ಫೇಸ್‌ಬುಕ್ ಲೈವ್‌ ನಡೆಯುತ್ತಿದ್ದಾಗಲೇ ಉದ್ಧವ್‌ ಠಾಕ್ರೆ ಬಣದ ಮುಖಂಡನ ಗುಂಡಿಕ್ಕಿ ಹತ್ಯೆ..

ಮುಂಬೈ: ಆಘಾತಕಾರಿ ಘಟನೆಯಲ್ಲಿ ಶಿವಸೇನೆಯ ಉದ್ಧವ ಸೇನೆ ಬಣದ ನಾಯಕ ಅಭಿಷೇಕ ಘೋಷಲ್ಕರ್ ಅವರನ್ನು ವೈಯಕ್ತಿಕ ದ್ವೇಷದ ಕಾರಣ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಾಹಿತಿ ಪ್ರಕಾರ ಮೂರ್ನಾಲ್ಕು ಸುತ್ತಿನ ಗುಂಡಿನ ಚಕಮಕಿ ನಡೆದಿದೆ. ಘಟನೆಯ ನಂತರ, ಘೋಷಲ್ಕರ್ ಅವರನ್ನು ತಕ್ಷಣವೇ ಬೊರಿವಲಿ ಪಶ್ಚಿಮದ ಕರುಣಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು … Continued

ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಅಧಿಕಾರ ಯಾರಿಗೆ : ಮೋದಿಗೋ ? ವಿಪಕ್ಷಗಳ ಮೈತ್ರಿಕೂಟಕ್ಕೋ..? : ಇಂಡಿಯಾ ಟುಡೇ ಮೂಡ್‌ ಆಫ್‌ ದಿ ನೇಶನ್‌ ಸರ್ವೆಯಲ್ಲಿ ಬಹಿರಂಗ

ನವದೆಹಲಿ; 2024 ರ ಲೋಕಸಭಾ ಚುನಾವಣೆಯನ್ನು ಸಮೀಪಿಸುತ್ತಿರುವಾಗ, ಮೂಡ್ ಆಫ್ ದಿ ನೇಷನ್ (Mood of the Nation) ಸಮೀಕ್ಷೆಯು ಈಗಲೇ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಿದೆ. ಆದಾಗ್ಯೂ, ಇದು … Continued

ಬಿಜೆಪಿ ಅಧ್ಯಕ್ಷ ನಡ್ಡಾ-ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಭೇಟಿಯಾದ ಸಂಸದೆ ಸುಮಲತಾ ಅಂಬರೀಷ: ಮಂಡ್ಯ ಕ್ಷೇತ್ರದ ಬಗ್ಗೆ ಮಹತ್ವದ ಚರ್ಚೆ..!

ಬೆಂಗಳೂರು: ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಷ ಅವರು ಗುರುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರನ್ನು ಭೇಟಿಯಾಗಿದ್ದು, ಮಂಡ್ಯದ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದ ಸಮಲತಾ ಅಂಬರೀಷ, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ … Continued

ಈಗಲೇ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ 24 ಸ್ಥಾನಗಳಲ್ಲಿ ಗೆಲ್ಲಬಹುದು.; ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ನವದೆಹಲಿ: ಈಗಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯ ಎನ್‌ಡಿಎ 24 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೇ ‘ಮೂಡ್ ಆಫ್ ದಿ ನೇಷನ್‌ ಸಮೀಕ್ಷೆ’ ತಿಳಿಸಿದೆ. ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ 2023 ಡಿಸೆಂಬರ್ 15 ರಿಂದ 2024 ಜನವರಿ 28 ರ ನಡುವೆ ನಡೆಸಿದ ಚುನಾವಣಾ … Continued

10 ವರ್ಷಗಳಲ್ಲಿ ದೇಶದ ಆರ್ಥಿಕತೆ ನಿಷ್ಕ್ರಿಯಗೊಳಿಸಿದ ಯುಪಿಎ ಸರ್ಕಾರ : ಮೋದಿ ಸರ್ಕಾರದ ಶ್ವೇತಪತ್ರ

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರ್ಮನ್ ಅವರು ಗುರುವಾರ (ಫೆಬ್ರವರಿ 8) ಲೋಕಸಭೆಯಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ದ ಪ್ರತಿಯನ್ನು ಮಂಡಿಸಿದ್ದಾರೆ. ಯುಪಿಎ ಅವಧಿಯ 10 ವರ್ಷಗಳಲ್ಲಿ ಇದ್ದ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಮೋದಿ ಸರ್ಕಾರ ಬಂದ ನಂತರ ಈವರೆಗಿನ 10 ವರ್ಷಗಳಲ್ಲಿನ ದೇಶದ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣಾ ವರದಿಯೊಂದನ್ನು ಕೇಂದ್ರ ಸರ್ಕಾರ ಶ್ವೇತಪತ್ರದ … Continued

ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ

ಉಡುಪಿ : ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಿದ್ದ ಪರಶುರಾಮ ಥೀಮ್ ಪಾರ್ಕ್ ಹಗರಣವನ್ನುಸಿಒಡಿ ತನಿಖೆಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಶಿಫಾರಸ್ಸಿನ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಹಗರಣದ ಕುರಿತು ಹೋರಾಟಗಳು ಪ್ರತಿಭಟನೆಗಳು ನಡೆದಿದ್ದವು. ಕಾಂಗ್ರೆಸ್ ಕಾರ್ಯಕರ್ತರು … Continued

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಅಲ್ಪಸಂಖ್ಯಾತ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕ್

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ಅವರು ಕಳೆದ 48 ವರ್ಷಗಳಿಂದ ಕಾಂಗ್ರೆಸ್‌ ಸದಸ್ಯರಾಗಿದ್ದರು. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, “ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಮತ್ತು ಇದು 48 ವರ್ಷಗಳ ಮಹತ್ವದ … Continued

ಕರ್ನಾಟಕದಲ್ಲಿ ಹುಕ್ಕಾ ಬಾರ್, ಮಾರಾಟ, ಬಳಕೆ ಸಂಪೂರ್ಣ ನಿಷೇಧ

ಬೆಂಗಳೂರು : ಕರ್ನಾಟಕದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ, ಸ್ವಾಧೀನ ಮತ್ತು ಅವುಗಳ ಜಾಹೀರಾತಿನ ಮೇಲೆ ಬುಧವಾರದಿಂದ ಜಾರಿಗೆ ಬರುವಂತೆ ಆರೋಗ್ಯ ಇಲಾಖೆ ತಕ್ಷಣದಿಂದ ನಿಷೇಧಿಸಿದೆ. ಕರ್ನಾಟಕ ಆರೋಗ್ಯ ಇಲಾಖೆಯು ಹುಕ್ಕಾ ಮಾರಾಟ ಮತ್ತು ಸೇವನೆ ನಿಷೇಧಿಸಿ ಬುಧವಾರ ಅಧಿಸೂಚನೆ ಹೊರಡಿಸಿದೆ. ‘ಸಾರ್ವಜನಿಕ ಆರೋಗ್ಯ’ವನ್ನು ಉಲ್ಲೇಖಿಸಿ ಸರ್ಕಾರವು ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಮಾರಾಟವನ್ನು … Continued

ಮನೆ ಬದಲಿಸುವ ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ : ‘ಗೃಹ ಜ್ಯೋತಿ’ ನಿಯಮದಲ್ಲಿ ಬದಲಾವಣೆಗೆ ಸೂಚನೆ

ಬೆಂಗಳೂರು : ಇಂಧನ ಇಲಾಖೆಯು ಗೃಹಜ್ಯೋತಿಯ ಫ‌ಲಾನುಭವಿಗಳು ಬಾಡಿಗೆ ಮನೆ ಅಥವಾ ಮನೆ ಬದಲಾಯಿಸಿದ ಬಳಿಕವೂ ಗೃಹಜ್ಯೋತಿ ಯೋಜನೆ ಲಾಭ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಗೃಹ ಜ್ಯೋತಿ ಯೋಜನೆಯಿಂದ ಗ್ರಾಹಕರು ತಮ್ಮ ಖಾತೆಗಳನ್ನು ಡಿ-ಲಿಂಕ್ ಮಾಡಲು, ವಿಳಾಸ ಬದಲಾವಣೆ ಮತ್ತು ಶಿಫ್ಟಿಂಗ್‌ ನಂತರ ಮರು ಲಿಂಕ್ ಮಾಡಲು ಅವಕಾಶ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಿದ್ಯುತ್ ಸರಬರಾಜು … Continued

ಸತತ 6ನೇ ಬಾರಿಗೆ ರೆಪೋ ದರ ಬದಲಾವಣೆ ಮಾಡದ ಆರ್‌ ಬಿಐ ; ಸದ್ಯಕ್ಕೆ ಬಡ್ಡಿ ದರ ಇಳಿಕೆ ಇಲ್ಲ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋ ದರ ಏರಿಕೆ ಮಾಡದೇ ಜನರಿಗೆ ಗುಡ್‌ನ್ಯೂಸ್ ನೀಡಿದೆ. ಕಳೆದ ಮೂರು ದಿನಗಳಿಂದ ನಡೆದ ಆರ್‌ಬಿಐನ ಹಣಕಾಸು ನೀತಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ರೆಪೊ ದರ ಯಥಾಸ್ಥಿತಿ ಉಳಿಸಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. 2023-24ರ ಹಣಕಾಸು ವರ್ಷದ … Continued