ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯ ಗ್ರಹಣ ಹೇಗೆ ಕಾಣುತ್ತದೆ..? : ವೀಡಿಯೊ ಹಂಚಿಕೊಂಡ ನಾಸಾ | ವೀಕ್ಷಿಸಿ

ನ್ಯೂಯಾರ್ಕ್: ಮೆಕ್ಸಿಕೊ, ಕೆನಡಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಸೋಮವಾರ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. … Continued

ಕೃಷ್ಣಾ ನದಿಗೆ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ವಿಜಯಪುರ: ಯುಗಾದಿ ಅಮಾವಾಸ್ಯೆ ನಿಮಿತ್ತ ಸೋಮವಾರ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನದಿ ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನದಿ ಪಾಲಾದ ಬಾಲಕರನ್ನು ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12) ಹಾಗೂ ಶ್ರೀಧರ ದೊಡ್ಡಮನಿ (10) ಎಂದು ಗುರುತಿಸಲಾಗಿದೆ. ಯುಗಾದಿ ಅಮಾವಾಸ್ಯೆ … Continued