ಹೊನ್ನಾವರ : ಶರಾವತಿ ಸೇತುವೆಯಿಂದ ಜಿಗಿದು ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ

ಹೊನ್ನಾವರ: ಅಪ್ರಾಪ್ತ ವಯಸ್ಸಿನ ಯುವಕ, ಇನ್ನೊಬ್ಬಳು ಯುವತಿ ಶರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಪ್ರಾಣ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟದಲ್ಲಿ ಶುಕ್ರವಾರ ರಾತ್ರಿ ನಡೆದ ವರದಿಯಾಗಿದೆ. ಇಬ್ಬರ ಶವ ಪತ್ತೆಯಾಗಿದೆ. ಮೃತರನ್ನು ತುಮಕೂರು ಜಿಲ್ಲೆಯ ನೆಲಹಾಳದ ದೀಲಿಪ ಶಿವರಾಜು ಎನ್. ಬಿ(17) ಮತ್ತು ತುಮಕೂರಿನ ಶೆಟ್ಟಿಹಾಳ ರಸ್ತೆ ಮಾರ್ಗದ ನಿವಾಸಿ … Continued

ಸಿಎಂ ಬೊಮ್ಮಾಯಿ ಆಸ್ತಿ ವಿವರ: ಸ್ವಂತ ವಾಹನವಿಲ್ಲ, 5.98 ಕೋಟಿ ರೂ. ಚರಾಸ್ತಿ, 22.95 ಕೋಟಿ ರೂ. ಸ್ಥಿರಾಸ್ತಿ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ಅವರ ಇಂದು(ಏಪ್ರಿಲ್ 15) ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೊಮ್ಮಾಯಿ ಅವರು ನಾಮಪತ್ರದಲ್ಲಿ ತಮ್ಮ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದು, 5.98 ಕೋಟಿ ರೂ. ಚರಾಸ್ತಿ ಹಾಗೂ 22.95 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ತಮ್ಮ ಬಳಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ … Continued

ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿ.ಆರ್. ಸುದರ್ಶನ

ಕೋಲಾರ: ಮಾಜಿ ಸಭಾಪತಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ವಿ.ಆರ್ ಸುದರ್ಶನ್ (V.R Sudarshan) ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಂದು, ಶನಿವಾರ (ಏಪ್ರಿಲ್ 15) ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬೇಸರ ತರಿಸಿದೆ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ. 1976 ರಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೆ. ಆದರೆ … Continued

230 ಅಡಿ ಆಳದ ಗುಹೆಯಲ್ಲಿ 500 ದಿನಗಳನ್ನು ಒಬ್ಬಂಟಿಯಾಗಿ ಕಳೆದ ಸ್ಪೇನ್‌ ಮಹಿಳೆ | ವೀಕ್ಷಿಸಿ

ಸ್ಪೇನ್ ಮಹಿಳೆಯೊಬ್ಬಳು ಸುಮಾರು 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬಂಟಿಯಾಗಿ ಕಳೆಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ ಸ್ಪೇನ್‌ನ 50 ವರ್ಷದ ಮಹಿಳಾ ಪರ್ವತಾರೋಹಿ ಈ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬರೇ … Continued

ಕನ್ನಡ ನಟ ಚೇತನ್ ವೀಸಾ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಕನ್ನಡ ನಟ ಚೇತನ್ ಅಹಿಂಸಾ ಅವರಿಗೆ ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು (Overseas Citizenship of India – OCI) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತು ಏಪ್ರಿಲ್‌ 14ರಂದು (ಶುಕ್ರವಾರ) ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಾವಣಿ ಕಚೇರಿಯಿಂದ (FRRO) ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಏಪ್ರಿಲ್‌ 14ರಂದು, ಚೇತನ್ ಅಹಿಂಸಾ … Continued

ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯಗೆ ಕೋಲಾರದಲ್ಲಿ ಟಿಕೆಟ್‌ ಇಲ್ಲ, ಕುಮಟಾದಲ್ಲಿ ಆಳ್ವ ಕುಟುಂಬಕ್ಕೆ ಮಣೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ 43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ … Continued

ಕರ್ನಾಟಕ ವಿಧಾನಸಭೆ ಚುನಾವಣೆ: ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ

ಹಾವೇರಿ: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಬೊಮ್ಮಾಯಿ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ಸಚಿವ ಸಿ.ಸಿ ಪಾಟೀಲ, ಶಿವಕುಮಾರ ಉದಾಸಿ ಮೊದಲಾದವರು ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಬೊಮ್ಮಾಯಿ ಹುಬ್ಬಳ್ಳಿ ಸಿದ್ಧಾರೂಢ … Continued

ಹುಬ್ಬಳ್ಳಿ: ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆ-ಅಸಮಾಧಾನಗೊಂಡಿರುವ ಜಗದೀಶ ಶೆಟ್ಟರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ, ಮಾತುಕತೆ

ಹುಬ್ಬಳ್ಳಿ:ಬಿಜೆಪಿ ಪ್ರಕಟಿಸಿದ ಎರಡು ಪಟ್ಟಿಗಳಲ್ಲಿ ತನಗೆ ಟಿಕೆಟ್ ಘೋಷಣೆಯಾಗದ ಕಾರಣ ತೀವ್ರ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈಗ ಅಖಾಡಾಕ್ಕೆ ಧುಮುಕಿದ್ದು ಜಗದೀಶ್ ಶೆಟ್ಟರ ಮನೆಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗುವುದು ಇನ್ನೂ … Continued

ಬೆಳ್ಳಂಬೆಳಗ್ಗೆ ಪ್ರಪಾತಕ್ಕೆ ಉರುಳಿದ ಬಸ್ : 12 ಮಂದಿ ಸಾವು, 27 ಜನರಿಗೆ ಗಾಯ

ಮುಂಬೈ: ಬಸ್ಸೊಂದು ಕಮರಿಗೆ ಬಿದ್ದು ಸುಮಾರು 12 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ – ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಸಂಗೀತ ತಂಡವೊಂದರ ಸದಸ್ಯರನ್ನು ಪುಣೆಯಿಂದ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಮುಂಜಾನೆ 4:50ರ ಸುಮಾರಿಗೆ ಈ ಅಪಘಡ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು, … Continued

ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡುವಂತೆ ಒತ್ತಡ : ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ 16 ಸದಸ್ಯರ ರಾಜೀನಾಮೆ ಪತ್ರ

ಹುಬ್ಬಳ್ಳಿ : ಹುಬ್ಬಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ಘೋಷಣೆ ವಿಳಂಬ ಖಂಡಿಸಿ ಮಹಾನಗರ ಪಾಲಿಕೆಯ ಬಿಜೆಪಿ ಕೆಲ ಸದಸ್ಯರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ 12 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ. ಹುಬ್ಬಳಿ … Continued