ಇಸ್ರೇಲಿ ಮಿಲಿಟರಿ ವಾರಾಂತ್ಯದಲ್ಲಿ “ಸಂಕೀರ್ಣ ಹಗಲಿನ ಕಾರ್ಯಾಚರಣೆ”ಯಲ್ಲಿ ಗಾಜಾದಲ್ಲಿ ಹಮಾಸ್ ಸೆರೆಯಿಂದ ನಾಲ್ಕು ಒತ್ತೆಯಾಳುಗಳನ್ನು ಪಾರು ಮಾಡಿದ್ದಾರೆ.
ನಾಲ್ವರು ಒತ್ತೆಯಾಳುಗಳಲ್ಲಿ ಮೂವರನ್ನು – ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ರಕ್ಷಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಗಾಜಾದಲ್ಲಿ ಹಮಾಸ್‌ನಿಂದ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ಗೆ ಇಸ್ರೇಲಿ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು ನುಗ್ಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇಸ್ರೇಲಿ ಸೇನೆಯ ಯಮಮ್ ಘಟಕವು ಒತ್ತೆಯಾಳುಗಳಾಗಿದ್ದ ಶ್ಲೋಮಿ ಜಿವ್, ಅಲ್ಮೋಗ್ ಮೀರ್ ಜಾನ್ ಮತ್ತು ಆಂಡ್ರೆ ಕೊಜ್ಲೋವ್ ಅವರನ್ನು ಗಾಜಾದಲ್ಲಿ ಸೆರೆಯಿಂದ ರಕ್ಷಿಸಿದ ಕ್ಷಣವನ್ನು ವೀಡಿಯೊ ತೋರಿಸಿದೆ.
ಮತ್ತೊಂದು ವೀಡಿಯೊ ಒತ್ತೆಯಾಳುಗಳು ಅಧಿಕಾರಿಗಳ ಜೊತೆಗೆ ಹೆಲಿಕಾಪ್ಟರ್‌ಗೆ ಹೋಗುವುದನ್ನು ತೋರಿಸುತ್ತದೆ. ಕ್ಲಿಪ್‌ನಲ್ಲಿ, “ಗಾಜಾ ಪಟ್ಟಿಯಿಂದ ಹೆಲಿಕಾಪ್ಟರ್‌ನ ಟೇಕ್‌ಆಫ್‌ನಲ್ಲಿ ಮೂವರು ರಕ್ಷಿಸಲ್ಪಟ್ಟ ಒತ್ತೆಯಾಳುಗಳು” ಎಂದು ಬರೆಯಲಾಗಿದೆ.
ಇಸ್ರೇಲ್ ವಿರುದ್ಧದ ದಾಳಿಯ ಸಮಯದಲ್ಲಿ ನಾಲ್ವರು ಒತ್ತೆಯಾಳುಗಳಾದ ನೋವಾ ಅರ್ಗಾಮಣಿ, ಅಲ್ಮೊಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ಅಕ್ಟೋಬರ್ 7 ರಂದು ನೋವಾ ಸಂಗೀತ ಉತ್ಸವದಿಂದ ಹಮಾಸ್ ಅಪಹರಿಸಿತ್ತು.
ನೋವಾ ಅರ್ಗಾಮಣಿಯನ್ನು ಒಂದು ಸ್ಥಳದಿಂದ ರಕ್ಷಿಸಲಾಯಿತು, ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ಬೇರೆ ಅಪಾರ್ಟ್ಮೆಂಟ್ನಿಂದ ರಕ್ಷಿಸಲಾಯಿತು.
https://twitter.com/i/status/1800240482947088454
https://twitter.com/i/status/1800215768237510829
“ಸೀಡ್ಸ್ ಆಫ್ ಸಮ್ಮರ್” ಹೆಸರಿನ ಹಗಲಿನ ಕಾರ್ಯಾಚರಣೆ ಹೆಚ್ಚಿನ ಅಪಾಯದ, ಸಂಕೀರ್ಣ ಕಾರ್ಯಾಚರಣೆ” ಹಾಗೂ ಅದು ಅದರ ನಿಖರತೆಯಲ್ಲಿ “ಸರ್ಜಿಕಲ್” ಆಗಿತ್ತು ಎಂದು ಐಡಿಎಫ್ (IDF) ವಿವರಿಸಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್(IDF)ನ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ರಕ್ಷಣಾ ಕಾರ್ಯಾಚರಣೆಯನ್ನು “ನಿಖರವಾದ ಗುಪ್ತಚರ” ಬಳಸಿಕೊಂಡು ವಾರಗಳಿಂದ ಯೋಜಿಸಲಾಗಿತ್ತು ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನ ಗಾಜಾ ಮೇಲೆ ಹಮಾಸ್‌ನಿಂದ ಮಾರಣಾಂತಿಕ ದಾಳಿಯೊಂದಿಗೆ ಈ ಸಂಘರ್ಷವು ಪ್ರಾರಂಭವಾಯಿತು, ಇದರ ಪರಿಣಾಮವಾಗಿ 1,189 ಇಸ್ರೇಲಿಗಳು ಸಾವಿಗೀಡಾದರು ಮತ್ತು ಹಮಾಸ್ ಗುಂಪು 252 ಇಸ್ರೇಲಿಗಳನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡರು. ಇಸ್ರೇಲ್‌ನ ಪ್ರತಿದಾಳಿ ನಡೆಸುತ್ತಿದ್ದು, ದಾಳಿಯಲ್ಲಿ 36,801 ಜನರು ಸಾವಿಗೀಡಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವು ವರದಿ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ