ವಿನಯ ಕುಲಕರ್ಣಿಗೆ ಧಾರವಾಡ ಪ್ರವೇಶಿಸಲು ಅನುಮತಿ ನಿರಾಕರಿಸಿದ ಕೋರ್ಟ್‌

ಬೆಂಗಳೂರು: ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ್ ಗೌಡರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ತವರು ಜಿಲ್ಲೆಗೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಯಂತಕುಮಾರ ಅವರು ಅರ್ಜಿಯನ್ನು ವಜಾಗೊಳಿಸಿದರು. ನ್ಯಾಯಾಲಯದ ಈ ಆದೇಶದಿಂದಾಗಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ … Continued

ಮಾರ್ಚ್ 30ರ ನಂತರ ದೆಹಲಿಯಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 433%ರಷ್ಟು ಏರಿಕೆ

ನವದೆಹಲಿ: ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾರ್ಚ್ 30 ರಂದು ದೆಹಲಿಯಲ್ಲಿ 932 ಪ್ರಕರಣಗಳಿದ್ದ ಕೋವಿಡ್‌-19 ಸೋಂಕಿನ ಸಕ್ರಿಯ ಪ್ರಕರಣಗಳು ಏಪ್ರಿಲ್ 17ಕ್ಕೆ 4,976 ಕ್ಕೆ ತಲುಪಿದೆ. ದೆಹಲಿಯಲ್ಲಿ ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ಸುಮಾರು ಮೂರು ವಾರಗಳಲ್ಲಿ 430%ಕ್ಕಿಂತ ಹೆಚ್ಚು ಜಿಗಿತವನ್ನು ದಾಖಲಿಸಿವೆ. ಕಳೆದ 19 ದಿನಗಳಲ್ಲಿ ದೆಹಲಿಯಲ್ಲಿ 13,200 ಕ್ಕೂ ಹೆಚ್ಚು ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ. … Continued

ಅಯ್ಯಪ್ಪ ಭಕ್ತರಿಗೆ ಸಂತಸದ ಸುದ್ದಿ: ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ

ಕೊಟ್ಟಾಯಂ:ಅಯ್ಯಪ್ಪ ಭಕ್ತರಿಗೆ ಕೇಂದ್ರ ಸರ್ಕಾರ ಸಂತಸದ ನೀಡಿದೆ. ಕೇರಳದ ಶಬರಿಮಲೆ ದೇಗುಲಕ್ಕೆ ಸಮೀಪವಿರುವ ಕೊಟ್ಟಾಯಂ ಜಿಲ್ಲೆಯಲ್ಲಿ ಗ್ರೀನ್​ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಸರ್ಕಾರ ಸಲ್ಲಿಸಿದ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಗಣನೆಗೆ ತೆಗೆದುಕೊಂಡು ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ … Continued

ಡಿ.ಕೆ ಶಿವಕುಮಾರ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ಒಡೆಯ

ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿಯನ್ನ ಘೋಷಣೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ (DK Shivakumar) ಅವರು ತಮ್ಮ ಬಳಿ ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ. 2018ರಲ್ಲಿ ಡಿಕೆಶಿ 840 ಕೋಟಿ ರೂ. ಮೌಲ್ಯದ ಆಸ್ತಿಯಿದೆ … Continued

ಕಾರು- ತೂಫಾನ್ ನಡುವೆ ಡಿಕ್ಕಿ; ಮಗು ಸೇರಿ ನಾಲ್ವರು ಸಾವು

ಮಂಗಳೂರು: ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಕಾರು ಬೇಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ … Continued

ಅಪರೂಪದಲ್ಲಿ ಅಪರೂಪ…ಸೀರೆ ಉಟ್ಟು 42.5 ಕಿಮೀ ದೂರದ ಬ್ರಿಟನ್‌ ಮ್ಯಾರಾಥಾನ್​ ಓಡಿದ ಭಾರತೀಯ ಮಹಿಳೆ : ನಿಬ್ಬೆರಗಾದ ಜನ | ವೀಕ್ಷಿಸಿ

ಸಂಬಲ್‌ಪುರಿ ಕೈಮಗ್ಗದ ಸೀರೆಯನ್ನು ಉಟ್ಟು, ಒರಿಸ್ಸಾದ ಮಹಿಳೆಯೊಬ್ಬರು ಭಾನುವಾರ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ 42.5 ಕಿಮೀ ಮ್ಯಾರಥಾನ್‌ ಓಡಿ ತನ್ನ ಸಹ ಓಟಗಾರರನ್ನು ಬೆರಗುಗೊಳಿಸಿದ್ದಾರೆ ಮತ್ತು ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ. 41 ವರ್ಷದ ಮಧುಸ್ಮಿತಾ ಜೆನಾ ಎಂಬ ಮಹಿಳೆ ಸೀರೆಯುಟ್ಟು ಮ್ಯಾರಥಾನ್‌ ಓಡಿದ ಮಹಿಳೆ ಹಾಗೂ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.. ಮ್ಯಾಂಚೆಸ್ಟರ್‌ನಲ್ಲಿ … Continued

ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ ಆರೋಪ

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ಕಾರಣ. ನನಗಷ್ಟೇ ಅಲ್ಲ, ಮೈಸೂರಿನಲ್ಲಿ ರಾಮದಾಸ ಅವರಿಗೂ ಟಿಕೆಟ್‌ ತಪ್ಪಲು ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆರೋಪಿಸಿದ್ದಾರೆ. ಇಂದು, ಮಂಗಳವಾರ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ … Continued

ಅರೆರೇ…ಚೌಕಾಕಾರದಲ್ಲಿದೆ ಈ ಸೈಕಲ್ ಚಕ್ರ….! ಆದ್ರೂ ರಸ್ತೆ ಮೇಲೆ ಸರಾಗವಾಗಿ ಓಡುತ್ತದೆ ಈ ಸೈಕಲ್‌ | ವೀಕ್ಷಿಸಿ

ಸಾಮಾನ್ಯವಾಗಿ ವಾಹನಗಳ ಚಕ್ರ ವೃತ್ತಾಕಾರ (ಗೋಳಾಕಾರ) ಆಗಿರುವುದನ್ನು ನೋಡಿದ್ದೇವೆ. ಚಕ್ರ ಸ್ವಲ್ಪ ಬೆಂಡ್ ಆದರೂ ವಾಹನ ಮುಂದೆ ಚಲಿಸಲು ಕಷ್ಟವಾಗುತ್ತದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ವೃತ್ತಾಕಾರದಲ್ಲಿರುವ ಬದಲು ಚೌಕಾಕಾರದಲ್ಲಿದೆ. ಆದರೂ ಸೈಕಲ್‌ ಸರಾಗವಾಗಿ ರಸ್ತೆ ಮೇಲೆ ಓಡುತ್ತದೆ. ಚೌಕಾಕಾರದ ಚಕ್ರಗಳನ್ನು ಹೊಂದಿರುವ ಈ ಬೈಸಿಕಲ್‌ ವೀಡಿಯೊ ಈಗ ಇಂಟರ್ನೆಟ್ಟಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಭೌತಶಾಸ್ತ್ರ ಮತ್ತು … Continued

ಬಿಜೆಪಿ ಶಾಸಕ ರಾಮದಾಸಗೆ ಕೈತಪ್ಪಿದ ಟಿಕೆಟ್; ಮಾತುಕತೆಗೆ ಬಂದಿದ್ದ ಪ್ರತಾಪ ಸಿಂಹ ಬರಿಗೈಲಿ ವಾಪಸ್‌

ಮೈಸೂರು: ಬಿಜೆಪಿಯ ಬಂಡಾಯ ಬಿಸಿ ಮೂರನೇ ಪಟ್ಟಿಗೂ ಮುಂದುವರಿದಿದೆ. ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಾಲಿ ಶಾಸಕ ಎಸ್.ಎ. ರಾಮದಾಸ ಅವರಿಗೆ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಮುಂದಿನ ನಿರ್ಧಾರದ ಕುರಿತು ಚರ್ಚಿಸಲು ಹಾಲಿ ಶಾಸಕ ರಾಮದಾಸ ಅವರ ಬೆಂಬಲಿಗರು ಸಭೆ ನಡೆಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಕ್ಷದ ಅನೇಕ ನಾಯಕರು … Continued

ಸುಡಾನ್‌ನಲ್ಲಿ ಸೇನೆ-ಅರೆಸೇನಾಪಡೆ ನಡುವಿನ ಘರ್ಷಣೆ: ಸುಮಾರು 200 ಜನರು ಸಾವು, 1800 ಮಂದಿಗೆ ಗಾಯ

ಖಾರ್ಟೌಮ್: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ನಡುವಿನ ಹೋರಾಟದಲ್ಲಿ ಸುಮಾರು 200 ಜನರು ಸಾವಿಗೀಡಾಗಿದ್ದಾರೆ ಮತ್ತು 1,800 ಮಂದಿ ಗಾಯಗೊಂಡಿದ್ದಾರೆ.ಮೂರು ದಿನಗಳ ನಗರ ಯುದ್ಧದ ನಂತರ ಸೋಮವಾರ ಆಸ್ಪತ್ರೆಗಳು ಹಾನಿಗೊಳಗಾಗಿವೆ ಮತ್ತು ವೈದ್ಯಕೀಯ ಸರಬರಾಜು ಮತ್ತು ಆಹಾರದ ಕೊರತೆ ಉಂಟಾಗಿದೆ. 2021 ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಇಬ್ಬರು ಜನರಲ್‌ಗಳಾದ ಸುಡಾನ್‌ನ ಸೇನಾ ಮುಖ್ಯಸ್ಥ ಅಬ್ದೆಲ್ … Continued