ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಅನೇಕ ಯಾತ್ರಾರ್ಥಿಗಳು ನೂಕುನುಗ್ಗಾಟದಿಂದ ನಂತರ ಮಹಾಕುಂಭದ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಬುಧವಾರ ನಸುಕಿನಲ್ಲ ನೂಕುನುಗ್ಗಲು ಉಂಟಾಯಿತು. ಕಾಲ್ತುಳಿತ ಸಂಭವಿಸುವ ಮೊದಲು ಅನೇಕ ಜನರು ಬ್ಯಾರಿಕೇಡ್‌ಗಳನ್ನು ಒಡೆಯಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಹಾಕುಂಭದ  ವೈಭವ ಕೃಷ್ಣ ಹೇಳಿದ್ದಾರೆ.

‘ಬ್ರಹ್ಮ ಮುಹೂರ್ತ’ಕ್ಕೂ ಮುನ್ನ ಬುಧವಾರ ಮುಂಜಾನೆ ಅಖಾರಾ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ ನಂತರ ಬ್ಯಾರಿಕೇಡ್ ಮುರಿದುಬಿತ್ತು ಎಂದು ಹೇಳಿದರು.
“ಮೌನಿ ಅಮಾವಾಸ್ಯೆಯ ದಿನದಂದು, ಬ್ರಾಹ್ಮ ಮುಹೂರ್ತಕ್ಕೆ ಮುಂಚಿತವಾಗಿ ಮಂಗಳವಾರ ತಡರಾತ್ರಿ 1 ಮತ್ತು 2 ರ ನಡುವೆ, ಅಖಾರಾ ಮಾರ್ಗದಲ್ಲಿ ಭಾರಿ ಜನರು ಜಮಾಯಿಸಿದರು, ಇದರಿಂದಾಗಿ ಇನ್ನೊಂದು ಬದಿಯಲ್ಲಿ ಬ್ಯಾರಿಕೇಡ್‌ಗಳು ಮುರಿದವು. ಈ ಭಾಗದ ಜನಸಂದಣಿಯು ಇನ್ನೊಂದು ಬದಿಗೆ ದಾಟಿತು ಮತ್ತು ಬ್ರಹ್ಮ ಮುಹೂರ್ತಕ್ಕಾಗಿ ಕಾಯುತ್ತಿರುವ ಭಕ್ತರತ್ತ ನುಗ್ಗಿತು. ಆಡಳಿತವು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಜಾರಿಗೊಳಿಸಿತು ಮತ್ತು ಆಂಬ್ಯುಲೆನ್ಸ್‌ಗಳಿಗೆ ಹಸಿರು ಕಾರಿಡಾರ್ ರಚಿಸಲಾಯಿತು. 90 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಿತು. ದುರದೃಷ್ಟವಶಾತ್, ಅದರಲ್ಲಿ 30 ಭಕ್ತರು ಸಾವಿಗೀಡಾಗಿದ್ದಾರೆ ಎಂದು ಕೃಷ್ಣ ಹೇಳಿದರು.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement