ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬವನ್ನು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ ಮತ್ತು ಗುಜರಾತ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಉತ್ತರಾಯಣ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಆದರೆ, ಕೋತಿಯೊಂದು ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಕೋತಿ ಟೆರೇಸ್ ಮೇಲೆ ಕುಳಿತು ತನ್ನ ಮುಂಗೈಗಳನ್ನು ಚಲಿಸುತ್ತಿರುವಂತೆ ಕಾಣುತ್ತದೆ. ಕೋತಿಯೊಂದು ಟೆರೇಸ್ ಮೇಲೆ ಕುಳಿತು ಮನುಷ್ಯರಿಗಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ಕೌಶಲ್ಯಯುತವಾಗಿ ಗಾಳಿಪಟವನ್ನು ಹಾರಿಸಿದೆ. ನಂತರ ಗಾಳಿಪಟವನ್ನು ತನ್ನತ್ತ ಎಳೆಯುತ್ತಿರುವಂತೆ ಕಂಡು ಬರುತ್ತದೆ.
ಮಂಗ ಗಾಳಿಪಟದ ದಾರವನ್ನು ಎಳೆಯುತ್ತಿದೆ ಎಂದು ಸುಲಭವಾಗಿ ಅರ್ಥವಾಗುತ್ತದೆ. ಈ ಮಧ್ಯೆ, ಘಟನೆಯನ್ನು ರೆಕಾರ್ಡ್ ಮಾಡುತ್ತಿರುವ ಕೆಲವು ಯುವಕರು ಜೋರಾಗಿ ಕಿರುಚುತ್ತಿದ್ದಾರೆ. ಗಾಳಿಪಟ ಹತ್ತಿರ ಬಂದ ತಕ್ಷಣ ಕೋತಿ ಅದನ್ನು ಹಿಡಿದುಕೊಳ್ಳುತ್ತದೆ. ಕೋತಿ ಇದನ್ನೆಲ್ಲ ಗಾಳಿಪಟ ಹಾರಿಸುವುದರಲ್ಲಿ ನುರಿತವನಂತೆ ಮಾಡುತ್ತದೆ.
ವೀಡಿಯೊದ ಮೂಲವನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ಅದನ್ನು ರೋಸಿ ಎಂಬವರು X ನಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ ಹೇಳಿಕೊಂಡಂತೆ, ಘಟನೆಯನ್ನು ವಾರಾಣಸಿ(ಕಾಶಿ)ಯಲ್ಲಿ ಸೆರೆಹಿಡಿಯಲಾಗಿದೆಯಂತೆ. ಆದಾಗ್ಯೂ, ಇದರ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಲಿಲ್ಲ. ಈ ಮೊದಲು ಸಹ ಈ ವೀಡಿಯೊ ವೈರಲ್ ಆಗಿತ್ತು. ಈಗ ಮತ್ತೆ ಈ ವೀಡಿಯೊ ವೈರಲ್ ಆಗಿದೆ.
ಸ್ವಭಾವತಃ, ಕೋತಿಗಳು ಬುದ್ಧಿವಂತ ಪ್ರಾಣಿ ಮತ್ತು ಚೇಷ್ಟೆ ಮಾಡುವ ಪ್ರವೃತ್ತಿಯುಳ್ಳವುಗಳು. ಈ ಪ್ರಣಿಗಳು ತಮ್ಮ ಕುತೂಹಲ ಮತ್ತು ಅನ್ವೇಷಣೆಗೆ ಹೆಸರುವಾಸಿಯಾಗಿವೆ. ಇದಲ್ಲದೆ, ಕೋತಿಗಳು ಮಾನವನ ಕ್ರಿಯೆಗಳನ್ನು ಅನುಕರಿಸಲು ಹೆಸರುವಾಸಿಯಾಗಿದೆ. ಹೀಗಾಗಿ, ಕೋತಿಯ ಅಂತಹ ನಡವಳಿಕೆಯು ಸಾಕಷ್ಟು ಪರಿಚಿತವಾಗಿದೆ. ಬಹುಶಃ, ದಾರವನ್ನು ಎಳೆಯುವ ಮೂಲಕ ಯಾರಾದರೂ ಗಾಳಿಪಟವನ್ನು ಹಾರಿಸುವುದನ್ನು ಕೋತಿ ನೋಡಿರಬಹುದು ಮತ್ತು ಅದು ಅದನ್ನೇ ಅನುಸಿರಿಸಿದೆ ಎಂದು ತೋರುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ