ಬಾಂಗ್ಲಾದೇಶದಲ್ಲಿ ದಂಗೆ | ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ದೆಹಲಿಯ ಬಳಿ ಬಂದಿಳಿದ ಶೇಖ್ ಹಸೀನಾ ; ಅಜಿತ ದೋವಲ್ ಭೇಟಿ

ನವದೆಹಲಿ: ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಸೋಮವಾರ ಸಂಜೆ ದೆಹಲಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ.
ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದರು. ಕೆಲವು ಗಂಟೆಗಳ ಹಿಂದೆ 76 ವರ್ಷ ವಯಸ್ಸಿನ ಹಾಗೂ ಐದು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್‌ ಹಸೀನಾ ಅವರು, ಆ ದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗೆ ನೀಡಿದ ಮೀಸಲಾತಿ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವಿಗೀಡಾದ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಏರ್ ಆಫೀಸರ್ ಕಮಾಂಡಿಂಗ್ (AOC) ಸಂಜಯ ಚೋಪ್ರಾ ಅವರು ಶೇಖ್ ಹಸೀನಾ ಅವರನ್ನು ವಾಯು ನೆಲೆಯಲ್ಲಿ ಬರಮಾಡಿಕೊಂಡರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಹಿಂಡನ್ ವಾಯುನೆಲೆಯಲ್ಲಿ ಶೇಖ್ ಹಸೀನಾ ಅವರನ್ನು ಭೇಟಿಯಾದರು. ಗಮನಾರ್ಹವಾಗಿ, ಭಾರತವು ಯಾವಾಗಲೂ ಶೇಖ್ ಹಸೀನಾಳನ್ನು ಸ್ನೇಹಿತ ಎಂದು ಪರಿಗಣಿಸಿದೆ ಮತ್ತು ಅವಾಮಿ ಲೀಗ್ ಆಡಳಿತದಲ್ಲಿ ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದೆ.
ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

ಭಾರತದ ಗಡಿ ಭದ್ರತಾ ಪಡೆ ಬಾಂಗ್ಲಾದೇಶದೊಂದಿಗಿನ ದೇಶದ 4,096 ಕಿಮೀ ಗಡಿಯುದ್ದಕ್ಕೂ ಹೆಚ್ಚಿನ ಎಚ್ಚರಿಕೆ ವಹಿಸಿದೆ. ಫೀಲ್ಡ್ ಕಮಾಂಡರ್‌ಗಳು ಯಾವುದಕ್ಕೂ ಸಿದ್ಧರಾಗಿರಲು ಆದೇಶಿಸಿದ್ದಾರೆ. ಭಾರತೀಯ ರೈಲ್ವೇ ಬಾಂಗ್ಲಾದೇಶಕ್ಕೆ ಎಲ್ಲಾ ರೈಲುಗಳನ್ನು ನಿಲ್ಲಿಸಿದೆ ಮತ್ತು ಏರ್ ಇಂಡಿಯಾ ಢಾಕಾಗೆ ತನ್ನ ಎರಡು ದೈನಂದಿನ ವಿಮಾನಗಳನ್ನು ರದ್ದುಗೊಳಿಸಿದೆ.
ಇಂಡಿಗೋ ವಿಮಾನ ಸಂಸ್ಥೆ ಮುಂದಿನ 30 ಗಂಟೆಗಳವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ; “ಢಾಕಾದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಏರ್‌ಲೈನ್ಸ್ ಹೇಳಿದೆ.
ಏತನ್ಮಧ್ಯೆ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಶೇಖ್ ಹಸೀನಾ ಅವರ ಸರ್ಕಾರಕ್ಕೆ ರಾಜೀನಾಮೆ ನೀಡಲು 45 ನಿಮಿಷಗಳ ಕಾಲಾವಕಾಶ ನೀಡಿದ ಬಾಂಗ್ಲಾದೇಶ ಸೇನೆಯು ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ದೂರದರ್ಶನದ ಭಾಷಣದಲ್ಲಿ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಝಮಾನ್ ಅವರು ಮಿಲಿಟರಿ “ಮಧ್ಯಂತರ ಸರ್ಕಾರ” ರಚಿಸುತ್ತದೆ ಮತ್ತು ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
“ಬಿಕ್ಕಟ್ಟು ಇದೆ. ನಾನು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೇನೆ ಮತ್ತು ಈ ದೇಶವನ್ನು ನಡೆಸಲು ನಾವು ಮಧ್ಯಂತರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ. ನಾನು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಮತ್ತು ನಿಮ್ಮ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸುವ ಭರವಸೆಯನ್ನು ನೀಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ದಯವಿಟ್ಟು ಹಿಂಸಾಚಾರವನ್ನು ನಿಲ್ಲಿಸಿ ಎಂದು ಸೇನಾ ಮುಖ್ಯಸ್ಥರು ತಮ್ಮ ಭಾಷಣದಲ್ಲಿ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement