ವೀಡಿಯೊ…| ತನ್ನ ದಾಳಿಯಲ್ಲಿ ಸಾಯುವ ಮೊದಲು ಹಮಾಸ್ ಮುಖ್ಯಸ್ಥನ ಅಂತಿಮ ಕ್ಷಣದ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್‌

ಇಸ್ರೇಲಿ ಪಡೆಗಳು ಡ್ರೋನ್ ದೃಶ್ಯಗಳನ್ನು ಬಿಡುಗಡೆ ಮಾಡಿದ್ದು, ಇದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಇಸ್ರೇಲಿ ದಾಳಿಯಲ್ಲಿ ಸಾಯುವ ಮೊದಲು ಅವರ ಅಂತಿಮ ಕ್ಷಣಗಳನ್ನು ತೋರಿಸುತ್ತದೆ ಎಂದು ಇಸ್ರೇಲಿ ಪಡೆಗಳು ಹೇಳಿಕೊಂಡಿದೆ.
ಶೆಲ್ ದಾಳಿಯಿಂದ ಗೋಡೆಗಳು ಹಾರಿಹೋಗಿರುವ ಪಾಳುಬಿದ್ದ ಗಾಜಾ ಅಪಾರ್ಟ್‌ಮೆಂಟ್‌ನಲ್ಲಿ ಗಾಯಗೊಂಡಿರುವ ಸಿನ್ವಾರ್ ‘ಸೋಫಾದ ಮೇಲೆ ಕುಳಿತುಕೊಂಡಿರುವುದನ್ನು’ ಇದು ತೋರಿಸುತ್ತದೆ.
ಅವರ ಬಲಗೈಗೆ ತೀವ್ರವಾಗಿ ಗಾಯವಾಗಿರುವಂತೆ ಕಾಣುತ್ತಿರುವ ವೀಡಿಯೊದಲ್ಲಿ, ಹಮಾಸ್ ನಾಯಕ ತನ್ನ ತಲೆಯ ಮೇಲೆ ಡ್ರೋನ್ ಸಮೀಪಿಸುತ್ತಿರುವ ದಿಕ್ಕಿನಲ್ಲಿ ಕೋಲನ್ನು ಬೀಸುತ್ತಿರುವುದನ್ನು ತೋರಿಸುತ್ತದೆ.
ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು, ಆರಂಭಿಕ ಡಿಎನ್ಎ ಪರೀಕ್ಷೆಯ ಪ್ರಕಾರ “ಅಕ್ಟೋಬರ್ 7 ರ ನರಮೇಧ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಸಾಮೂಹಿಕ ಕೊಲೆಗಾರ ಯಾಹ್ಯಾ ಸಿನ್ವಾರ್ ಐಡಿಎಫ್ (ಇಸ್ರೇಲಿ ಮಿಲಿಟರಿ) ಸೈನಿಕರಿಂದ ಕೊಲ್ಲಲ್ಪಟ್ಟರು” ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಮಾಸ್‌ ಮುಖ್ಯಸ್ಥ ಸಿನ್ವಾರ್ ಅವರನ್ನು ಇಸ್ರೇಲ್‌ ಕೊಂದಿದ್ದು ಹೇಗೆ..?
ಗುಂಡೇಟಿನಿಂದ ಕೈಗೆ ಗಾಯವಾದ ನಂತರ ಸಿನ್ವಾರ್ ಏಕಾಂಗಿಯಾಗಿ ಕಟ್ಟಡವೊಂದಕ್ಕೆ ಓಡಿಹೋದರು ಎಂದು ಹಗರಿ ಹೇಳಿದ್ದಾರೆ. “ನಮ್ಮ ಪಡೆಗಳು ಪ್ರದೇಶವನ್ನು ಸ್ಕ್ಯಾನ್ ಮಾಡಲು ಡ್ರೋನ್ ಅನ್ನು ಬಳಸಿದವು, ನಾನು ಪ್ರಸ್ತುತಪಡಿಸುತ್ತಿರುವ ತುಣುಕನ್ನು ನೀವು ಇಲ್ಲಿ ನೋಡಬಹುದು” ಎಂದು ಅವರು ಹೇಳಿದ್ದಾರೆ.
“ಗುಂಡೇಟಿನಿಂದ ಕೈಯಲ್ಲಿ ಗಾಯಗೊಂಡ ಸಿನ್ವಾರ್, ತನ್ನ ಮುಖವನ್ನು ಮುಚ್ಚಿಕೊಂಡು, ತನ್ನ ಅಂತಿಮ ಕ್ಷಣಗಳಲ್ಲಿ, ಮರದ ಕೋಲನ್ನು ಡ್ರೋನ್‌ ನತ್ತ ಎಸೆಯುವುದನ್ನು ವೀಡಿಯೊದಲ್ಲಿ ನೋಡಬಹುದು. ಹಮಾಸ್ ಮುಖ್ಯಸ್ಥ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಇಸ್ರೇಲಿ ಪಡೆಗಳು ಅವರನ್ನು ಹೊಡೆದುರುಳಿಸಿದವು” ಎಂದು ಐಡಿಎಫ್‌ ಮುಖ್ಯಸ್ಥ ಡೇನಿಯಲ್ ಹಗರಿ ಹೇಳಿದ್ದಾರೆ.
“ನಮ್ಮ ಇತಿಹಾಸದಲ್ಲಿ ಇಸ್ರೇಲ್ ವಿರುದ್ಧದ ಅತ್ಯಂತ ಕ್ರೂರ ದಾಳಿಗೆ ಸಿನ್ವಾರ್ ಕಾರಣನಾಗಿದ್ದ. ಗಾಜಾದ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ಮಾಡಿ ಇಸ್ರೇಲಿಗಳನ್ನು ಅವರ ಮನೆಗಳಲ್ಲಿ ಕಗ್ಗೊಲೆ ಮಾಡಿದರು. ನಮ್ಮ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರು. ಇಡೀ ಕುಟುಂಬಗಳನ್ನು ಜೀವಂತವಾಗಿ ಸುಟ್ಟುಹಾಕಿದರು ಮತ್ತು 250 ಪುರುಷರು, ಮಹಿಳೆಯರು, ಮಕ್ಕಳು ಮತ್ತು ಶಿಶುಗಳನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರು. ಗಾಜಾಕ್ಕೆ ಒಯ್ದ 101 ಒತ್ತೆಯಾಳುಗಳು ಕಳೆದ ವರ್ಷ ಕ್ರೂರ ಪರಿಸ್ಥಿತಿಯಲ್ಲಿ ಇನ್ನೂ ಸೆರೆಯಲ್ಲಿದ್ದಾರೆ ”ಎಂದು ಐಡಿಎಫ್‌ ಮುಖ್ಯಸ್ಥ ಡೇನಿಯಲ್ ಹಗರಿ ಹೇಳಿದ್ದಾರೆ. ಆದರೆ ಸಿನ್ವಾರ್ ಹತ್ಯೆಯ ಬಗ್ಗೆ ಹಮಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಮುಖ ಸುದ್ದಿ :-   ಹಿಂದೂ ಹೆಸರು ಪಡೆದ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ-ಬಿಲಿಯನೇರ್‌ ಲಾರೆನ್‌ ಜಾಬ್ಸ್‌ ...! ಮಹಾಕುಂಭಮೇಳದಲ್ಲಿ ಕೇಸರಿ ಉಡುಪು ಧರಿಸ್ತಾರೆ..
https://twitter.com/LTC_Shoshani/status/1847009507685146644?ref_src=twsrc%5Etfw%7Ctwcamp%5Etweetembed%7Ctwterm%5E1847009507685146644%7Ctwgr%5Ef6532abc750840a1d77f7e099c88e7783a0cad86%7Ctwcon%5Es1_&ref_url=https%3A%2F%2Fwww.news18.com%2Fworld%2Fisrael-drone-footage-show-hamas-leader-yahya-sinwar-last-moment-video-9089906.html

ಸಿನ್ವಾರ್ ಹತ್ಯೆಯ ಬಗ್ಗೆ ನೆತನ್ಯಾಹು ಹೇಳಿದ್ದೇನು?
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಪಟ್ಟಿಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯು ಪ್ಯಾಲೆಸ್ತೀನ್ ಭೂಪ್ರದೇಶದಲ್ಲಿ ವರ್ಷಪೂರ್ತಿ ನಡೆಯುತ್ತಿರುವ ಯುದ್ಧದ “ಅಂತ್ಯದ ಆರಂಭ” ಎಂದು ಗುರುವಾರ ಹೇಳಿದ್ದಾರೆ.
ಸುದೀರ್ಘ ಶೋಧ ಕಾರ್ಯಾಚರಣೆಯ ನಂತರ, ಪಡೆಗಳು ಬುಧವಾರ “ದಕ್ಷಿಣ ಗಾಜಾ ಸ್ಟ್ರಿಪ್‌ನಲ್ಲಿ ಕಾರ್ಯಾಚರಣೆಯಲ್ಲಿ ಹಮಾಸ್ ಸಂಘಟನೆಯ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ನಿರ್ಮೂಲನೆ ಮಾಡಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಯುದ್ಧದ ಪ್ರಾರಂಭದಲ್ಲಿ ಹಮಾಸ್ ತೊಡೆದು ಹಾಕುವುದಾಗಿ ಪ್ರತಿಜ್ಞೆ ಮಾಡಿದ್ದ ನೆತನ್ಯಾಹು, ಸಿನ್ವಾರ್ ಹತ್ಯೆಯ ನಂತರಇದು ಗಾಜಾದಲ್ಲಿ ಯುದ್ಧದ ಅಂತ್ಯವಲ್ಲ, ಇದು ಅಂತ್ಯದ ಆರಂಭ ಎಂದು ಹೇಳಿದ್ದಾರೆ.
ಯುದ್ಧದ ಕಿಡಿ ಹೊತ್ತಿಸಿದ ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಗಾಜಾದಲ್ಲಿ ಹಮಾಸ್ ಮುಖ್ಯಸ್ಥರಾಗಿದ್ದ ಸಿನ್ವಾರ್ ಜುಲೈನಲ್ಲಿ ಅದರ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಹಮಾಸ್‌ ಗುಂಪಿನ ಒಟ್ಟಾರೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement