ಪಾಕಿಸ್ತಾನ ರೈಲು ಅಪಹರಣ: ಎಲ್ಲ ಒತ್ತೆಯಾಳುಗಳ ಬಿಡುಗಡೆ ; 33 ಬಿಎಲ್‌ಎ ಬಂಡುಕೋರರ ಹತ್ಯೆ, ; 28 ಯೋಧರು ಸಾವು

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿ 212 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲಾ ಬಲೂಚ್ ದಂಗೆಕೋರರು ಕೊಲ್ಲಲ್ಪಟ್ಟಿದ್ದಾರೆ ಮತ್ತು ದಿನವಿಡೀ ತೀವ್ರವಾದ ಮಿಲಿಟರಿ ಕಾರ್ಯಾಚರಣೆಯ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಸಂಜೆ ತಿಳಿಸಿದೆ.
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಯಿಂದ ಇಪ್ಪತ್ತೊಂದು ಪ್ರಯಾಣಿಕರು (ರಜೆ ಮೇಲಿದ್ದ ಸೈನಿಕರು) ಮತ್ತು ನಾಲ್ವರು ಅರೆಸೈನಿಕರು ಕೊಲ್ಲಲ್ಪಟ್ಟರು, ಆದರೆ ಭದ್ರತಾ ಪಡೆಗಳು ಸ್ಥಳದಲ್ಲಿದ್ದ ಎಲ್ಲಾ 33 ಬಂಡುಕೋರರನ್ನು ಕೊಂದಿದ್ದಾರೆ ಎಂದು ಸೇನಾ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಎಲ್ಲಾ ಭಯೋತ್ಪಾದಕರನ್ನು ಕೊಂದು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಸಶಸ್ತ್ರ ಪಡೆಗಳು (ಬುಧವಾರ) ಸಂಜೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದವು” ಎಂದು ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಹೇಳಿದ್ದಾರೆ.

ಒಂಬತ್ತು ಬೋಗಿಗಳಲ್ಲಿ ಸುಮಾರು 500 ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್‌ಪ್ರೆಸ್ ರೈಲು ಮಾರ್ದಲ್ಲಿ ಮಂಗಳವಾರ ಸ್ಫೋಟಿಸಿ ಕ್ವೆಟ್ಟಾದಿಂದ ಸುಮಾರು 160 ಕಿಮೀ ದೂರದಲ್ಲಿರುವ ಪರ್ವತ ಪ್ರದೇಶದಲ್ಲಿ ಬಿಎಲ್‌ಎ(BLA) ರೈಲನ್ನು ಹೈಜಾಕ್ ಮಾಡಿತು. ರೈಲು ಪೇಶಾವರಕ್ಕೆ ತೆರಳುತ್ತಿತ್ತು.
ರೈಲಿನ ಮೇಲೆ ದಾಳಿಯ ನಂತರ ದಂಗೆಕೋರರ ವಿರುದ್ಧ ವೈಮಾನಿಕ ಆಕ್ರಮಣ ಸೇರಿದಂತೆ ಬಹು-ಹಂತದ ದಾಳಿಯನ್ನು ಪ್ರಾರಂಭಿಸಲಾಯಿತು.
ರಕ್ಷಿಸಲಾದ ವ್ಯಕ್ತಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಅವರನ್ನು ಬಂಡುಕೋರರು ಮಾನವ ಗುರಾಣಿಯಾಗಿ ಬಳಸುತ್ತಿದ್ದರು. ಸ್ಫೋಟಕಗಳು ತುಂಬಿದ್ದ ನಡುವಂಗಿಗಳನ್ನು ಧರಿಸಿದ್ದ ದಂಗೆಕೋರರು, ಮಹಿಳೆಯರು ಮತ್ತು ಮಕ್ಕಳನ್ನು ಒಟ್ಟುಗೂಡಿಸಿ ಹತ್ತಿರದಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದರು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದರು ಎಂದು ಅಧಿಕಾರಿಗಳು ಮೊದಲು ಹೇಳಿದ್ದರು.
ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಅವರ ಊರುಗಳಿಗೆ ಕಳುಹಿಸಲಾಗುತ್ತಿದ್ದು, ಗಾಯಾಳುಗಳನ್ನು ಮಾಚ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ಮುಕ್ತಾಯಗೊಂಡಂತೆ 300 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಭದ್ರತಾ ಪಡೆಗಳು ರಕ್ಷಿಸಿವೆ.

ಪ್ರಮುಖ ಸುದ್ದಿ :-   ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ...!

ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಬಲೂಚ್ ಬಂಡುಕೋರರ ದಾಳಿಗಳು ನಡೆದಿವೆಯಾದರೂ, ಅವರು ಪ್ರಯಾಣಿಕ ರೈಲನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲು. ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಪ್ರತಿಪಾದಿಸುವ ವಿವಿಧ ಬಲೂಚ್ ಪ್ರತಿರೋಧ ಗುಂಪುಗಳು ಪಾಕಿಸ್ತಾನ ಮತ್ತು ಚೀನಾದ ವಿರುದ್ಧ ಹೊಸ ತೀವ್ರತರವಾದ ಆಕ್ರಮಣವನ್ನು ಘೋಷಿಸಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ ಮತ್ತು ಬಲೂಚ್ ರಾಷ್ಟ್ರೀಯ ಸೇನೆ ಎಂಬ ಹೆಸರಿನ ಏಕೀಕೃತ ಸಂಘಟನೆಯನ್ನು ಘೋಷಿಸಿವೆ.
ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನವು ಹಲವು ವರ್ಷಗಳಿಂದ ಬಂಡುಕೋರರ ವಿರುದ್ಧ ಹೋರಾಡುತ್ತಿದೆ ಮತ್ತು ಇತ್ತೀಚೆಗೆ ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ. ಬಂಡುಕೋರ ಗುಂಪುಗಳು ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಬಯಸುತ್ತಿದ್ದು, ತೈಲ ಮತ್ತು ಖನಿಜ-ಸಮೃದ್ಧ ಬಲೂಚಿಸ್ತಾನದ ಸ್ವಾತಂತ್ರ್ಯವಕ್ಕಾಗಿ ಹೋರಾಡುತ್ತಿವೆ. ಜನಾಂಗೀಯ ಬಲೂಚ್ ಅಲ್ಪಸಂಖ್ಯಾತರು ಪಾಕಿಸ್ತಾನಿ ಸರ್ಕಾರದಿಂದ ತಾರತಮ್ಯ ಮತ್ತು ಶೋಷಣೆಯನ್ನು ಎದುರಿಸುತ್ತಿದ್ದಾರೆ ಎಂದು ಈ ಗುಂಪುಗಳು ಆರೋಪಿಸುತ್ತವೆ.

ಪ್ರಮುಖ ಸುದ್ದಿ :-   ಸರಕು ಹಡಗು -ತೈಲ ಟ್ಯಾಂಕರ್‌ ಹಡಗು ಡಿಕ್ಕಿ ; ಮತ್ತೆ ನಿಜವಾದ 'ಆಧುನಿಕ ನಾಸ್ಟ್ರಾಡಾಮಸ್' ಭವಿಷ್ಯವಾಣಿ : ಟ್ರಂಪ್‌ ಹತ್ಯೆ ಯತ್ನದ ಬಗ್ಗೆ ಹೇಳಿದ್ದ ಈತನಿಗಿದೆ ಭಾರತದ ನಂಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement