ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯತಗೊಳಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಬಲವಾದ ಪೆಟ್ಟು ನೀಡಿದೆ…!
ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಪ್ರೇರಿತ ಇತ್ತೀಚಿನ ದಂಗೆಯ ಪ್ರಯತ್ನವನ್ನು ಭಾರತದ ನೆರವಿನೊಂದಿಗೆ ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಆರಂಭಿಸಿದ ಈ ಸಂಚಿನ ಪ್ರಕಾರ, ಜನರಲ್ ವಾಕರ್-ಉಜ್-ಝಮಾನ್ ಅವರ ಬದಲಿಗೆ ಜಮಾತ್-ಎ-ಇಸ್ಲಾಮಿಗೆ ನಿಕಟವಾಗಿರುವ ಮತ್ತು ಪಾಕಿಸ್ತಾನಿ ಸೇನೆಯೊಂದಿಗೆ ಸಂಬಂಧ ಹೊಂದಿರುವ ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಫೈಜುರ್ ರಹಮಾನ್ ಅವರನ್ನು ಬಾಂಗ್ಲಾದೇಶದ ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವ ಉದ್ದೇಶದಿಂದ ಈ ದಂಗೆಯ ಯತ್ನ ನಡೆಸಲಾಗಿತ್ತು.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ನಿಕಟ ಮಿಲಿಟರಿ ಸಂಬಂಧಗಳನ್ನು ರೂಪಿಸಲು ಜನರಲ್ ವಾಕರ್-ಉಜ್-ಜಮಾನ್ ವಿರೋಧಿಸಿದ್ದರಿಂದ ಐಎಸ್‌ಐ (ISI) ಅವರ ವಿರುದ್ಧ ಅಸಮಾಧಾನಗೊಂಡಿತ್ತು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ನಿಕಟ ಮಿಲಿಟರಿ ಸಂಬಂಧ ರೂಪಿಸುವುದಕ್ಕೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಮತ್ತು ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳ ಬೆಂಬಲವಿದೆ. ಇದರ ವಿರುದ್ಧ ಜನರಲ್ ವಾಕರ್-ಉಜ್-ಜಮಾನ್ ತಳೆದ ನಿಲುವು ಮತ್ತು ಆಗಸ್ಟ್ 5 ರಂದು ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ತೆರಳುವುದನ್ನು ಖಾತ್ರಿಪಡಿಸುವಲ್ಲಿ ಅವರ ಪಾತ್ರವು ಇಸ್ಲಾಮಿಸ್ಟ್ ಗುಂಪುಗಳು ಮತ್ತು ಪಾಕಿಸ್ತಾನದ ಪರ ಇರುವ ಕೆಲವರನ್ನು ಕೆರಳಿಸಿತ್ತು. ಶೇಖ್ ಹಸೀನಾ ಅವರ ನಿರ್ಗಮನದ ನಂತರವೂ ಜನರಲ್ ವಾಕರ್-ಉಜ್-ಜಮಾನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಸೇನೆಯು ದೇಶದಲ್ಲಿ ಇಸ್ಲಾಮಿಸ್ಟ್ ಪ್ರಭಾವದ ವಿರುದ್ಧ ಭದ್ರಕೋಟೆಯಾಗಿ ಉಳಿಯಿತು. ಇದು ಪಾಕಿಸ್ತಾನದ ಐಎಸ್‌ಐಗೆ ನುಂಗಲಾರದ ತುತ್ತಾಗಿತ್ತು.
ಸೇನಾ ಮುಖ್ಯಸ್ಥರನ್ನು ಹುದ್ದೆಯಿಂದ ವಜಾಗೊಳಿಸಲು ಐಎಸ್‌ಐ ರೂಪಿಸಿದ ಯೋಜನೆಯಂತೆ ಕೆಲವು ಪಾಕಿಸ್ತಾನ ಬೆಂಬಲಿತ ಅಧಿಕಾರಿಗಳು ರಹಸ್ಯ ಸಭೆ ನಡೆಸಿದ್ದರು ಎನ್ನಲಾಗಿದೆ. ಆದರೆ ದಂಗೆಯ ಬಗ್ಗೆ ಅರಿತ ಭಾರತವು ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಿತು, ಇದರಿಂದಾಗಿ ಅವರು ಪಾಕಿಸ್ತಾನ ಬೆಂಬಲಿತ ಕೆಲವು ಜನರಲ್‌ಗಳ ದಂಗೆಯನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.
ಭಾರತದ ಮಧ್ಯಸ್ಥಿಕೆಯು ಜನರಲ್ ವಾಕರ್-ಉಜ್-ಝಮಾನ್‌ಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ಮಧ್ಯಂತರ ಸರ್ಕಾರದ ಒಳಗೆ ಮತ್ತು ಹೊರಗಿನ ಇಸ್ಲಾಮಿಸ್ಟ್ ಶಕ್ತಿಗಳಿಗೆ ಭಾರಿ ಹೊಡೆತವನ್ನು ನೀಡಿತು. ಸಂಭಾವ್ಯ ದಂಗೆಯ ಬಗ್ಗೆ ಭಾರತವು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿತು, ಪ್ರದೇಶವನ್ನು ಅಸ್ಥಿರಗೊಳಿಸುವುದರಿಂದ ಆಗಬಹುದಾದ ಪರಿಣಾಮಗಳನ್ನು ಒತ್ತಿಹೇಳಿತು. ದಂಗೆಯ ಯತ್ನಕ್ಕೆ ಬೆಂಬಲಿಸುವುದರ ವಿರುದ್ಧ ಅಮೆರಿಕವು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ಗೆ ಎಚ್ಚರಿಕೆ ನೀಡಿತು. ಇದು ಪಿತೂರಿಗಾರರ ಯೋಜನೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ವಿರುದ್ಧ ದಂಗೆಯ ವಿಫಲ ಯತ್ನದ ಬಗ್ಗೆ ಈಗ ವರದಿಗಳು ಹೊರಹೊಮ್ಮುತ್ತಿವೆ. ಗುಪ್ತಚರ ಮೂಲಗಳು ದಂಗೆಯ ಸಂಚು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮೂಲಕ ಸಂಯೋಜಿತವಾಗಿದೆ ಎಂದು ಸೂಚಿಸುತ್ತವೆ.
ಬಾಂಗ್ಲಾದೇಶದ ಸೇನಾ ಮುಖ್ಯಸ್ಥರನ್ನು ಪದಚ್ಯುತಗೊಳಿಸಲು ಯತ್ನ
ಪ್ರಧಾನಿ ಶೇಖ್ ಹಸೀನಾ ಅವರು ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದ ನಂತರ ಅಧಿಕಾರವನ್ನು ವಶಪಡಿಸಿಕೊಳ್ಳಲು ಇಸ್ಲಾಮಿಸ್ಟ್‌ಗಳಿಗೆ ವಿರುದ್ಧವಾಗಿ ನಿಂತಿದ್ದು ಬಾಂಗ್ಲಾದೇಶದ ಮಿಲಿಟರಿ. ಶೇಖ್ ಹಸೀನಾ ಅವರನ್ನು ಸುರಕ್ಷಿತವಾಗಿ ದೇಶದಿಂದ ಹೊರಗೆ ಕಳುಹಿಸಲು ಜನರಲ್ ವಕಾರ್-ಉಜ್ಜಾಮಾನ್ ವ್ಯವಸ್ಥೆ ಮಾಡಿರುವುದು ಪಾಕಿಸ್ತಾನದ ಅಸಮಾಧಾನಕ್ಕೆ ಕಾರಣವೆಂದು ನಂಬಲಾಗಿದೆ. ವರದಿಯ ಪ್ರಕಾರ, ಬಾಂಗ್ಲಾದೇಶದ ಡೈರೆಕ್ಟರೇಟ್ ಜನರಲ್ ಆಫ್ ಫೋರ್ಸಸ್ ಇಂಟೆಲಿಜೆನ್ಸ್ (ಡಿಜಿಎಫ್‌ಐ)ನ ಉನ್ನತ ಶ್ರೇಣಿಯ ಮೂಲಗಳು ಆಗಸ್ಟ್ 5 ರಂದು ಶೇಖ್ ಹಸೀನಾ ಅವರನ್ನು ಆಕೆಯ ನಿವಾಸದಿಂದ ಸೆರೆಹಿಡಿಯಲು ಎಡಿಎಸ್‌ಎಂ ನಾಯಕರು ಮತ್ತು ಇಸ್ಲಾಮಿಸ್ಟ್‌ಗಳು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿವೆ. ಮೊದಲು ಶೇಖ್ ಹಸೀನಾ ಅವರನ್ನು ಬಂಧಿಸಿ, ನಂತರಅವರ ವಿರುದ್ಧ ವಿಚಾರಣೆ ನಡೆಸಿ, ಅಂತಿಮವಾಗಿ ಅವರಿಗೆ ಮರಣದಂಡನೆ ವಿಧಿಸುವುದು ಅವರ ಯೋಜನೆಯಾಗಿತ್ತು ಎಂದು ಡಿಜಿಎಫ್‌ಐ ಮೂಲಗಳನ್ನು ಉಲ್ಲೇಖಿಸಿ ಸ್ವರಾಜ್ ವರದಿ ಬಹಿರಂಗಪಡಿಸಿದೆ.
ಅಲ್ಲದೆ, ಬಾಂಗ್ಲಾದೇಶದ ಸೇನೆಯ ಮುಖ್ಯಸ್ಥರು ದೇಶದಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆ ಮತ್ತು ಅಶಾಂತಿಯ ವಿರುದ್ಧ ಕಠಿಣ ಎಚ್ಚರಿಕೆಯನ್ನು ನೀಡಿದ್ದರು. ಈ ಎಚ್ಚರಿಕೆಯನ್ನು ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ ಎಂದು ನಂಬಲಾಗಿದೆ, ಇದು ಪಾಕಿಸ್ತಾನದ ಬೆಂಬಲಿತರನ್ನು ಕೆರಳಿಸಿದೆ.
ದಂಗೆ ರೂಪಿಸಿದ್ದು ಹೇಗೆ…?
ಪಾಕಿಸ್ತಾನದ ಐಎಸ್‌ಐ ನಿರ್ದೇಶನದ ಮೇರೆಗೆ ಬಾಂಗ್ಲಾದೇಶದ ಸೇನೆಯ ಕ್ವಾರ್ಟರ್ ಮಾಸ್ಟರ್ ಜನರಲ್ (ಕ್ಯೂಎಂಜಿ) ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಫೈಜುರ್ ರೆಹಮಾನ್ ಈ ದಂಗೆಯನ್ನು ಕಾರ್ಯಗತಗೊಳಿಸಲು ಸಜ್ಜಾಗಿದ್ದ ಎಂದು ವರದಿ ಹೇಳಿದೆ. ದಂಗೆ ಯಶಸ್ವಿಯಾದರೆ, ಅವರನ್ನು ಹೊಸ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಬೇಕಿತ್ತು. ಲೆಫ್ಟಿನೆಂಟ್ ಜನರಲ್ ರೆಹಮಾನ್ ಅವರು ಜಮಾತ್-ಎ-ಇಸ್ಲಾಮಿಯ ನಿಕಟವರ್ತಿ ಮತ್ತು ಕಟ್ಟರ್ ಇಸ್ಲಾಮಿಸ್ಟ್ ಆಗಿದ್ದಾರೆ. ಅವರು ಪಾಕಿಸ್ತಾನಿ ಮಿಲಿಟರಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆಂದು ಪರಿಗಣಿಸಲಾಗಿದೆ ಮತ್ತು ಗುಪ್ತಚರ ಹಂಚಿಕೆ ಸೇರಿದಂತೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸೇನೆಗಳ ನಡುವೆ ಬಲವಾದ ಸಂಬಂಧ ಸ್ಥಾಪಿಸುವುದನ್ನು ಅವರು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಯೂಎಂಜಿ ಆಗುವ ಮೊದಲು, ರೆಹಮಾನ್ ಕೆಲವು ತಿಂಗಳುಗಳ ಕಾಲ ಡಿಜಿಎಫ್‌ಐ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ವಿಫಲವಾದ ದಂಗೆಯ ಹೊರತಾಗಿಯೂ, ಜನರಲ್ ವಾಕರ್-ಉಜ್-ಜಮಾನ್ ಅವರು ಇಸ್ಲಾಮಿಸ್ಟ್ ಮತ್ತು ಪಾಕಿಸ್ತಾನಿ ಪರ ಅಂಶಗಳ ವಿರುದ್ಧದ ನಿಲುವಿನಿಂದಾಗಿ ಇನ್ನೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಮಧ್ಯ ಆಫ್ರಿಕಾದ ಗಣರಾಜ್ಯಕ್ಕೆ ಅವರ ಭೇಟಿ ನೀಡಲು ಭಾರತವು ವೇದಿಕೆ ಒದಗಿಸಿತು. ಇದು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಜನರಲ್ ವಾಕರ್-ಉಜ್-ಜಮಾನ್ ಅವರಿಗೆ ಸಂವಹನ ನಡೆಸಲು ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಸಂಚುಕೋರರು ಅವರು ಅಲ್ಲಿಂದ ಹಿಂದಿರುಗಿದ ನಂತರ ಅವರನ್ನು ಬಂಧಿಸಲು ಪ್ರಯತ್ನಿಸಿದರು, ಆದರೆ ಇದು ಭಾರತದ ನೆರವಿನೊಂದಿಗೆ ಮತ್ತೆ ವಿಫಲವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ