ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ.
ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ ಕುಳಿತಿರುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಆನೆ. ತನ್ನ ಸೊಂಡಿಲನ್ನು ನೀರಿನಲ್ಲಿ ಇಳಿಸಿ ನಿರಾಳವಾಗಿ ನೀರು ಕುಡಿಯಲು ಆರಂಭಿಸುತ್ತದೆ. ಆದರೆ, ಮರೆಯಲ್ಲಿ ತನ್ನನ್ನೇ ದಿಟ್ಟಿಸುತ್ತಿದ್ದ ಸಿಂಹಿಣಿಯನ್ನು ನೋಡಿದ ಗಜರಾಜ ಸುಮ್ಮನೆ ಬಿಡಲಿಲ್ಲ!

“ನನಗೆ ಬಾಯಾರಿಕೆಯಾಗಿದೆ, ಮೊದಲು ನೀರು ಕುಡಿಯಲು ಬಿಡು. ಆಮೇಲೆ ಮುಂದಿನದು” ಎನ್ನುವಂತೆ ಆನೆ ನಡೆದುಕೊಂಡ ರೀತಿ ನೆಟ್ಟಿಗರ ಗಮನ ಸೆಳೆದಿದೆ.
ಸೊಂಡಿಲೇ ಆಯುಧ, ಘೀಂಕಾರವೇ ಎಚ್ಚರಿಕೆ
ನೀರು ಕುಡಿಯಲು ಕೆಲಹೊತ್ತು ತಾಳಮೆಯಿಂದ ಕಾಯ್ದ ಆನೆ ತನ್ನ ಏಕಾಂತಕ್ಕೆ ಭಂಗ ತಂದ ಸಿಂಹಿಣಿಗೆ ಕಲಿಸಿದ ಪಾಠ ಮಾತ್ರ ಅದ್ಭುತ. ಕ್ಷಣಾರ್ಧದಲ್ಲಿ ತನ್ನ ಸೊಂಡಿಲಿನಲ್ಲಿ ನೀರನ್ನು ತುಂಬಿಕೊಂಡ ಆನೆ, ಸಿಂಹಿಣಿಯ ಮೇಲೆ ‘ವಾಟರ್ ಗನ್’ ಮೂಲಕ ನೀರು ಎರಚಿದಂತೆ ಸ್ಪ್ರೇ ಮಾಡಿತು! ಅಷ್ಟಕ್ಕೇ ನಿಲ್ಲದೆ ಜೋರಾಗಿ ಘೀಂಕಾರ ಹಾಕುತ್ತಾ ಅದರತ್ತ ನುಗ್ಗಿತು. ಕಾಡಿನ ರಾಣಿ ಎನಿಸಿಕೊಂಡ ಸಿಂಹಿಣಿಗೆ ಅಲ್ಲಿಂದ ಕಾಲು ಕೀಳದೆ ಬೇರೆ ದಾರಿಯೇ ಇರಲಿಲ್ಲ.

ನಿಸರ್ಗ ಕಲಿಸುವ ಪಾಠ
ಸಿಂಹಗಳು ಗುಂಪಿನಲ್ಲಿದ್ದಾಗ ಮಾತ್ರ ಅಪರೂಪವಾಗಿ ಸಣ್ಣ ಆನೆಗಳ ಮೇಲೆ ದಾಳಿ ಮಾಡುವ ಧೈರ್ಯ ತೋರುತ್ತವೆ . ಆದರೆ ಈ ವೀಡಿಯೊದಲ್ಲಿ ಸಿಂಹಿಣಿ ಮತ್ತು ಆನೆ ಎರಡೂ ಸಣ್ಣ ವಯಸ್ಸಿನ ಪ್ರಾಣಿಗಳಂತೆ ಕಾಣುತ್ತಿದ್ದು, ಅವುಗಳ ನಡುವಿನ ಈ ಸನ್ನಿವೇಶ ಭಯಕ್ಕಿಂತ ಹೆಚ್ಚಾಗಿ ತಮಾಷೆಯಾಗಿ ಕಂಡಿದೆ.
ಒಬ್ಬ ಬಳಕೆದಾರರು “ಆನೆಗೆ ತನ್ನ ಸೊಂಡಿಲಿನ ಮೂಲಕ ಭಾವನೆ ವ್ಯಕ್ತಪಡಿಸುವುದು ಎಷ್ಟು ಚೆನ್ನಾಗಿ ಗೊತ್ತು ನೋಡಿ” ಎಂದು ಹೇಳಿದ್ದಾರೆ. ಇನ್ನೊಬ್ಬರು “ಆನೆಯ ಘೀಂಕಾರ ಡೈನೋಸಾರ್ ಸದ್ದಿನಂತೆ ಭೀಕರವಾಗಿದೆ” ಎಂದು ಹೇಳಿದ್ದಾರೆ.
ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಆ ಪುಣ್ಯಾತ್ಮರಿಗೆ ಧನ್ಯವಾದ ಹೇಳಲೇಬೇಕು. ಏಕೆಂದರೆ ಆ ಒಂದು ಹನಿ ನೀರಿಗಾಗಿ ಕಾಡಿನ ಈ ಅತಿರಥ-ಮಹಾರಥರು ಮುಖಾಮುಖಿಯಾಗುವ ದೃಶ್ಯವನ್ನು ನೋಡುವ ಭಾಗ್ಯ ನಮಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement