ವಿಡಿಯೋ | ಬೆಚ್ಚಿಬೀಳಿಸುವ ದೃಶ್ಯ : ಭೀಕರ ಗಾಳಿ ರಭಸಕ್ಕೆ ತಗಡಿನ ಶೀಟ್‌ ಜೊತೆ 50 ಅಡಿ ಎತ್ತರಕ್ಕೆ ಹಾರಿಹೋಗಿ ಬಿದ್ದ ವ್ಯಕ್ತಿ

ಬರೇಲಿ/ಲಕ್ನೋ: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತ ಮತ್ತು ಮಳೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ಬರೇಲಿ ಜಿಲ್ಲೆಯ ಬಮಿಯಾನಾ ಗ್ರಾಮದಲ್ಲಿ ಸಂಭವಿಸಿದ ಒಂದು ಘಟನೆ ಚಂಡಮಾರುತದ ತೀವ್ರತೆಗೆ ಸಾಕ್ಷಿಯಾಗಿದೆ. ಬಲವಾದ ಗಾಳಿಯ ವೇಗಕ್ಕೆ ವ್ಯಕ್ತಿಯೊಬ್ಬ ತಗಡಿನ ಶೀಟ್‌ನೊಂದಿಗೆ ಸುಮಾರು 50 ಅಡಿ ಎತ್ತರಕ್ಕೆ ಹಾರಿ ಹೋಗಿರುವ ಆಘಾತಕಾರಿ ದೃಶ್ಯಗಳು ಮುನ್ನೆಲೆಗೆ ಬಂದಿವೆ.
ಬಮಿಯಾನಾ ಗ್ರಾಮದ ನಿವಾಸಿ ನನ್ಹೆ ಮಿಯಾ ಎಂಬವರು ಬಿರುಗಾಳಿ ಬೀಸುತ್ತಿದ್ದಾಗ ಹಾರಿಹೋಗದಂತೆ ತಗಡಿನ ಶೆಡ್‌ಗೆ ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ, ಗಾಳಿಯ ವೇಗ ಎಷ್ಟಿತ್ತೆಂದರೆ ಹಗ್ಗವು ತುಂಡಾಗಿದ್ದು, ತಗಡಿನ ಶೀಟ್‌ನೊಂದಿಗೆ ನನ್ಹೆ ಮಿಯಾ ಕೂಡ ಸುಮಾರು 50 ಅಡಿ ಎತ್ತರಕ್ಕೆ ಹಾರಿ ಹೋಗಿ ದೂರಕ್ಕೆ ಬಿದ್ದಿದ್ದಾರೆ.

ಬರೇಲಿಯ ಮದುವೆ ಮಂಟಪವೊಂದರಲ್ಲಿದ್ದಾಗ ಆ ಪ್ರದೇಶದಲ್ಲಿ ತೀವ್ರವಾದ ಗಾಳಿ ಬೀಸಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
“ನಾನು ಸುಮಾರು 30-40 ಅಡಿ ಎತ್ತರದಲ್ಲಿದ್ದೆ. ಎಲ್ಲಿ ಹೋಗಿ ಬಿದ್ದೆ ಎಂದು ನನಗೇ ತಿಳಿಯಲಿಲ್ಲ. ಕನಿಷ್ಠ 50 ಅಡಿ ದೂರದಲ್ಲಿ ಹೋಗಿ ಬಿದ್ದಿದ್ದೆ. ಸುರಕ್ಷತೆಗಾಗಿ ಹಗ್ಗ ಹಿಡಿದಿದ್ದೆ, ಆದರೆ ಗಾಳಿ ಅದನ್ನು ತುಂಡರಿಸಿತು,” ಎಂದು ಅವರು ಆಸ್ಪತ್ರೆಯಲ್ಲಿ ನೋವು ತೋಡಿಕೊಂಡಿದ್ದಾರೆ.
ಈ ಘಟನೆಯಿಂದಾಗಿ ಅವರ ಕೈಕಾಲುಗಳು ಮುರಿದಿದ್ದು (Fracture), ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು ನನ್ಹೆ ಮಿಯಾ ಅವರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

ರಾಜ್ಯಾದ್ಯಂತ 80 ಜನರ ಸಾವು
ಉತ್ತರ ಪ್ರದೇಶದಲ್ಲಿ ಸಂಭವಿಸಿದ ಈ ಹವಾಮಾನ ವೈಪರೀತ್ಯಕ್ಕೆ ಭಾರೀ ಜೀವಹಾನಿಯಾಗಿದೆ. ವರದಿಗಳ ಪ್ರಕಾರ   80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 53 ಜನರಿಗೆ ಗಾಯಗಳಾಗಿವೆ. 87 ಮನೆಗಳು ಹಾನಿಗೊಳಗಾಗಿದ್ದು, 114 ಜಾನುವಾರುಗಳು ಮೃತಪಟ್ಟಿವೆ. ಪ್ರಯಾಗರಾಜ್, ಭದೋಹಿ, ಫತೇಪುರ್ ಮತ್ತು ಸೋನಭದ್ರಾ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ , ಪ್ರತಿ ಮೂರು ಗಂಟೆಗೊಮ್ಮೆ ಮಳೆ, ಗಾಳಿ ಮತ್ತು ಸಿಡಿಲು ಸಂಬಂಧಿತ ಹಾನಿಯ ವಿವರಗಳನ್ನು ಕಳುಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಿಹಾರ ಕ್ರಮಗಳು, ಪರಿಹಾರ ಧನ ವಿತರಣೆ ಮತ್ತು ರಕ್ಷಣಾ ಕಾರ್ಯಾಚರಣೆಯ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರಾಜಸ್ಥಾನದಲ್ಲಿ ಮೂವರು ಆರೋಪಿಗಳ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement