8 ಕೋಟಿ ರೂ. ಕೊಡಲು ನಿರಾಕರಿಸಿದ್ದಕ್ಕೆ ಪತಿಯನ್ನು ಕೊಂದ ಮಹಿಳೆ… ದೇಹ ಸುಡಲು 800 ಕಿ.ಮೀ. ಪ್ರಯಾಣ…ಕರ್ನಾಟಕದಲ್ಲಿ ಮೂವರ ಬಂಧನ

ಬೆಂಗಳೂರು : ಕೊಡಗು ಜಿಲ್ಲೆಯ ಎಸ್ಟೇಟ್‌ ಒಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ತೆಲಂಗಾಣ ಉದ್ಯಮಿಯ ಹತ್ಯೆ ಪ್ರಕಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದಾರೆ. ಆತನ ಎರಡನೇ ಪತ್ನಿ ಹಾಗೂ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಮಹಿಳೆ ಆತನನ್ನು ಕೊಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮೃತ ಉದ್ಯಮಿಯನ್ನು ರಮೇಶ (54) ಎಂದು ಗುರುತಿಸಲಾಗಿದೆ. ಅಕ್ಟೋಬರ್ 8 ರಂದು ಕೊಡಗಿನ ಕಾಫಿ ಎಸ್ಟೇಟ್‌ನಲ್ಲಿ ಅಪರಿಚಿತ ಶವ ಪತ್ತೆಯಾದಾಗ ತನಿಖೆ ಪ್ರಾರಂಭವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ರಮೇಶ ಅವರ ಎರಡನೇ ಪತ್ನಿ ನಿಹಾರಿಕಾ ಪಿ (29) ಎಂಬವಳನ್ನು ಬಂಧಿಸಿದ್ದಾರೆ; ಆಕೆಯ ಸಹವರ್ತಿ ಪಶುವೈದ್ಯ ಡಾ.ನಿಖಿಲ್ ಮತ್ತು ಅಂಕುರ್ ರಾಣಾ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ.

ಶವ ಪತ್ತೆಯಾದ ನಂತರ, ತನಿಖೆಗಾಗಿ 16 ಅಧಿಕಾರಿಗಳ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತನಿಖಾಧಿಕಾರಿಗಳು ನೂರಾರು ಕ್ಯಾಮೆರಾಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು, ಸಿಸಿಟಿವಿ ಕ್ಯಾಮೆರಾದ ದೃಶ್ಯಗಳಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಪತ್ತೆಯಾಗಿತ್ತು.
ಈ ಸುಳುವಿನ ಹಿಂದೆ ಬಿದ್ದ ಪೊಲೀಸರು ಪ್ರಕರಣದಲ್ಲಿ ಸಿಕ್ಕ ಸಣ್ಣ ಸುಳಿವು ಹಿಡಿದುಕೊಂಡು ಪೊಲೀಸರು ಸತ್ಯಾಂಶವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧದ ಸಮಯದಲ್ಲಿ ಆ ಪ್ರದೇಶದ ಮೂಲಕ ಚಲಿಸಿದ ವಾಹನಗಳನ್ನು ಸಿಸಿಟಿವ ಕ್ಯಾಮರಾ ಮೂಲಕ ಪತ್ತೆಹಚ್ಚಿದರು. ಅಂತಿಮವಾಗಿ, ತನಿಖಾಧಿಕಾರಿಗಳು ಇತ್ತೀಚೆಗೆ ಕೆಂಪು ಬೆಂಜ್ ಅನ್ನು ಗುರುತಿಸಿದ್ದಾರೆ. ನಂತರ ಅದರ ನಂಬರ್‌ ಪ್ಲೇಟ್‌ ಆಧಾರದ ಮೇಲೆ ಕೊಡಗು ಪೊಲೀಸರು ತಮ್ಮ ತೆಲಂಗಾಣ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಕ್ಕೆ ಮುಂದಾದರು. ನಂತರ ಇದು ರಿಯಲ್‌ ಎಸ್ಟೇಟ್‌ ಉದ್ಯಮಿ ರಮೇಶ ಅವರಿಗೆ ಸೇರಿದ್ದ ಕಾರು ಎಂಬುದು ಗೊತ್ತಾಯಿತು. ವಿಚಾರಣೆ ಮುಂದುವರೆದಂತೆ, ನಿಹಾರಿಕಾ, ಆಕೆಯ ಸಹವರ್ತಿ ಪಶುವೈದ್ಯ ಡಾ. ನಿಖಿಲ್ ಮತ್ತು ಸ್ನೇಹಿತ ಅಂಕುರ್ ರಾಣಾ ಮೇಲೆ ಅನುಮಾನವು ಕೇಂದ್ರೀಕೃತವಾಗಿತ್ತು. ನಿಹಾರಿಕಾಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅವಳು ಅಪರಾಧವನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

29 ವರ್ಷದ ನಿಹಾರಿಕಾ ತೆಲಂಗಾಣದ ಮೊಂಗೀರ್ ನಗರದವಳು. ಅವಳು 16 ವರ್ಷದವಳಿದ್ದಾಗ, ಅವಳ ತಂದೆ ತೀರಿಕೊಂಡರು, ಮತ್ತು ಅವಳ ತಾಯಿ ಮರುಮದುವೆಯಾದರು. ನಿಹಾರಿಕಾ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ತಾಯಿಯಾದರು, ಆದರೆ ನಂತರ ವೈವಾಹಿಕ ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅವಳು ನಂತರ ತನ್ನ ಶಿಕ್ಷಣ ಮುಂದುವರಿಸಿದಳು. ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾಳೆ ಮತ್ತು ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾಳೆ ಹಾಗೂ ಉತ್ತಮ ಸಂಬಳವನ್ನೂ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಆಕೆಯ ಜೀವನವು ಹರಿಯಾಣದಲ್ಲಿದ್ದಾಗ ಕರಾಳ ತಿರುವು ಪಡೆದುಕೊಂಡಿತು, ಅಲ್ಲಿ ಅವಳು ಹಣಕಾಸಿನ ಹಗರಣದಲ್ಲಿ ಭಾಗಿಯಾಗಿದ್ದಳು ಮತ್ತು ಅದು ಅವಳನ್ನು ಬಂಧಿಸಿ ಜೈಲಿಗೆ ಅಟ್ಟಲು ಕಾರಣವಾಯಿತು. ಬಿಡುಗಡೆಯಾದ ನಂತರ, ಆಕೆ ಬೆಂಗಳೂರಿಗೆ ಹಿಂತಿರುಗಿದಳು ಮತ್ತು 2018 ರಲ್ಲಿ ರಮೇಶ ಎಂಬವರನ್ನು ವಿವಾಹವಾದರು. ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್​ಗೆ 2018ರಲ್ಲಿ ನಿಹಾರಿಕಾಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ರಿಜಿಸ್ಟರ್ ವಿವಾಹವಾಗಿದ್ದಾರೆ. ರಮೇಶ ಇವಳ ಅದ್ದೂರಿ ಜೀವನಶೈಲಿಗೆ ಹಣ ನೀಡಿದರು.

ಇದರ ನಡುವೆ ಬೆಂಗಳೂರಿನ ರಾಮಮೂರ್ತಿ ನಗರದ ಪಶು ವೈದ್ಯ ಡಾ. ನಿಖಿಲ್ ಜೊತೆ ನಿಹಾರಿಕಾಗೆ ಸಂಬಂಧ ಬೆಳೆದಿದೆ. ನಿಹಾರಿಕಾ ತನ್ನ ನಾಯಿಗೆ ಚಿಕಿತ್ಸೆ ನೀಡಲೆಂದು ಪಶುವೈದ್ಯ ನಿಖಿಲ್ ಬಳಿ ತೆರಳಿದ್ದಾಗ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ಮಧ್ಯೆ ರಿಯಲ್ ಎಸ್ಟೇಟ್​ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ನಿಹಾರಿಕಗೂ ರಮೇಶ ಅವರಿಗೂ ಭಿನ್ನಾಭಿಪ್ರಾಯ ಬಂದಿದೆ. ರಮೇಶ ನಿಹಾರಿಕಾಗೆ ಹಣ ನೀಡುವುದನ್ನ ನಿಲ್ಲಿಸಿದ್ದ. ನಂತರ ಅವಳು 8 ಕೋಟಿ ರೂ.ಗಳ ಹಣ ನೀಡುವಂತೆ ರಮೇಶ ಅವರನ್ನು ಕೇಳಿದ್ದಾಳೆ. ಇದಕ್ಕೆ ರಮೇಶ ನಿರಾಕರಿಸಿದ್ದಾರೆ. ಇಲ್ಲಿಂದ ಸಮಸ್ಯೆ ಆರಂಭವಾಯಿತು.
ಇದರಿಂದ ಕೋಪಗೊಂಡ ನಿಹಾರಿಕಾ, ಅಂಕುರ್‌ ನೆರವಿನೊಂದಿಗೆ ರಮೇಶ್‌ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತ ಸರ್ಕಾರ ವಿರುದ್ಧ ಹೈಕೋರ್ಟ್​​ನಲ್ಲಿ ಮೊಕದ್ದಮೆ ಹೂಡಿದ ಇಲಾನ್ ಮಸ್ಕ್ ಒಡೆತನದ ಎಕ್ಸ್‌

ಆಕೆ ರಮೇಶ ಅವರನ್ನು ಅಕ್ಟೋಬರ್ 1 ರಂದು ಹೈದರಾಬಾದ್‌ನ ಉಪ್ಪಲ್‌ಗೆ ಕರೆಸಿಕೊಂಡು ಅಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ರಮೇಶ ಮನೆಗೆ ತೆರಳಿ ಅಲ್ಲಿಂದ ಆತನ ಬೆಂಜ್ ಕಾರು ಹಾಗೂ ಹಣ ತೆಗೆದುಕೊಂಡು ಶವದ ಜೊತೆಗೆ ಬೆಂಗಳೂರಿಗೆ ಬಂದು ಅಲ್ಲಿ ತನ್ನ ಸ್ನೇಹಿತ ಡಾ ನಿಖಿಲ್​ನ ಜೊತೆಗೂಡಿ ಕೊಡಗಿಗೆ ಬಂದಿದ್ದಾಳೆ. ಅದನ್ನು ಕಾಫಿ ತೋಟದಲ್ಲಿ ಬಿಟ್ಟು ಕಂಬಳಿ ಹೊದಿಸಿ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ನಿಹಾರಿಕಾ ತನ್ನ ಪತಿ ರಮೇಶ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯು ತೆರೆದುಕೊಳ್ಳುತ್ತಿದ್ದಂತೆ, ನಿಹಾರಿಕಾ, ಅಂಕುರ್ ಮತ್ತು ಡಾ ನಿಖಿಲ್​ನನ್ನು ಕೊಡಗು ಪೊಲಿಸರು ಬಂಧಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement