ಪ್ಯಾಲೆಸ್ತೀಯನ್ನರ ಬೆಂಬಲಿಸಿ ನಡೆದ ಐಯುಎಂಎಲ್‌ ಸಮಾವೇಶದಲ್ಲಿ ಹಮಾಸ್ ‘ಭಯೋತ್ಪಾದಕ ಗುಂಪು’ ಎಂದ ಶಶಿ ತರೂರ್ : ಹಲವರ ವಿರೋಧದ ನಂತರ‌ ಸ್ಪಷ್ಟನೆ

ತಿರುವನಂತಪುರಂ: ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್‌ ದಾಳಿಯನ್ನು ʼಭಯೋತ್ಪಾದಕರ ದಾಳಿʼ ಎಂದು ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಹೇಳಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೇರಳದ ಐಯುಎಂಎಲ್ ಮತ್ತು ಹಮಾಸ್ ಪರ ಕೆಲವು ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಂತರ ಈ ಬಗ್ಗೆ ತರೂರ್‌ ಸ್ಪಷ್ಟನೆ ನೀಡಿದ್ದು, ನಾನು ಯಾವಾಗಲೂ ಪ್ಯಾಲೆಸ್ತೀನ್ ಜನರೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಅವರು ಹಮಾಸ್ ಅನ್ನು ಭಯೋತ್ಪಾದಕ ಗುಂಪು ಎಂದು ಕರೆದರು, ಆದರೆ ಗಾಜಾದ ಮೇಲೆ ನಂತರ ಇಸ್ರೇಲ್ ನಡೆಸಿದ ನಿರಂತರ ಬಾಂಬ್ ದಾಳಿಯನ್ನೂ ಖಂಡಿಸಿದರು.
ತರೂರ್ ಹೇಳಿದ್ದೇನು?
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನ ಪ್ರಮುಖ ಮಿತ್ರ ಪಕ್ಷವಾದ ಐಯುಎಂಎಲ್ (IUML) ಗುರುವಾರ (ಅಕ್ಟೋಬರ್ 26) ಉತ್ತರ ಕೋಝಿಕೋಡ್‌ನಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ನಾಗರಿಕರ ವಿವೇಚನಾರಹಿತ ಹತ್ಯೆಗಳನ್ನು ಖಂಡಿಸಿ ಬೃಹತ್ ರ್ಯಾಲಿಯನ್ನು ಆಯೋಜಿಸಿತ್ತು. ರ್ಯಾಲಿಯಲ್ಲಿ ಮಾತನಾಡಿದ ಮುಖ್ಯ ಅತಿಥಿಯಾಗಿದ್ದ ತರೂರ್ ಅವರು, “ಇದು ಮಾನವ ಹಕ್ಕುಗಳ ರಕ್ಷಣೆ ಮತ್ತು ಶಾಂತಿಯ ಪರವಾಗಿ ಭಾರತದಲ್ಲಿ ಮತ್ತು ಬಹುಶಃ ಪ್ರಪಂಚದಾದ್ಯಂತ ನಾವು ನೋಡಿದ ಅತ್ಯಂತ ಮಹತ್ವದ ರಾಜಕೀಯ ರ್ಯಾಲಿಗಳಲ್ಲಿ ಒಂದಾಗಿರಬಹುದು. ಇದು ಶಾಂತಿಗಾಗಿ ರ್ಯಾಲಿಯಾಗಿದೆ” ಎಂದು ಹೇಳಿದರು. ಕಳೆದ ಹಲವು ದಿನಗಳಿಂದ ಈ ಯುದ್ಧವನ್ನು “ಅತ್ಯಂತ ಸಂಕಷ್ಟದ ಮಾನವ ಹಕ್ಕುಗಳ ದುರಂತಗಳಲ್ಲಿ ಒಂದಾಗಿದೆ” ಎಂದು ಕರೆದರು.

“19 ದಿನಗಳಿಂದ ಜಗತ್ತು ಅತ್ಯಂತ ಕೆಟ್ಟ ಮಾನವ ಹಕ್ಕುಗಳ ದುರಂತಗಳನ್ನು ನೋಡುತ್ತಿದೆ. ನಾವು ಅತ್ಯಂತ ಭೀಕರ ದುರಂತವನ್ನು ನೋಡುತ್ತಿದ್ದೇವೆ. ಭಯೋತ್ಪಾದಕರು ಇಸ್ರೇಲ್ ದಾಳಿ ನಡೆಸಿದರು, ಹಮಾಸ್ ಒಂದು ಭಯೋತ್ಪಾದಕ ಗುಂಪು. ನಂತರ ಇಸ್ರೇಲ್ ಗಾಜಾಕ್ಕೆ ಆಹಾರ, ನೀರು ಮತ್ತು ವಿದ್ಯುತ್ ನೀಡುವುದನ್ನು ನಿಲ್ಲಿಸಿತು. ನಾವು ಇಸ್ರೇಲ್ ಮೇಲೆ ಬಾಂಬ್ ದಾಳಿಯನ್ನು ಖಂಡಿಸುತ್ತೇವೆ. ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರಕ್ಕಾಗಿ ನಾವು ಯಾವಾಗಲೂ ನಿಂತಿದ್ದೇವೆ” ಎಂದು ತರೂರ್ ಗುರುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಯೋಜಿಸಿದ್ದ ಕೋಝಿಕ್ಕೋಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದರು.
“ಅಕ್ಟೋಬರ್ 7 ರಂದು, ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ಮಾಡಿದರು ಮತ್ತು 1,400 ಜೀವಗಳನ್ನು ಬಲಿ ತೆಗೆದುಕೊಂಡರು. ಇನ್ನೂರು ವ್ಯಕ್ತಿಗಳನ್ನು ಒತ್ತೆಯಾಳಾಗಿ ತೆಗೆದುಕೊಳ್ಳಲಾಯಿತು. ಪ್ರತಿಕ್ರಿಯೆಯಾಗಿ ಇಸ್ರೇಲ್ 6,000 ಜನರನ್ನು ಕೊಂದಿತು. ಬಾಂಬ್ ದಾಳಿ ಮುಂದುವರೆದಿದೆ” ಎಂದು ತೇರೂರ್ ಹೇಳಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಒಪ್ಪಂದದ ನಂತರ ರಾಹುಲ್ ಗಾಂಧಿ ಭಾರತ ಜೋಡಿ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡ ಅಖಿಲೇಶ ಯಾದವ್

ಆರಂಭದಲ್ಲಿ ಇಸ್ರೇಲ್‌ನಲ್ಲಿ ಮತ್ತು ನಂತರ ಗಾಜಾದಲ್ಲಿ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತರೂರ್ ಹೇಳಿದರು. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಬಹುಮುಖಿ ದಾಳಿಯನ್ನೂ ಖಂಡಿಸಿದರು. ಇದು ಕೇವಲ ಮುಸ್ಲಿಮರಿಗೆ ಸೀಮಿತವಾದ ಸಮಸ್ಯೆಯಲ್ಲ, ಮೂಲಭೂತ ಮಾನವ ಹಕ್ಕುಗಳ ವಿಷಯವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಯಾರ ಧರ್ಮವನ್ನು ಕೇಳದೆ ಬಾಂಬ್ ಬೀಳುತ್ತದೆ. ಪ್ಯಾಲೆಸ್ತೀನ್ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಒಂದರಿಂದ ಎರಡು ಪ್ರತಿಶತದಷ್ಟಿದ್ದಾರೆ. ಅವರೂ ಈ ಸಂಘರ್ಷದಲ್ಲಿ ನಾಶವಾಗಿದ್ದಾರೆ” ಎಂದು ಅವರು ಪ್ರತಿಪಾದಿಸಿದರು.

ತರೂರ್ ವಿರುದ್ಧ ಆಕ್ರೋಶ
ತರೂರ್ ಅವರ ಕೆಲವು ಹೇಳಿಕೆಗಳು ಇಸ್ರೇಲ್ ಪರವಾಗಿದ್ದು, ಅದು “ಭಯೋತ್ಪಾದಕ ರಾಷ್ಟ್ರ” ಎಂದು ಅವರು ಒಪ್ಪಿಕೊಳ್ಳುವುದಿಲ್ಲ ಎಂದು ಸಿಪಿಐ(ಎಂ) ನಾಯಕ ಮತ್ತು ಮಾಜಿ ಶಾಸಕ ಎಂ ಸ್ವರಾಜ್ ಆರೋಪಿಸಿದ್ದಾರೆ. ತಿರುವನಂತಪುರಂ ಸಂಸದರನ್ನು ತರಾಟೆಗೆ ತೆಗೆದುಕೊಂಡ ಸ್ವರಾಜ್, ಅವರು ಮಾಡಿದ್ದು ಐಯುಎಂಎಲ್ ವೆಚ್ಚದಲ್ಲಿ ಇಸ್ರೇಲ್ ಒಗ್ಗಟ್ಟಿನ ಸಭೆ ಎಂದು ಟೀಕಿಸಿದರು.
ಎಲ್‌ಡಿಎಫ್ ಶಾಸಕ ಕೆ.ಟಿ. ಜಲೀಲ್ ಅವರು ತರೂರ್ ಅವರನ್ನು ಟೀಕಿಸಿದರು ಮತ್ತು ಅವರ ಭಾಷಣವು ಇಸ್ರೇಲ್ ಪರವಾದ ರ್ಯಾಲಿ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಆರೋಪಿಸಿದರು.
ತರೂರ್ ಸ್ಪಷ್ಟನೆ
ಹಮಾಸ್ ಪರ ಕೆಲವು ಗುಂಪುಗಳು ಮತ್ತು ಎಡ ಕಾರ್ಯಕರ್ತರ ವಿಭಾಗದಿಂದ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಅಸಮಾಧಾನವನ್ನು ಎದುರಿಸಿದ ನಂತರ ತರೂರ್ ಸ್ಪಷ್ಟೀಕರಣವನ್ನು ನೀಡಿದ್ದಾರೆ ಮತ್ತು ನಾನು ಯಾವಾಗಲೂ ಪ್ಯಾಲೆಸ್ತೀನ್ ಜನರೊಂದಿಗೆ ಇದ್ದೇನೆ ಮತ್ತು ತಮ್ಮ ಭಾಷಣದ ಕೇವಲ ಒಂದು ವಾಕ್ಯವನ್ನಿಟ್ಟುಕೊಂಡು ಅಪಪ್ರಚಾರವನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿದರು.
“ನನ್ನ 32 ನಿಮಿಷಗಳ ಭಾಷಣದಲ್ಲಿ, ಪ್ರಸ್ತುತ ಹಿಂಸಾಚಾರವನ್ನು ಪ್ರಚೋದಿಸಿದ ಅಕ್ಟೋಬರ್ 7 ರ ಭಯೋತ್ಪಾದಕ ದಾಳಿ ಹಾಗೂ ನಂತರದ ಅಸಮಂಜಸ ಪ್ರತೀಕಾರ”ವನ್ನು ನಾನು ಖಂಡಿಸಿದ್ದರಲ್ಲಿ ಕೇವಲ 25 ಸೆಕೆಂಡುಗಳ ಭಾಷಣವನ್ನು ಮಾತ್ರ ಆಯ್ಕೆ ಮಾಡಿ ನನ್ನ ಮೇಲೆ ನಡೆಸಿದ ದಾಳಿಯ ಬಗ್ಗೆ ತಿಳಿದು ನಾನು ಸ್ವಲ್ಪ ಬೆಚ್ಚಿಬಿದ್ದಿದ್ದೇನೆ ಎಂದು ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಮಲಯಾಳಂನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಶಶಿ ತರೂರ್ ಹೇಳಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಬಿಡುಗಡೆ ಮಾಡಿರುವ ಕಿರು ವೀಡಿಯೋದಲ್ಲಿ ನಾನು ಯಾವಾಗಲೂ ಪ್ಯಾಲೆಸ್ತೀನ್ ಜನರೊಂದಿಗೆ ಇದ್ದೇನೆ ಎಂದು ತರೂರ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಸಮುದ್ರದಲ್ಲಿ ಮುಳುಗಿ ನೀರಿನೊಳಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ...!

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement