ಗಾಜಿಪುರ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಮದುವೆಗೆ ವಿರೋಧಿಸಿದ ತಂದೆ-ತಾಯಿ ಮತ್ತು ಸಹೋದರನನ್ನು ಕೊಲೆ ಮಾಡಿದ ಆರೋಪದ ಮೇಲೆ ಗಾಜಿಪುರದ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 7-8 ರ ರಾತ್ರಿ ನಂದಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ನಡೆದ ಕೊಲೆಗಳಿಗೆ ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಆಯುಧದಿಂದ ಆತನ ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್ (40) ಮತ್ತು ಹಿರಿಯ ಸಹೋದರ ರಾಮ ಆಶಿಶ್ ಬಿಂದ್ (20) ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಗಾಜಿಪುರ ಪೊಲೀಸ್ ವರಿಷ್ಠಾಧಿಕಾರಿ ಓಂವಿರ್ ಸಿಂಗ್ ತಿಳಿಸಿದ್ದಾರೆ. ಆರೋಪಿ ಬಾಲಕ ನೀಡಿದ ಮಾಹಿತಿ ಆಧರಿಸಿ ಆಯುಧ ವಶಪಡಿಸಿಕೊಳ್ಳಲಾಗಿದೆ.
ಕೊಲೆಗೆ ಹಲವು ದಿನಗಳ ಮೊದಲೇ ಯೋಜನೆ ರೂಪಿಸಿದ್ದಾಗಿ ಬಾಲಕ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಅದಕ್ಕಾಗಿ ಆತ ‘ಖುರ್ಪಾ’ (ಹುಲ್ಲು ಮತ್ತು ಭತ್ತ ಕಡಿಯಲು ಬಳಸುವ ಕೃಷಿ ಉಪಕರಣ) ತಂದು ಇಟ್ಟುಕೊಂಡಿದ್ದ.ವ ಆರಂಭದಲ್ಲಿ ಜುಲೈ 7 ರಂದು ಕೊಲೆಗಳನ್ನು ನಡೆಸಲು ಪ್ರಯತ್ನಿಸಿದ. ಆದರೆ ಧೈರ್ಯದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಭಾನುವಾರ ರಾತ್ರಿ ಆತ ತನ್ನ ಸಹೋದರ ರಾಮ ಆಶಿಶ್ ಜೊತೆ ಗ್ರಾಮದ ನಡೆಯುತ್ತಿದ್ದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ವಾಪಸಾಗಿದ್ದರು.
ಬುಧವಾರ ಮಧ್ಯರಾತ್ರಿ ಕುಟುಂಬವು ಮಲಗಿದ್ದಾಗ, ಮದ್ಯ ಸೇವಿಸಿದ ಬಾಲಕ ತನ್ನ ತಂದೆ, ತಾಯಿ ಮತ್ತು ಸಹೋದರನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆಗಳನ್ನು ಮಾಡಿದ ನಂತರ, ಕೊಲೆ ಮಾಡಲು ಬಳಿಸಿದ ‘ಖುರ್ಪಾ’ವನ್ನು ಹತ್ತಿರದ ಮೈದಾನದಲ್ಲಿ ಬಚ್ಚಿಟ್ಟು ಮತ್ತೆ ಆರ್ಕೆಸ್ಟ್ರಾ ನೋಡಲು ಹೋಗಿದ್ದ.
ಬುಧವಾರ ನಸುಕಿನ ಸುಮಾರಿಗೆ ಮನೆಗೆ ಬಂದು ಕೂಗಿಕೊಂಡಿದ್ದಾನೆ. ತನ್ನ ಮನೆಯವರನ್ನು ಯಾರೋ ಕೊಂದು ಹೋಗಿದ್ದಾಗಿ ಕರೆ ಮಾಡಿ ಸ್ಥಳೀಯರಿಗೆ ತಿಳಿಸಿದ್ದಾನೆ. ನಂತರ, ಸಾವಿಗೀಡಾದ ಮುನ್ಷಿ ಬಿಂದ್ ಅವರ ಸಹೋದರ, ರಾಮಪ್ರಕಾಶ ಬಿಂದ್ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಪೊಲೀಸರು ವಿಶೇಷ ಕಾರ್ಯಾಚರಣೆ ತಂಡ ಮತ್ತು ನಂದಗಂಜ್ ಪೊಲೀಸರು ಘಟನೆ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿದರು. ಸ್ಥಳೀಯರನ್ನು ಪ್ರಶ್ನಿಸಿದರು ಮತ್ತು ವಿಚಾರಣೆಗಾಗಿ ಹುಡುಗನನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಹಲವಾರು ಸಾಕ್ಷ್ಯವನ್ನು ಸಂಗ್ರಹಿಸಿದರು. ನಂತರ ಬಾಲಕನನ್ನು ವಶಕ್ಕೆ ಪಡೆಯಲಾಯಿತು. ಈ ಸಮಯದಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ