ಕನ್ನಡವೂ ಸೇರಿ ಬಹುಭಾಷೆಗಳ ಖ್ಯಾತ ಹಿನ್ನೆಲೆ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ

ತಿರುವನಂತಪುರಂ : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕ ಪಿ ಜಯಚಂದ್ರನ್ ಅವರು ಗುರುವಾರ ನಿಧನರಾಗಿದ್ದಾರೆ. ಕ್ಯಾನ್ಸರಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ತ್ರಿಶೂರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು..
ಮಲಯಾಳಂ ಅಷ್ಟೇ ಅಲ್ಲ, ಜಯಚಂದ್ರನ್ ಅವರು, ಕನ್ನಡ, ತಮಿಳು, ತೆಲುಗು ಹಿಂದಿಯಲ್ಲೂ ಅನೇಕ ಗೀತೆಗಳನ್ನು ಹಾಡಿ ಅಳಿಸಲಾಗದ ಛಾಪು ಮೂಡಿಸಿದ್ದರು.
16000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಜಯಚಂದ್ರನ್ ಅವರು, 1965 ರಲ್ಲಿ ಪಿ ಭಾಸ್ಕರನ್ ಅವರ ಕುನ್ಹಲಿಮರಿಕ್ಕರ್‌ನ “ಒರು ಮುಲ್ಲಪ್ಪುಮಲಯುಮಾಯಿ” ಹಾಡಿನೊಂದಿಗೆ ಸಿನೆಮಾ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಇದು ಅವರ ಮೊದಲ ಧ್ವನಿಮುದ್ರಿತ ಹಾಡಾಗಿದ್ದರೂ, ಜಯಚಂದ್ರನ್ ಮೊದಲು ಸಿನಿಮಾದಲ್ಲಿ ಕೇಳಿದ್ದು ಜಿ ದೇವರಾಜನ್ ಅವರ ಸಂಯೋಜನೆಯ “ಮಂಜಲಾಯಿಲ್ ಮುಂಗಿ ತೊರ್ತಿ” ಕಲಿತೋಝನ್‌ನಲ್ಲಿ.
ಆರು ದಶಕಗಳಿಗೂ ಹೆಚ್ಚು ಕಾಲ ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಹೃದಯಗಳನ್ನು ಸೂರೆಗೊಂಡಿದ್ದ ಪಿ. ಜಯಚಂದ್ರನ್ (P.Jayachandran) ಅವರು ಪ್ರೀತಿ, ಹಂಬಲ, ಭಕ್ತಿ ಮುಂತಾದ ಭಾವನೆಗಳನ್ನು ತಮ್ಮ ಭಾವಪೂರ್ಣ ಗಾಯನದ ಮೂಲಕ ಹೊರಹೊಮ್ಮಿಸಿದ್ದಾರೆ. ಕನ್ನಡದಲ್ಲಿ ಹಿಂದೂಸ್ತಾನವು ಎಂದೂ ಮರೆಯದ, ಮಂದಾರ ಪುಷ್ಪವು ನೀನು, ಭೂಮಿ ತಾಯಾಣೆ ನೀ ಇಷ್ಟ ಕಣೆ, ಕನ್ನಡ ನಾಡಿನ ಕರಾವಳಿ, ನನ್ನವರು ಯಾರೂ ಇಲ್ಲ.. ಯಾರಿಗೆ ಯಾರೂ ಇಲ್ಲ, ‘ಚಂದ..ಚಂದ..ಗುಲಾಬಿ ತೋಟವೇ’, ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ.. ಹೀಗೆ ಹಲವಾರು ಸುಪ್ರಿಸಿದ್ಧ ಗೀತೆಗಳನ್ನು ಹಾಡಿ ಮನೆ ಮಾತಾಗಿದ್ದಾರೆ. ಅಲ್ಲದೆ, ಕಾಲ್ಗೆಜ್ಜೆ ತಾಳಕೆ’, ‘ಕಾಲ ಮತ್ತೊಮ್ಮೆ ನಮಗಾಗಿ ಬಂತು’, ‘ಉಯ್ಯಾಲೆ ಆಡೋಣ ಬನ್ನಿರೋ’, ‘ಪ್ರೇಮದ ಶ್ರುತಿ ಮೀಟಿದೆ’, ಮೊದಲಾದ ಜನಪ್ರಿಯ ಗೀತೆಗಳನ್ನೂ ಹಾಡಿದ್ದಾರೆ.
ತಮಿಳಿನಲ್ಲಿ ಅವರ ಕೆಲವು ಹೆಗ್ಗುರುತು ಹಾಡುಗಳಾದ “ರಾಸತಿ ಉನ್ನಾ”, “ಪೂವ ಎದುತ್ತು ಒರು”, “ತಾಳತ್ತುದೇ ವಾನಂ” ತಮಿಳಿನಲ್ಲಿ ಇಳಯರಾಜ ಅವರಿಂದ ಸಂಯೋಜಿಸಲ್ಪಟ್ಟಿದೆ. ಅವರನ್ನು ಹಿಂದಿಯಲ್ಲಿ ಪರಿಚಯಿಸಿದವರು ಎ.ಆರ್‌. ರೆಹಮಾನ್. ಅವರ ಚಲನಚಿತ್ರ ಕೃತಿಗಳಲ್ಲದೆ, ತಮಿಳು ಮತ್ತು ಮಲಯಾಳಂ ಎರಡರಲ್ಲೂ ಹಾಡಿರುವ ಭಕ್ತಿ ಆಲ್ಬಂ ಛಾಪು ಮೂಡಿಸಿದೆ.

ಪ್ರಮುಖ ಸುದ್ದಿ :-   ಗಂಟಲಲ್ಲಿ ಪಿಸ್ತಾ ಸಿಪ್ಪೆ ಸಿಲುಕಿ 2 ವರ್ಷದ ಮಗು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement