ವೀಡಿಯೊ…| ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಸ್ಪತ್ರೆಗೆ ದಾಖಲು ; ಆಘಾತಕಾರಿ ದೃಶ್ಯ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಸ್ಥಳೀಯ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಆಕೆ ತನ್ನ ಪತಿಯೊಂದಿಗೆ ದಿನಸಿ ಅಂಗಡಿಗೆ ಬಂದಿದ್ದರು. ಇದ್ದಕ್ಕಿದ್ದಂತೆ, ಅವರ ಪ್ಯಾಂಟ್‌ನಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು, ನಂತರ ಅವರು ಬೆನ್ನಿನ ಕೆಳಭಾಗದಿಂದ ಜ್ವಾಲೆಯು ಹೊರಹೊಮ್ಮಿತು.

ಈ ಭಯಾನಕ ಕ್ಷಣದ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಮೊಬೈಲ್‌ ಸ್ಫೋಟಗೊಂಡ ನಂತರ ಮಹಿಳೆ ಗಾಬರಿಯಿಂದ ಓಡಿದ್ದಾರೆ. ಅವರ ಪತಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.
ವೈರಲ್‌ ಆದ ವೀಡಿಯೊ ಶಾಪಿಂಗ್ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ಮಹಿಳೆ ಅಂಗಡಿ ಬಳಿ ಆಗಮಿಸುತ್ತಿದ್ದಂತೆ ಅವರ ಫೋನ್ ಇದ್ದಕ್ಕಿದ್ದಂತೆ ಸಿಡಿಯುತ್ತದೆ. ನಂತರ ಬೆಂಕಿಯ ಜ್ವಾಲೆ ಅವರ ಪ್ಯಾಂಟ್‌ ಹಿಂದಿನ ಜೇಬಿನಿಂದ ಬರುತ್ತದೆ.

ದಿ ಇಂಡಿಪೆಂಡೆಂಟ್ ಪ್ರಕಾರ, ಮಹಿಳೆಯನ್ನು ತಕ್ಷಣವೇ ಆಲ್ಫ್ರೆಡೊ ಅಬ್ರಾವೊ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳ ಕೈ, ಮುಂದೋಳು, ಬೆನ್ನು ಮತ್ತು ಪೃಷ್ಠದ ಮೇಲೆ ಮೊದಲ ಮತ್ತು ಎರಡನೇ ಹಂತದ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಈ ಘಟನೆಯು ತನ್ನ ಹೆಂಡತಿಗೆ ತೀವ್ರ ಆಘಾತವನ್ನುಂಟುಮಾಡಿದೆ ಎಂದು ಆಕೆಯ ಪತಿ ಮೇಟಿಯಸ್ ಲಿಮಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆಲ್ ಫೋನ್ ಸ್ಫೋಟ ನಡೆದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಿಮಾಚಲ ಪ್ರದೇಶದ ಸಲೂನಿ ಪ್ರದೇಶದ ಬಿಚುನಿ ಗ್ರಾಮದ 20 ವರ್ಷದ ಮಹಿಳೆಯೊಬ್ಬರು ಮೊಬೈಲ್ ಫೋನ್ ಸ್ಫೋಟದಿಂದ ತೀವ್ರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement