ವೀಡಿಯೊ..| ನಾಲ್ವರು ಇಸ್ರೇಲಿ ಮಹಿಳಾ ಒತ್ತೆಯಾಳುಗಳ ಹಸ್ತಾಂತರಕ್ಕೆ ಜನಸಮೂಹದ ಮಧ್ಯೆ ಎಚ್ಚರಿಕೆಯಿಂದ ಕರೆತಂದ ಹಮಾಸ್‌ ಮುಸುಕುಧಾರಿಗಳು-ವೀಕ್ಷಿಸಿ

200 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುವುದಕ್ಕೆ ಬದಲಾಗಿ ಗಾಜಾ ಕದನ ವಿರಾಮ ಒಪ್ಪಂದದ 2 ನೇ ಹಂತದಲ್ಲಿ ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಶನಿವಾರ ಬಿಡುಗಡೆ ಮಾಡಿದೆ.
20 ವರ್ಷ ವಯಸ್ಸಿನವರಾದ ಕರೀನಾ ಅರಿಯೆವ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ ಹಾಗೂ 19 ವರ್ಷದ ಲಿರಿ ಅಲ್ಬಾಗ್ ಎಂಬ ನಾಲ್ವರು ಮಹಿಳೆಯರನ್ನು ಶಸ್ತ್ರಸಜ್ಜಿತ ಮುಖ ಮರೆಮಾಚಿಕೊಂಡ ಹಮಾಸ್‌ ಕಾರ್ಯಕರ್ತರುಗಾಜಾಕ್ಕೆ ಕರೆತರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಗಾಜಾ ನಗರದ ವೇದಿಕೆಯಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು, ಅಲ್ಲಿ ಮಹಿಳೆಯರು ಕೈಬೀಸುವುದು, ನಗುವುದು ಮತ್ತು ಜನಸಮೂಹಕ್ಕೆ ಹೆಬ್ಬೆರಳು ತೋರಿಸುವುದನ್ನು ಕಾಣಬಹುದು.
ಕಳೆದ ವಾರಾಂತ್ಯದ ಗದ್ದಲದ ಹಸ್ತಾಂತರದಂತೆ ಆಗದಿರಲು ಹಮಾಸ್‌ ಗಾಜಾ ನಗರದ ಪ್ಯಾಲೆಸ್ತೈನ್ ಚೌಕದಲ್ಲಿ ಶನಿವಾರದ ಹಸ್ತಾಂತರದ ಕಾರ್ಯಕ್ರಮವನ್ನು ಹಮಾಸ್ ಹೆಚ್ಚು ಯೋಜನಾಬದ್ಧವಾಗಿ ಮಾಡಿತು.

ನಾಲ್ವರು ಒತ್ತೆಯಾಳುಗಳು ಕಾರುಗಳಿಂದ ಹೊರಬಂದರು ಮತ್ತು ಚೌಕದಲ್ಲಿ ನಿರ್ಮಿಸಲಾದ ವೇದಿಕೆಗೆ ಮುಸುಕುಧಾರಿ ಬಂದೂಕುಧಾರಿಗಳು ಕರೆದೊಯ್ದರು. ಅಲ್ಲಿ ರೆಡ್‌ಕ್ರಾಸ್ ಅಧಿಕಾರಿಯೊಬ್ಬರು ಹಮಾಸ್ ಹೋರಾಟಗಾರರ ಜೊತೆ ಹಸ್ತಾಂತರದ ದಾಖಲೆಗಳಿಗೆ ಸಹಿ ಹಾಕಲು ಮೇಜಿನ ಬಳಿ ಕುಳಿತಿದ್ದರು. ಒತ್ತೆಯಾಳುಗಳು ಮತ್ತು ಮುಸುಕುಧಾರಿ ಬಂದೂಕುಧಾರಿಗಳು ತಮ್ಮ ಕುತ್ತಿಗೆಗೆ ಲ್ಯಾಮಿನೇಟೆಡ್ ಐಡಿ ಬ್ಯಾಡ್ಜ್‌ಗಳನ್ನು ಹೊಂದಿದ್ದರು. ವೇದಿಕೆಯಲ್ಲಿ ಡೆಸ್ಕ್ ಮತ್ತು ಧ್ವಜ ಇಡಲಾಗಿತ್ತು, ಆದರೆ ವೇದಿಕೆಯ ಪಕ್ಕದಲ್ಲಿ ಮೆಷಿನ್ ಗನ್ ಸಹ ಇತ್ತು. ಹಮಾಸ್ – ಪ್ರತಿಯೊಬ್ಬ ಒತ್ತೆಯಾಳು ತನ್ನೊಂದಿಗೆ ಇಸ್ರೇಲ್‌ಗೆ ಹಿಂತಿರುಗಲು ಕೆಲವು ಐಟಂಗಳ ಚೀಲವನ್ನು ನೀಡಿತು. ಕಳೆದ 477 ದಿನಗಳಿಂದ ಹಮಾಸ್‌ನ “ಆತಿಥ್ಯ” ಕ್ಕಾಗಿ ನಾಲ್ವರು ಒತ್ತೆಯಾಳುಗಳು ಧನ್ಯವಾದಗಳನ್ನು ಹೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ.
ಇಸ್ರೇಲ್ ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿತು. ಅವರಲ್ಲಿ 70 ಜನರನ್ನು ಅವರ ಅಪರಾಧಗಳ ಗಂಭೀರತೆಯಿಂದಾಗಿ ಈಜಿಪ್ಟ್ ಮೂಲಕ ನೆರೆಯ ದೇಶಗಳಿಗೆ ಗಡೀಪಾರು ಮಾಡಲಾಯಿತು.

https://x.com/i/status/1883092207332434164

ಜನವರಿ 19 ರಂದು ಕದನ ವಿರಾಮ ಜಾರಿಗೆ ಬಂದ ನಂತರ ಶನಿವಾರದ ವಿನಿಮಯವು ಎರಡನೇ ವಿನಿಮಯವಾಗಿದೆ. ಮೂರು ಒತ್ತೆಯಾಳುಗಳು ಮತ್ತು 90 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಒಂದು ವಾರದ ಹಿಂದೆ ಮೊದಲ ಸ್ವಾಪ್ನಲ್ಲಿ ಬಿಡುಗಡೆ ಮಾಡಲಾಯಿತು.
ಅಕ್ಟೋಬರ್ 7, 2023 ರಂದು ಇಸ್ರೇಲ್‌ ಒಳಗೆ ನುಗ್ಗಿ ಕನಿಷ್ಠ 1200 ಜನರನ್ನು ಕೊಂದ ದಾಳಿಯ ವೇಳೆ ಅಹಮಾಸ್‌ ಅಪಹರಣ ಮಾಡಿದವರಲ್ಲಿ ಈ ನಾಲ್ವರು ಇಸ್ರೇಲಿ ಯುವತಿಯರು ಸೇರಿದ್ದರು. ಅವರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗುತ್ತಿರುವ ಅನೇಕ ವೀಡಿಯೊಗಳು ಮತ್ತು ಚಿತ್ರಗಳನ್ನು ಐಡಿಎಫ್‌ (IDF) ಹಂಚಿಕೊಂಡಿದೆ.
ಹಮಾಸ್‌ನ ಈ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಗಾಜಾದ ಮೇಲೆ ನಡೆಸಿದ ದಾಳಿಯಲ್ಲಿ 47,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊನೆಗೂ 15 ತಿಂಗಳ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಜನವರಿ 19 ರಂದು ಗಾಜಾದಲ್ಲಿ ಹಮಾಸ್‌ನೊಂದಿಗೆ ಆರು ವಾರಗಳ ಕದನ ವಿರಾಮವನ್ನು ಪ್ರಾರಂಭಿಸಿತು. ಗಾಜಾ ಕದನ ವಿರಾಮ ಒಪ್ಪಂದದ ಮೊದಲ ಹಂತದಲ್ಲಿ, 90 ಪ್ಯಾಲೇಸ್ಟಿನಿಯನ್ ಕೈದಿಗಳಿಗೆ ಬದಲಾಗಿ ಹಮಾಸ್ ಮೂರು ಮಹಿಳೆಯರನ್ನು ಬಿಡುಗಡೆ ಮಾಡಿದೆ. ಆರು ವಾರಗಳ ಕದನ ವಿರಾಮದ ಮೂಲಕ, ಇಸ್ರೇಲಿ ಜೈಲಿನಲ್ಲಿರುವ ಸುಮಾರು 1,900 ಪ್ಯಾಲೆಸ್ಟೀನಿಯರಿಗೆ ಬದಲಾಗಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement