ವೀಡಿಯೊ | ಬೇಟೆಯಲ್ಲಿ ಎಡವಟ್ಟು ; ಕಾಡುಹಂದಿ ಸಮೇತ ಬಾವಿಗೆ ಬಿದ್ದ ಬೃಹತ್‌ ಹುಲಿ…! ಬಾವಿಯೊಳಗೆ ಥಂಡಾ ಥಂಡಾ…ಕೂಲ್‌ ಕೂಲ್‌..!

ಸಿಯೋನಿ: ಅಪರೂಪದ ವಿದ್ಯಮಾನವೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಸಮೇತ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ಭರಾಟೆಯಲ್ಲಿ ಹುಲಿ ನಿಯಂತ್ರಣ ಕಳೆದುಕೊಂಡು ಹಂದಿ ಜೊತೆಗೇ ಬಾವಿಗೆ ಬಿದ್ದಿದ್ದು, ನಂತರ ಹುಲಿ ಮತ್ತೆ ಹಂದಿ ಒಟ್ಟಿಗೆ ಬಾವಿಯಲ್ಲಿ ಜೀವ ರಕ್ಷಿಸಿಕೊಳ್ಳಲು ಒಟ್ಟಿಗೆ ಇರುವುದು ಕಂಡುಬಂದಿದೆ.

ಬಾವಿಯೊಳಗಿಂದ ಹುಲಿ ಮತ್ತು ಕಾಡುಹಂದಿಯ ಚೀರಾಟ ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ ಹುಲಿ ಮತ್ತು ಕಾಡುಹಂದಿ ಎರಡೂ ಬಾವಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಇದನ್ನು ನೋಡಿದ ಗ್ರಾಮಸ್ಥರಿಗೆ ಆಶ್ಚರ್ಯ ಹಾಗೂ ಗಾಬರಿ ಎರಡೂ ಆಗಿದೆ. ಈ ಸುದ್ದಿ ಹರಡಿ ನೂರಾರು ಜನರು ಜಮಾಯಿಸಿ ಹುಲಿ ಮತ್ತು ಹಂದಿಯ ಜುಗಲ್ ಬಂದಿ ನೋಡಿದ್ದಾರೆ.
ಬಾವಿಯಲ್ಲಿ ಕಾಡು ಹಂದಿ ಹುಲಿಯ ಪಕ್ಕದಲ್ಲೇ ಈಜುತ್ತಿದ್ದರೂ ಹುಲಿರಾಯ ಮಾತ್ರ ಬದುಕಿದರೆ ಸಾಕಪ್ಪ ಎಂದು ಹಂದಿಗೆ ಏನೂ ಮಾಡದೆ ಬಾವಿಯಿಂದ ಮೇಲೇರಲು ಪ್ರಯತ್ನ ಮಾಡುತ್ತಿತ್ತು.

ಪ್ರಮುಖ ಸುದ್ದಿ :-   ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ
https://twitter.com/PenchMP/status/1886709881945706951?ref_src=twsrc%5Etfw%7Ctwcamp%5Etweetembed%7Ctwterm%5E1886709881945706951%7Ctwgr%5Edc5abf33adc284258851636d11ddd3eaca5d682b%7Ctwcon%5Es1_&ref_url=https%3A%2F%2Fwww.lokmattimes.com%2Fsocial-viral%2Ftiger-and-wild-boar-trapped-inside-same-well-after-hunting-chase-goes-wrong-in-madhya-pradeshs-seoni-watch-video-a475%2F

ಹಂದಿ ಸಹ ಹುಲಿಗೆ ಹೆದರದೆ ತನ್ನ ಜೀವ ಉಳಿಸಿಕೊಳ್ಳಲು ತಾನೂ ಕೂಡ ಮೇಲೇರಲು ಪ್ರಯತ್ನಿಸುತ್ತಿತ್ತು. ಕೆಲ ಸಂದರ್ಣಗಳಲ್ಲಿ ಒಂದರ ಮೈ ಮತ್ತೊಂದಕ್ಕೆ ತಾಗುತ್ತಿದ್ದರೂ ಎರಡೂ ಪ್ರಾಣಿಗಳು ಸುಮ್ಮನಿದ್ದವು.
ಮಾಹಿತಿ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ವನ್ಯಜೀವಿ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಎರಡೂ ಪ್ರಾಣಿಗಳನ್ನು ಬಾವಿಯಿಂದ ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement