ಜೆರುಸಲೇಂ : ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರನ್ನು ಗುರುವಾರ ಗಾಜಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಪಡೆಗಳು ಕೊಂದು ಹಾಕಿವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಪ್ರಕಟಿಸಿದ್ದಾರೆ.
“ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಸಾಮೂಹಿಕ ಕೊಲೆಗಾರ ಯಾಹ್ಯಾ ಸಿನ್ವಾರ್ ಅವರನ್ನು ಗುರುವಾರ ಇಸ್ರೇಲಿ ರಕ್ಷಣಾ ಪಡೆಗಳು (IDF) ಹೊಡೆದುರುಳಿಸಿದ್ದಾರೆ ಎಂದು ಕ್ಯಾಟ್ಜ್ ಮಾಧ್ಯಮಕ್ಕೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲಿ ರಕ್ಷಣಾ ಪಡೆಗಳ (IDF) ಸಹ ಅಧಿಕೃತ X ನಲ್ಲಿ ಸಿನ್ವಾರ್ ಸಾವನ್ನು ದೃಢಪಡಿಸಿದೆ. ಇಸ್ರೇಲಿ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಪ್ರಶ್ನೆಯಲ್ಲಿರುವ ದೇಹವು ಸಿನ್ವಾರ್‌ನದೇ ಎಂದು ಪರಿಶೀಲಿಸಲು ಡಿಎನ್‌ಎ ವಿಶ್ಲೇಷಣೆಯನ್ನು ನಡೆಸಿತು. ಇಸ್ರೇಲಿ ಸೇನೆಯ ಚೀಫ್ ಆಫ್ ದಿ ಸ್ಟಾಫ್ ಮೇಜರ್ ಜನರಲ್ ಹೆರ್ಜಿ ಹಲೇವಿ ಮತ್ತು ಜನರಲ್ ಸೆಕ್ಯುರಿಟಿ ಸರ್ವೀಸ್ ಮುಖ್ಯಸ್ಥ ರೊನಾನ್ ಬಾರ್ ಕೂಡ ಸಿನ್ವಾರ್ ಹತ್ಯೆಯಾದ ಸ್ಥಳವನ್ನು ಪರಿಶೀಲಿಸಿದರು.
ಸೆಪ್ಟೆಂಬರ್ ಅಂತ್ಯದಲ್ಲಿ ಇಸ್ರೇಲಿ ಲೆಬನಾನಿನ ಬೈರುತ್ ಮೇಲೆ ನಡೆದ ಇಸ್ರೇಲಿ ವಾಯು ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಿದ ವಾರಗಳ ನಂತರ ಸಿನ್ವಾರ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಘೋಷಣೆ ಮಾಡಿದೆ.
ಇತ್ತೀಚಿನ ತಿಂಗಳುಗಳಲ್ಲಿ ಇತರ ಇರಾನ್ ಬೆಂಬಲಿತ ಅನೇಕ ಹಿಜ್ಬೊಲ್ಲಾ ಕಮಾಂಡರ್‌ಗಳು ಸಹ ಕೊಲ್ಲಲ್ಪಟ್ಟಿದ್ದಾರೆ.
ಹಮಾಸ್‌ನ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್‌ನನ್ನು ಕೊಂದಿರುವುದಾಗಿ ಇಸ್ರೇಲ್ ಈ ವರ್ಷದ ಆರಂಭದಲ್ಲಿ ಹೇಳಿತ್ತು, ಆದರೂ ಪ್ಯಾಲೆಸ್ತೀನ್ ಗುಂಪು ಅದನ್ನು ದೃಢಪಡಿಸಲಿಲ್ಲ.
ಅಕ್ಟೋಬರ್ 7 ರ ದಾಳಿಯ ಸಿನ್ವಾರ್‌ನೊಂದಿಗೆ ಡೀಫ್ ಯೋಜನೆ ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಇಸ್ರೇಲಿ ವಿದೇಶಾಂಗ ಸಚಿವರು ಸಿನ್ವಾರ್‌ನ ಸಾವನ್ನು ದೃಢೀಕರಿಸುವ ಮೊದಲು, ಮಿಲಿಟರಿ ಸಂಕ್ಷಿಪ್ತ ಹೇಳಿಕೆಯಲ್ಲಿ “ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆಯ ಸಮಯದಲ್ಲಿ, ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು” ಎಂದು ಹೇಳಿದೆ., ಹಮಾಸ್ ನಾಯಕ ಬಹುಶಃ ಅವರಲ್ಲಿ ಒಬ್ಬ ಎಂದು ಹೇಳಿತ್ತು.
ಸಿನ್ವಾರ್ ಸಾವಿನ ನಂತರ, ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕಳೆದ ವರ್ಷ ಅಕ್ಟೋಬರ್ 7 ರಂದು ಅಪಹರಿಸಲ್ಪಟ್ಟ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ ಹೋರಾಟಗಾರರಿಗೆ ಸೂಚಿಸಿದ್ದಾರೆ.
ಯಾಹ್ಯಾ ಸಿನ್ವಾರ್ ಯಾರು?
ಅಕ್ಟೋಬರ್ 7 ರಂದು ಇಸ್ರೇಲ್‌ನ ಮೇಲೆ ಹಮಾಸ್‌ನ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಯಾಹ್ಯಾ ಸಿನ್ವಾರ್ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
ಆಗಸ್ಟ್‌ನಲ್ಲಿ ಇರಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಇಸ್ಮಾಯಿಲ್ ಹನಿಯೆಹ್ ಕೊಲ್ಲಲ್ಪಟ್ಟ ನಂತರ ಹಮಾಸ್ ಮುಖ್ಯಸ್ಥನಾದರು. 1962 ರಲ್ಲಿ ಜನಿಸಿದ ಸಿನ್ವಾರ್ ಅವರು 1987 ರಲ್ಲಿ ಹಮಾಸ್ ಅನ್ನು ಸ್ಥಾಪಿಸಿದಾಗ ಅದರ ಆರಂಭಿಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ಈ ಹಿಂದೆ ಹಮಾಸ್‌ನ ಭದ್ರತಾ ವಿಭಾಗವನ್ನು ಮುನ್ನಡೆಸಿದರು.
1980 ರ ದಶಕದ ಉತ್ತರಾರ್ಧದಲ್ಲಿ ಸಿನ್ವಾರ್ ಅವರು 12 ವ್ಯಕ್ತಿಗಳನ್ನು ಮಾಹಿತಿದಾರರೆಂದು ಆರೋಪಿಸಿ ಕೊಂದಿದ್ದಕ್ಕಾಗಿ ಇಸ್ರೇಲಿನಿಂದ ಬಂಧಿಸಲ್ಪಟ್ಟರು ಮತ್ತು ನಾಲ್ಕು ಜೀವಾವಧಿ ಶಿಕ್ಷೆಯನ್ನು ಪಡೆದರು. ಜೈಲಿನಲ್ಲಿದ್ದಾಗ, ಅವರು ಹೀಬ್ರೂ ಅಧ್ಯಯನ ಮಾಡಿದರು.
2008 ರಲ್ಲಿ, ಅವರು ಇಸ್ರೇಲಿ ವೈದ್ಯರ ಚಿಕಿತ್ಸೆಯಿಂದ ಮೆದುಳಿನ ಕ್ಯಾನ್ಸರ್ ಅನ್ನು ಜಯಿಸಿದರು.
ಹಮಾಸ್ ವಶಪಡಿಸಿಕೊಂಡ ಇಸ್ರೇಲಿ ಸೈನಿಕನಿಗೆ ಕೈದಿಗಳ ವಿನಿಮಯದ ಭಾಗವಾಗಿ 2011 ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಹಮಾಸ್‌ನ ಸಶಸ್ತ್ರ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಡೀಫ್ ಜೊತೆಗೆ, ಸಿನ್ವಾರ್ ಅಕ್ಟೋಬರ್ 7 ರ ದಾಳಿಯನ್ನು ಸಂಘಟಿಸಿದನೆಂದು ನಂಬಲಾಗಿದೆ, ಇದು ಸರಿಸುಮಾರು 1,200 ಇಸ್ರೇಲಿಗಳ ಸಾವಿಗೆ ಕಾರಣವಾಯಿತು. ಈ ದಾಳಿಯು ಸಂಘರ್ಷವನ್ನು ಪ್ರಚೋದಿಸಿತು, ಇದು ಗಾಜಾದಲ್ಲಿ 40,000 ಕ್ಕೂ ಹೆಚ್ಚು ಪ್ಯಾಲೇಸ್ತಿನಿಯನ್ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಪ್ಯಾಲೇಸ್ತಿನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ