ತಲೆಯೊಳಗೆ ಗುಂಡು, ಕತ್ತರಿಸಲ್ಪಟ್ಟ ಬೆರಳು….: ಹಮಾಸ್‌ ಮುಖ್ಯಸ್ಥನ ಶವಪರೀಕ್ಷೆಯ ವಿವರಗಳು

ಇಸ್ರೇಲ್ ನಡೆಸಿದ ಶವಪರೀಕ್ಷೆಯಲ್ಲಿ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ತಲೆಗೆ ಗುಂಡೇಟು ತಗುಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಕಂಡುಬಂದಿದೆ. ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಮೆಡಿಸಿನ್‌ನ ಪರಿಣಿತರು ಹಮಾಸ್ ನಾಯಕನ ಮೃತದೇಹವು ಕೈ ಬೆರಳನ್ನು ಕತ್ತರಿಸಿದ ಸ್ಥಿತಿಯಲ್ಲಿ ತಮ್ಮಲ್ಲಿಗೆ ಬಂದಿತ್ತು ಎಂದು ಹೇಳಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ಡಿಎನ್‌ಎ ವಿಶ್ಲೇಷಣೆಗಾಗಿ ಸಿನ್ವಾರ್‌ನ ಬೆರಳನ್ನು ಕತ್ತರಿಸಿದೆ ಎಂದು ಮುಖ್ಯ ರೋಗಶಾಸ್ತ್ರಜ್ಞ ಚೆನ್ ಕುಗೆಲ್ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಲಾದ ದೇಹದ ಗುರುತಿನ ಬಗ್ಗೆ ಮತ್ತು ಗುಂಡಿನ ದಾಳಿಯೇ ಸಾವಿಗೆ ಕಾರಣ ಎಂದು ಅವರು “100 ಪ್ರತಿಶತ” ಖಚಿತವಾಗಿ ಹೇಳಿದ್ದಾರೆ. ಹಮಾಸ್ ನಾಯಕನಿಗೆ ಟ್ಯಾಂಕ್ ಶೆಲ್ ಸೇರಿದಂತೆ ಇತರ ಗಾಯಗಳಾಗಿವೆ ಎಂದು ಅವರು ಹೇಳಿದರು.
“ನಾವು ನಮಗೆ ಕಳುಹಿಸಿದ ಡಿಎನ್‌ಎ ಮಾದರಿಯನ್ನು ಸಿನ್ವಾರ್ ಅವರು ಇಲ್ಲಿ ಕೈದಿಯಾಗಿದ್ದ ಸಮಯದಿಂದ ನಮ್ಮ ಪ್ರಯೋಗಾಲಯದ ದಾಖಲೆಗಳಲ್ಲಿದ್ದ ಪ್ರೊಫೈಲ್‌ನೊಂದಿಗೆ ಹೋಲಿಸಿದ್ದೇವೆ” ಎಂದು ಕುಗೆಲ್ ಸಿಎನ್‌ಎನ್‌ಗೆ ತಿಳಿಸಿದರು.

ಐಡಿಎಫ್‌ (IDF) ಪಡೆಗಳು ಮೊದಲು ಆತನನ್ನು ದಂತದ ಪರೀಕ್ಷೆಯೊಂದಿಗೆ ಗುರುತಿಸಲು ಪ್ರಯತ್ನಿಸಿದವು. ಆದರೆ ಅದು “ಸಾಕಷ್ಟು ಪ್ರಮಾಣೀಕರಿಸಲ್ಪಟ್ಟಿಲ್ಲ” ಎಂದು ಅವರು ಹೇಳಿದರು.
ಸಿನ್ವಾರ್‌ ಕೆಲವು ಅಂತಿಮ ನಿಮಿಷಗಳ ವೀಡಿಯೊವಿದೆ, ಭಗ್ನಗೊಂಡ ಅಪಾರ್ಟ್‌ಮೆಂಟ್‌ನಲ್ಲಿ ಗಾಯಗೊಂಡಿರುವ ಸಿನ್ವಾರ್‌ ಸೋಪಾದ ಮೇಲೆ ಕುಳಿತುಕೊಂಡಿರುವುದನ್ನು ತೋರಿಸುತ್ತದೆ. ಆತ ಡ್ರೋನ್‌ ಒಂದಕ್ಕೆ ಕೋಲು ಎಸೆಯಲು ಪ್ರಯತ್ನಿಸುತ್ತಿರುವ ಹಾಗೂ ಮುಖವಾಡ ಧರಿಸಿರುವುದು ಕಂಡುಬಂದಿದೆ.
ಸಿನ್ವಾರ್ ಅವರ ಸಾವಿಗೆ ಸಂತಾಪ ಸೂಚಿಸುವ ಹಮಾಸ್ “ಅವರು ಪಲಾಯನ ಮಾಡದೆ, ರೈಫಲ್ ಅನ್ನು ಹಿಡಿದುಕೊಂಡು, ಮತ್ತು ಮುಂಚೂಣಿಯಲ್ಲಿ ಆಕ್ರಮಣಕಾರಿ ಸೈನ್ಯದ ವಿರುದ್ಧ ಹೋರಾಡಿ ವೀರ ಮರಣಹೊಂದಿದರು ಎಂದು ಹೇಳಿದೆ. ಅವರ ಸಾವು ಚಳುವಳಿಯನ್ನು ಬಲಪಡಿಸುತ್ತದೆ ಮತ್ತು ಇಸ್ರೇಲ್ ಜೊತೆ ಕದನ ವಿರಾಮ ಒಪ್ಪಂದಕ್ಕೆ ಬರಲು ಅವರು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಸಿಂಹದ ಬಾಯಿಂದ ತನ್ನ ಕರುವನ್ನು ರಕ್ಷಿಸಲು ಹೋರಾಡಿ ಸಿಂಹಗಳ ಗುಂಪನ್ನು ಸೋಲಿಸಿದ ಒಂಟಿ ಕಾಡೆಮ್ಮೆ-ವೀಕ್ಷಿಸಿ

ಇಸ್ರೇಲಿ ಲೆಕ್ಕಾಚಾರಗಳ ಪ್ರಕಾರ. ಒಂದು ವರ್ಷದ ಹಿಂದೆ ಇಸ್ರೇಲ್ ಮೇಲೆ ಯೋಜಿಸಲಾದ ಹಮಸ್‌ ದಾಳಿಯು ಸುಮಾರು 1,200 ಜನರನ್ನು ಕೊಂದಿತು. ಹಾಗೂ 253 ಜನರನ್ನು ಒತ್ತೆಯಾಳುಗಳಾಗಿ ಗಾಜಾಕ್ಕೆ ಎಳೆದೊಯ್ಯಲಾಯಿತು. ನಂತರದ ಯುದ್ಧವು ಗಾಜಾವನ್ನು ಧ್ವಂಸಗೊಳಿಸಿದೆ, 42,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರ ಸಾವಿಗೆ ಕಾರಣವಾಗಿದೆ. ಇನ್ನೂ ಸುಮಾರು 10,000 ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.
(ಐಡಿಎಫ್) ಹಂಚಿಕೊಂಡ ವೀಡಿಯೊದಲ್ಲಿ, ಸಿನ್ವಾರ್ ಅವರ ದೇಹ ಪತ್ತೆಯಾದ ಕಟ್ಟಡದ ಮೇಲೆ ಟ್ಯಾಂಕ್ ಗುಂಡಿನ ದಾಳಿ ನಡೆಸುತ್ತಿದೆ. ರಾಫಾದ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಡಿಎಫ್‌ನ 828 ಬ್ರಿಗೇಡ್‌ನಿಂದ ದಕ್ಷಿಣ ಗಾಜಾದಲ್ಲಿ ಗುಪ್ತಚರ ಆಧಾರಿತ ಭೂ ದಾಳಿಯಲ್ಲಿ ಸಿನ್ವಾರ್ ಕೊಲ್ಲಲ್ಪಟ್ಟರು ಎಂದು ವರದಿಗಳಿವೆ.
ಇಸ್ರೇಲಿ ಮಿಲಿಟರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಇತರ ವೀಡಿಯೊಗಳಲ್ಲಿ, ತೋರುಬೆರಳು ಕಾಣೆಯಾಗಿರುವ ದೇಹದ (ಸಿನ್ವಾರ್ ಎಂದು ಹೇಳಿಕೊಳ್ಳಲಾಗಿದೆ) ಪಕ್ಕದಲ್ಲಿ ಇಬ್ಬರು ಸೈನಿಕರು ನಿಂತಿದ್ದಾರೆ. ಅವರ ಎಡಗೈಯನ್ನು ಎಲ್ಲಾ ಐದು ಬೆರಳುಗಳು ಹಾಗೆಯೇ ತೋರಿಸಿರುವ ವೀಡಿಯೊಗಳನ್ನು ಅವರು ವಿಶ್ಲೇಷಿಸಿದ್ದಾರೆ ಮತ್ತು ನಂತರ ಒಂದು ಬೆರಳು ಕಾಣೆಯಾಗಿದೆ ಎಂದು CNN ಹೇಳಿದೆ.
ಇಸ್ರೇಲ್ ಮೇಲೆ ಅಕ್ಟೋಬರ್ 7 ರ ದಾಳಿಯ ಸಂಚಿನ ರೂವಾರಿ ಸಿನ್ವಾರ್, ಗಾಜಾದಲ್ಲಿ ಯುದ್ಧವನ್ನು ಪ್ರಚೋದಿಸಿದರು ಮತ್ತು ಒಂದು ವರ್ಷದ ಮಾನವ ಬೇಟೆಯ ನಂತರ ಇಸ್ರೇಲಿ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಅಕ್ಟೋಬರ್ 16 ರಂದು ಕೊಲ್ಲಲ್ಪಟ್ಟರು. ಅವರ ಮರಣವನ್ನು ಅಕ್ಟೋಬರ್ 17 ರಂದು ಘೋಷಿಸಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ..| ಸಿಂಹದ ಬಾಯಿಂದ ತನ್ನ ಕರುವನ್ನು ರಕ್ಷಿಸಲು ಹೋರಾಡಿ ಸಿಂಹಗಳ ಗುಂಪನ್ನು ಸೋಲಿಸಿದ ಒಂಟಿ ಕಾಡೆಮ್ಮೆ-ವೀಕ್ಷಿಸಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement