
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾದ ನಿವೃತ್ತ ಪ್ರಾಚಾರ್ಯ ಮಾದೇವ ಎಂ ಹೆಗಡೆ (92)ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ದೀರ್ಘ ಕಾಲ ಶಿರಸಿಯ ಸರಕುಳಿಯ ಶಾಂತಿಕಾಂಭಾ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಶಿರಸಿಯ ಲೈನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್ ಜೋನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸುಮಾರು 30 ವರ್ಷಗಳ ಲಯನ್ಸ್ ಸಂಸ್ಥೆಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದರು. ಕುಮಟಾದ ವಿದ್ಯಾಧಿರಾಜ ಪೊಲಿಟೆಕ್ನಿಕ್ ಕಾಲೇಜ್ ಪ್ರಾಚಾರ್ಯರಾಗಿ, ಕುಮಟಾದ ಕೊಂಕಣ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.
ತೆಪ್ಪದ ಮಠದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಧರ್ಮದರ್ಶಿಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು, 2005 ರಲ್ಲಿ ಶ್ರೀ ದೇವಾಲಯದ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಗ್ಲಿಷ್ ಉಪನ್ಯಾಸಕರಾಗಿದ್ದ ಮಾದೇವ ಎಂ. ಹೆಗಡೆ (ಎಂ.ಎಂ. ಹೆಗಡೆ) ಅವರು ಇಂಗ್ಲಿಷ್ ಉಚ್ಚಾರ ಹಾಗೂ ವ್ಯಾಕರಣದ ಬಗ್ಗೆ ಪರಿಣತಿ ಹೊಂದಿದ್ದರು.

ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಯ ಪುತ್ರ ಮಹಾಬಲೇಶ್ವರ ಎಂ. ಹೆಗಡೆ ಹೊಲನಗದ್ದೆಯ ಗ್ರಾಂ ಪಂಚಾಯತ ಅಧ್ಯಕ್ಷರಾಗಿದ್ದಾರೆ. ಕಿರಿಯ ಪುತ್ರ ವಿನು ಹೆಗಡೆ, ವಿಜಯೇಂದ್ರ ಒಡೆತನದ ಶಿವಮೊಗ್ಗದ ಕಾಲೇಜಿನ ಆಡಳಿತದ ಮುಖ್ಯಸ್ಥರಾಗಿದ್ದಾರೆ.
8 ದಿನದ ಹಿಂದೆ ಶಿವಮೊಗ್ಗದ ತಮ್ಮ ಕಿರಿಯ ಮಗನ ಮನೆಗೆ ಹೋಗಿದ್ದರು. ಬುಧವಾರ ಮಧ್ಯಾಹ್ನ ನಿಧನರಾರಾಗಿದ್ದಾರೆ.
ಮೃತರು ಅಪಾರ ಬಂದು ಬಳಗ ವನ್ನು ಅಗಲಿದ್ದಾರೆ.
ಗುಡೆ ಅಂಗಡಿ ಹವ್ಯಕ ಸಂಘದ ಅಧ್ಯಕ್ಷರಾದ ಕೆ. ಆರ್. ಭಟ್ಟ. ಉಪಾಧ್ಯಕ್ಷ ಎನ್. ವಿ. ಹೆಗಡೆ. ಶಾಸಕ ದಿನಕರ ಶೆಟ್ಟಿ, ಕೆನರಾ ಎಕ್ಸಲೆನ್ಸ್ ಗೋರೆ ಕಾಲೇಜಿನ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ. ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದ ಧರ್ಮದರ್ಶಿ ಪ್ರೊ. ವಿ. ಎಸ್. ಹೆಗಡೆ. ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಅಶೋಕೆಯ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಹೆಗಡೆ ಮೊದಲಾದವರು ನಿವೃತ್ತ ಪ್ರಾಚಾರ್ಯ ಎಂ.ಎಂ.ಹೆಗಡೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ