ್ದೇವೆ” ಎಂದು ಆತ ಹೇಳಿದ್ದಾನೆ.
ಹೆಚ್ಚು ವಯಸ್ಸಾದ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸುವಂತೆ ತನಗೆ ಮತ್ತು ತನ್ನಂತಹ ಇತರರಿಗೆ ಸೂಚಿಸಲಾಗಿದೆ ಎಂದು ಆ ವ್ಯಕ್ತಿ ಮತ್ತಷ್ಟು ತಿಳಿಸುತ್ತಾನೆ. “ಮನೆಗಳನ್ನು ಖಾಲಿ ಮಾಡಲು ಮತ್ತು ಸಾಧ್ಯವಾದಷ್ಟು ಕೈದಿಗಳನ್ನು ಅಪಹರಿಸಲು” ತಮಗೆ ಸೂಚಿಸಲಾಯಿತು ಎಂದು ಭಯೋತ್ಪಾದಕನೊಬ್ಬ ವೀಡಿಯೊದಲ್ಲಿ ಹೇಳಿದ್ದಾನೆ.
ಹಮಾಸ್ ಗಾಜಾ ನಗರದಲ್ಲಿ ಕನಿಷ್ಠ 222 ಇಸ್ರೇಲಿಗಳನ್ನು ಗಾಜಾಕ್ಕೆ ಒಯ್ದು ಒತ್ತೆಯಾಳಾಗಿ ಇರಿಸಿಕೊಂಡಿದೆ. ಮತ್ತು ಅವರಲ್ಲಿ ನಾಲ್ವರನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 7 ರಂದು ಇಸ್ರೇಲ್‌ನಿಂದ ಅಪಹರಿಸಿದ ನಂತರ ಸೋಮವಾರ ತಡರಾತ್ರಿ ಇನ್ನಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು. ಪ್ಯಾಲೇಸ್ತಿನಿಯನ್ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪು ಯೋಚೆವ್ಡ್ ಲಿಫ್‌ಶಿಟ್ಜ್ ಮತ್ತು ನುರಿತ್ ಕೂಪರ್ ಎಂಬ ಇಬ್ಬರು ಹಿರಿಯ ಮಹಿಳೆಯರನ್ನು “ಬಲವಾದ ಮಾನವೀಯ” ಕಾರಣಗಳನ್ನು ಉಲ್ಲೇಖಿಸಿ ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ.
ಈ ಇಬ್ಬರು ಮಹಿಳೆಯರು ನಿರ್ ಓಜ್ ಕಿಬ್ಬುಟ್ಜ್‌ನಲ್ಲಿ ವಾಸಿಸುತ್ತಿದ್ದರು ಹಾಗೂ 85 ಮತ್ತು 79 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ ಮತ್ತು ಇಸ್ರೇಲ್‌ಗೆ ಮರಳಲು ಸಹಾಯ ಮಾಡಿದ್ದಕ್ಕಾಗಿ ರೆಡ್‌ಕ್ರಾಸ್‌ಗೆ ಧನ್ಯವಾದ ತಿಳಿಸಿದ್ದಾರೆ.
ಅವರನ್ನು ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದಾಟಲು ಕರೆದೊಯ್ಯಲಾಯಿತು ಮತ್ತು ನಂತರ ಇಸ್ರೇಲ್‌ಗೆ ಹಿಂತಿರುಗಿಸಲಾಯಿತು.
ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾದ ಯೋಜಿತ ಆಕ್ರಮಣವನ್ನು ತಡೆಹಿಡಿಯುವುದನ್ನು ಪರಿಗಣಿಸಲು ಇಸ್ರೇಲ್‌ಗೆ ತಿಳಿಸಲಾಗಿದೆ. ಆದರೆ ಇಸ್ರೇಲಿ ಸರ್ಕಾರವು ಹಮಾಸ್‌ಗೆ ಹೆಚ್ಚಿನ ಸಮಯ ನೀಡಿದರೆ ಅದು ದೀರ್ಘಕಾಲದ ಆಕ್ರಮಣಕ್ಕೆ ತಯಾರಿ ಮಾಡಲು ಮಾತ್ರ ಅನುವು ಮಾಡಿಕೊಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.ಹಮಾಸ್ ದಾಳಿಯ ನಂತರ ನಾಗರಿಕ “ಭದ್ರತಾ ದಳಗಳಿಗೆ” ಶಸ್ತ್ರಾಸ್ತ್ರಗಳನ್ನು ನೀಡುವುದರ ಜೊತೆಗೆ ಖಾಸಗಿ ಸೇನಾಪಡೆಗಳನ್ನು ರಚಿಸುವ ಬಗ್ಗೆ ಇಸ್ರೇಲ್ ಎಚ್ಚರಿಸಿದೆ.
ಅಕ್ಟೋಬರ್ 7 ರ ದಾಳಿಯ ತನಿಖೆಯ ಸಂದರ್ಭದಲ್ಲಿ ಅಪರಾಧಗಳ ಸ್ವರೂಪ ಮತ್ತು ವಿಧಾನವನ್ನು ವಿವರಿಸುವ ಹಲವಾರು “ಥೀಮ್‌ಗಳು” ಪದೇ ಪದೇ ಕಾಣಿಸಿಕೊಂಡಿವೆ ಎಂದು ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ(ISA) ಹೇಳಿಕೆಯೊಂದಿಗೆ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಹಮಾಸ್‌ನ ಸೇನಾ ವಿಭಾಗದ ಹಿರಿಯ ಕಮಾಂಡರ್‌ಗಳು ತಲೆಮರೆಸಿಕೊಂಡು ಸೂಚನೆಗಳನ್ನು ನೀಡುತ್ತಿರುವಾಗ, ವೀಡಿಯೊಗಳಲ್ಲಿ ತಪ್ಪೊಪ್ಪಿಕೊಂಡ ಬಾಡಿಗೆ ಹಮಾಸ್ ಉಗ್ರರು ಮುಂಚೂಣಿಯಲ್ಲಿದ್ದರು ಎಂದು ISA ಹೇಳಿದೆ.
ಇಸ್ರೇಲ್-ಹಮಾಸ್ ಯುದ್ಧವು ಮಂಗಳವಾರ 17 ನೇ ದಿನಕ್ಕೆ ಕಾಲಿಟ್ಟಿದೆ. ದಕ್ಷಿಣ ಇಸ್ರೇಲ್‌ನ ಗಾಜಾ ಗಡಿಭಾಗದ ಇಸ್ರೇಲ್ ನಾಗರಿಕರ ಮೇಲೆ ಹಮಾಸ್‌ನ ಅಕ್ಟೋಬರ್ 7ರ ದಾಳಿ ನಡೆಸಿ 1,400 ಕ್ಕಿಂತ ಹೆಚ್ಚು ಜನರು ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಎರಡು ವಾರಗಳಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ ಸಾವಿನ ಸಂಖ್ಯೆ 5,000 ಕ್ಕೆ ಏರಿದೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ ಈಗ 6,400 ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ