ವೀಡಿಯೊ..| ವಿಮಾನ ಲ್ಯಾಂಡ್‌ ಆಗುತ್ತಿದ್ದಾಗ ರನ್‌ ವೇಯಲ್ಲಿ ಅಚಾನಕ್‌ ಆಗಿ ಬಂದ ಮತ್ತೊಂದು ವಿಮಾನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿದ ಪೈಲಟ್‌…!

ಚಿಕಾಗೋ : ಮಂಗಳವಾರ ಬೆಳಿಗ್ಗೆ ಅಮೆರಿಕದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಯುವುದನ್ನು ಪೈಲಟ್‌ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾನೆ.
ಸೌತ್‌ವೆಸ್ಟ್ ಏರ್‌ಲೈನ್ಸ್ ಪೈಲಟ್ ಕೊನೆಯ ಕ್ಷಣದಲ್ಲಿ ವಿಮಾನದ ಲ್ಯಾಂಡಿಂಗ್ ಮಾಡುವುದನ್ನು ಕೈಬಿಟ್ಟು ಮತ್ತೆ ವಿಮಾನವನ್ನು ಹಾರಿಸಿ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಖಾಸಗಿ ಜೆಟ್ ಪೈಲಟ್‌ ಅನುಮತಿಯಿಲ್ಲದೆ ರನ್‌ವೇ ಪ್ರವೇಶಿಸಿದ್ದರಿಂದ ಹೀಗಾಗಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಿಳಿಸಿದೆ. ಸ್ಥಳೀಯ ಕಾಲಮಾನ ಮಂಗಳವಾರ ಬೆಳಗ್ಗೆ 8:50ರ ಸುಮಾರಿಗೆ ನಡೆದ ಘಟನೆಯನ್ನು ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.

ಎರಡು ವಿಮಾನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವಿಮಾನದ ಪೈಲಟ್‌ ಸಮಯ ಪ್ರಜ್ಞೆ ತೋರಿದ ವೀಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅಲ್ಲಿ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನ 2504ರ ಪೈಲಟ್‌ ತನ್ನ ರನ್‌ವೇಯಲ್ಲಿ ಇದ್ದಕ್ಕಿದ್ದಂತೆ ಬಿಳಿ ಖಾಸಗಿ ಜೆಟ್ ಕಾಣಿಸಿಕೊಂಡಾಗ ಲ್ಯಾಂಡಿಂಗ್‌ ಮಾಡುವುದನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟು ಮತ್ತೆ ವಿಮಾನ ಹಾರಿಸುವುದನ್ನು ನೋಡಬಹುದು.
ಸೌತ್‌ವೆಸ್ಟ್ ಏರ್‌ಲೈನ್ಸ್ ಪೈಲಟ್ ಖಾಸಗಿ ಜೆಟ್‌ ಕಂಡು ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ವಿಮಾನದ ವೇಗವನ್ನು ಹೆಚ್ಚಿಸಿ ಹಾರಿಸಿದ ಈ ಕ್ರಮವು ಅದೇ ರನ್‌ವೇಯಲ್ಲಿ ಅಚಾನಕ್ಕಾಗಿ ಬಂದ ಖಾಸಗಿ ವಿಮಾನಕ್ಕೆ ಬೃಹತ್‌ ವಿಮಾನವು ಡಿಕ್ಕಿಯಾಗುವುದು ತಪ್ಪಿದೆ.

ಸೌತ್‌ವೆಸ್ಟ್ ಏರ್‌ಲೈನ್ಸ್ ಪ್ರಕಾರ, ಸಂಭಾವ್ಯ ಘಟನೆಯನ್ನು ತಡೆಯಲು ವಿಮಾನ ಸಿಬ್ಬಂದಿ ಗೋ-ರೌಂಡ್ ಮಾಡಿದ ನಂತರ ವಿಮಾನವು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಬಲವಂತವಾಗಿ ಮೇಲಕ್ಕೆ ಹಾರುವ ಮೊದಲು ವಿಮಾನವು ರನ್‌ವೇ ಮೇಲೆ ಸ್ಪರ್ಶಿಸಲು ಕೇವಲ 50 ಅಡಿಗಳಷ್ಟು ದೂರದಲ್ಲಿತ್ತು ಎಂದು ವರದಿಯಾಗಿದೆ. ಖಾಸಗಿ ಜೆಟ್‌ನ ಪೈಲಟ್ ಆರಂಭದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‌ನಿಂದ ಬಂದ ಸರಿಯಾಗಿರದ ಮಾಹಿತಿಯನ್ನು ಓದಿದ್ದರಿಂದ ಇದು ನಡೆದಿದೆ ಎನ್ನಲಾಗಿದೆ.
ನಂತರ ಮಿಡ್‌ವೇ ಏರ್ ಟ್ರಾಫಿಕ್ ಕಂಟ್ರೋಲ್ ಮಾಹಿತಿಯನ್ನು ಸರಿಪಡಿಸಿತು ಮತ್ತು ಖಾಸಗಿ ಜೆಟ್‌ನ ಪೈಲಟ್‌ಗೆ ಕನಿಷ್ಠ ಒಂಬತ್ತು ಬಾರಿ ಸೆಂಟರ್ ರನ್‌ವೇ 31 ರಿಂದ ದೂರವಿರಿ ಎಂದು ಎಚ್ಚರಿಕೆಯ ಸಂದೇಶ ನೀಡಿತು. ಆದಾಗ್ಯೂ ಕಾಸಗಿ ಜೆಟ್‌ ಪೈಲಟ್ ಆ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ.
ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನವು ಒಮಾಹಾದಿಂದ ಆಗಮಿಸುತ್ತಿತ್ತು ಎನ್ನಲಾಗಿದೆ.
ಕಳೆದ ತಿಂಗಳು ಸೇನಾ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ಜೆಟ್ ನಡುವೆ ಆಗಸದಲ್ಲೇ ಡಿಕ್ಕಿ ಸಂಭವಿಸಿ 67 ಜನರನ್ನು ಸಾವಿಗೀಡಾಗಿದ್ದರು.

ಪ್ರಮುಖ ಸುದ್ದಿ :-   ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement