ʼಹಿಂದೂʼ ವಿರೋಧಿ ನಿಲುವಿನ ಉದಯನಿಧಿ ಸ್ಟಾಲಿನ್‌ ಬಾಯಲ್ಲಿ ‘ಓಂ ಕಾಳಿ..ಜೈ ಕಾಳಿ’ ಸ್ಲೋಗನ್‌ : ಎಲ್ಲೆಡೆ ಹೇಳಲು ಪಕ್ಷದವರಿಗೆ ಕರೆ !

ಚೆನ್ನೈ: ಡಿಎಂಕೆ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ವಿಜಯ ಅವರು ಬಳಸುತ್ತಿರುವ ಚುನಾವಣಾ ಘೋಷಣೆಗೆ ಪ್ರತಿಯಾಗಿ ಹೊಸ ಪ್ರತಿಘೋಷಣೆಯನ್ನು ರೂಪಿಸಿ, ಅದನ್ನು ವ್ಯಾಪಕವಾಗಿ ಜನರ ನಡುವೆ ತಲುಪಿಸುವಂತೆ ಡಿಎಂಕೆ ಕಾರ್ಯಕರ್ತರಿಗೆ ಡಿಎಂಕೆ ಯುವ ನಾಯಕ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ. ಸೆಪ್ಟೆಂಬರ್ 27ರಂದು ನಡೆದ ಪಕ್ಷದ … Continued

₹2,000ಕ್ಕಿಂತ ಹೆಚ್ಚಿನ ಯುಪಿಐ (UPI) ವಹಿವಾಟಿಗೆ ಶುಲ್ಕ ; ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ₹2,000ಕ್ಕಿಂತ ಹೆಚ್ಚಿನ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ (UPI) ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ವಿಧಿಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ, ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆಧಾರವಾದ ಕಾರಣಗಳು ಮತ್ತು ಮಾನದಂಡಗಳ ಕುರಿತು ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ … Continued

ಟಿಎಂಸಿ ಪಕ್ಷದ ಹೆಸರು-ಚಿಹ್ನೆ ವಿವಾದ: 3 ತಿಂಗಳಲ್ಲಿ ತೀರ್ಮಾನಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಗಡುವು

ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಹೆಸರು ಹಾಗೂ ‘ಹೂವು-ಹುಲ್ಲು’ (Flower and Grass) ಚುನಾವಣಾ ಚಿಹ್ನೆ ಕುರಿತಂತೆ ಪಕ್ಷದ ಎರಡು ಬಣಗಳ ನಡುವೆ ಉಂಟಾಗಿರುವ ವಿವಾದವನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ … Continued

ಬೆಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ ಬರೋಬ್ಬರಿ 1.9 ಕೋಟಿ ರೂ. ಕಳೆದುಕೊಂಡ ಟೆಕ್ಕಿ !

ಬೆಂಗಳೂರು: ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ಭರವಸೆ ನೀಡಿದ ಫೇಸ್‌ಬುಕ್‌ ಜಾಹೀರಾತಿಗೆ ಮರುಳಾಗಿ ಬೆಂಗಳೂರಿನ 47 ವರ್ಷದ ಟೆಕ್ಕಿಯೊಬ್ಬರು ಬರೋಬ್ಬರಿ ₹1.9 ಕೋಟಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ ಮೂಲಕ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೂರ್ವ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು … Continued

ಶಿರಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ​ ಬಂಧನ

ಶಿರಸಿ : ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ​ ಅವರನ್ನು ಸೋಮವಾರ  ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ  11:30ಕ್ಕೆ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ರೈತರ ಪ್ರತಿಭಟನೆ ನಡೆಸಲು ರೈತ ಸಂಘ ಉದ್ದೇಶಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಡಿಹಳ್ಳಿ ಚಂದ್ರಶೇಖರ ಶಿರಸಿಗೆ ಆಗಮಿಸಿದ್ದರು. ಈ ವೇಳೆ … Continued

ಬೆಂಗಳೂರಿನಲ್ಲಿ ಕಾಡಾನೆ ಪ್ರತ್ಯಕ್ಷ : ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಸಾಯಿಸಿದ ಸಲಗ

ಬೆಂಗಳೂರು: ಮಹಾನಗರದ ಮೈಸೂರು ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RRMCH) ಹಿಂಭಾಗದ ಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಶಂಕಿತ ಕಾಡಾನೆ ದಾಳಿಯಲ್ಲಿ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ 60 ವರ್ಷದ ನಾಗರಾಜು ಮೃತಪಟ್ಟಿರುವ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಂಚೆಪಾಳ್ಯದ ನಿವಾಸಿಯಾಗಿದ್ದ ನಾಗರಾಜು ಇತ್ತೀಚೆಗೆ ಕಾರ್ಖಾನೆಯ ಉದ್ಯೋಗದಿಂದ ನಿವೃತ್ತರಾಗಿದ್ದರು. ಪ್ರತಿದಿನದಂತೆ ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ … Continued

ನಕಲಿ ಔಷಧ ಪ್ರಕರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿಯ ಬಂಧನ

ಬೆಂಗಳೂರು: ನಕಲಿ ಔಷಧ ತಯಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಅಜರ್‌ಬೈಜಾನ್‌ನಿಂದ ಭಾರತಕ್ಕೆ ಮರಳಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ನಕಲಿ ಔಷಧ ಜಾಲ ಬಹಿರಂಗವಾದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ ರಂಜನ್ ಬಾಬು ಎಂಬಾತ ಅಜರ್‌ಬೈಜಾನ್‌ಗೆ … Continued

ಮೂರು ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆ ; ಬ್ಯಾಂಕ್‌ಗಳ ಸಂಘ–ಒಕ್ಕೂಟಗಳ ಸಭೆ ಬಳಿಕ ನಿರ್ಧಾರ

ನವದೆಹಲಿ: ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನಡುವೆ ಭಾನುವಾರ ರಾತ್ರಿ ನಡೆದ ಸಭೆಯ ನಂತರ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಭಾನುವಾರ ರಾತ್ರಿ 9:30ಕ್ಕೆ ಬ್ಯಾಂಕ್ ಒಕ್ಕೂಟವು ಭಾರತೀಯ ಬ್ಯಾಂಕ್‌ಗಳ … Continued

ಗಂಡನ ಸಾವಿನ ಬಳಿಕ ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಪತ್ನಿ : ಸಂಬಳದಲ್ಲಿ 25%ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ

ಜೈಪುರ: ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಯೊಬ್ಬರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಅರ್ಹ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ (Compassionate Appointment) ನೀಡುವ ವ್ಯವಸ್ಥೆ ಇದೆ. ಕುಟುಂಬಕ್ಕೆ ನಿಯಮಿತ ಮತ್ತು ಸುರಕ್ಷಿತ ಆದಾಯದ ಮೂಲ ಒದಗಿಸುವುದೇ ಈ ಯೋಜನೆಯ ಉದ್ದೇಶ. ಆದರೆ ರಾಜಸ್ಥಾನದ ಸಿಕಾರ್‌ ಜಿಲ್ಲೆಯಲ್ಲಿ ಗಂಡ ಮೃತಪಟ್ಟ … Continued