ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯ ಗ್ರಹಣ ಹೇಗೆ ಕಾಣುತ್ತದೆ..? : ವೀಡಿಯೊ ಹಂಚಿಕೊಂಡ ನಾಸಾ | ವೀಕ್ಷಿಸಿ

ನ್ಯೂಯಾರ್ಕ್: ಮೆಕ್ಸಿಕೊ, ಕೆನಡಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಸೋಮವಾರ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. ನಾಸಾವು ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯಗ್ರಹಣವು ಹೇಗೆ ಕಾಣುತ್ತದೆ ಎಂದು ತೋರಿಸಲು ಅದರ ವೀಡಿಯೊ ತುಣುಕುಗಳನ್ನು ಹಂಚಿಕೊಂಡಿದೆ.
2017ರ ಬಳಿಕ ಇದು ಉತ್ತರ ಅಮೆರಿಕದ ಮೊದಲ ಪೂರ್ಣ ಗ್ರಹಣವಾಗಿದೆ. ನ್ಯೂಯಾರ್ಕ್‌ನಲ್ಲೂ ಸೂರ್ಯ ಗ್ರಹಣದ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು.

NASA ಸೂರ್ಯಗ್ರಹಣವನ್ನು ವೀಕ್ಷಿಸಲು YouTube ನಲ್ಲಿ ತನ್ನ ಅಧಿಕೃತ ಪ್ರಸಾರ ಚಾನೆಲ್‌ನಲ್ಲಿ ಆಕರ್ಷಕ ಲೈವ್ ಸ್ಟ್ರೀಮ್ ಅನ್ನು ಹಂಚಿಕೊಂಡಿದೆ. ಸುಮಾರು ಒಂದು ಶತಮಾನದಲ್ಲಿ ಮೊದಲ ಬಾರಿಗೆ, ನ್ಯೂಯಾರ್ಕ್ ರಾಜ್ಯದ ಪಶ್ಚಿಮ ಮತ್ತು ಉತ್ತರ ಪ್ರದೇಶಗಳು ಸಂಪೂರ್ಣ ಗ್ರಹಣವನ್ನು ಕಣ್ತುಂಬಿಕೊಂಡರು.
2024 ರ ಸಂಪೂರ್ಣ ಸೂರ್ಯಗ್ರಹಣವು ಐತಿಹಾಸಿಕ ಆಕಾಶ ಘಟನೆಯಾಗಿದೆ. ಏಕೆಂದರೆ ಇದು ಆಗಸ್ಟ್ 2044 ರವರೆಗೆ ಮತ್ತೆ ಅಮೆರಿಕದಾದ್ಯಂತ ಗೋಚರಿಸುವುದಿಲ್ಲ.
ಭಾರತದ ಕಾಲಮಾನ ಸೋಮವಾರ ಮಧ್ಯರಾತ್ರಿ ಸೂರ್ಯಗ್ರಹಣ ನಡೆದಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗಿಲ್ಲ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನ ಮುಂದೆ ಹಾದುಹೋಗುವಾಗ ಮತ್ತು ಭೂಮಿಯ ಮೇಲ್ಮೈಯಲ್ಲಿ ನೆರಳು ಬೀಳುವುದರಿಂದ ತಾಪಮಾನ, ಗಾಳಿಯ ವೇಗ ಮತ್ತು ಆರ್ದ್ರತೆಯಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಗ್ರಹಣ ಸಂಪೂರ್ಣವಾಗುವಾಗ ತಾಪಮಾನವು ಸುಮಾರು 10 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ.
ಪ್ಲಾಸ್ಮಾ ಎಂದು ಕರೆಯಲ್ಪಡುವ ಚಾರ್ಜ್ಡ್ ಕಣಗಳು ಬಾಹ್ಯಾಕಾಶ ಹವಾಮಾನವನ್ನು ಸೃಷ್ಟಿಸುತ್ತವೆ, ಭೂಮಿಯ ವಾತಾವರಣದ ಮೇಲಿನ ಪದರದೊಂದಿಗೆ ಇದರ ಸಂವಹನವಿರುತ್ತದೆ, ಇದನ್ನು ಅಯಾನುಗೋಳ ಎಂದು ಕರೆಯಲಾಗುತ್ತದೆ. ಅನೇಕ ಕಡಿಮೆ-ಭೂಮಿಯ ಕಕ್ಷೆಯ ಉಪಗ್ರಹಗಳು ಮತ್ತು ರೇಡಿಯೋ ತರಂಗಗಳು ಅಯಾನುಗೋಳದಲ್ಲಿ ಕಾರ್ಯನಿರ್ವಹಿಸುತ್ತವೆ, ಅಂದರೆ ಕ್ರಿಯಾತ್ಮಕ ಬಾಹ್ಯಾಕಾಶ ಹವಾಮಾನವು ಜಿಪಿಎಸ್‌ (GPS) ಮತ್ತು ದೂರದ ರೇಡಿಯೊ ಸಂವಹನಗಳ ಮೇಲೆ ಪ್ರಭಾವ ಬೀರುತ್ತದೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement