ಚಿತ್ರದುರ್ಗದಲ್ಲಿ ನಡೆದ ಇಸ್ರೋದ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ | ವೀಕ್ಷಿಸಿ

ಬೆಂಗಳೂರು: ಭಾನುವಾರ, ಏಪ್ರಿಲ್ 2 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮೂಲ ಮಾದರಿಯ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆಯ (ಐಎಎಫ್) ಸಹಕಾರದೊಂದಿಗೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಲ್ಲಿ ಭಾನುವಾರ ಮುಂಜಾನೆ … Continued

24 ಗಂಟೆಗಳಲ್ಲಿ 3,823 ಹೊಸ ಕೋವಿಡ್ ಪ್ರಕರಣ ವರದಿ ಮಾಡಿದ ಭಾರತ : ನಿನ್ನೆಗಿಂತ 27%ರಷ್ಟು ಜಿಗಿತ

ನವದೆಹಲಿ: ತುಸು ಇಳಿಕೆ ಕಂಡ ನಂತರದಲ್ಲಿ ಕಳೆದ 24-ಗಂಟೆಗಳಲ್ಲಿ ದೇಶವು 3,800 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಿಸುವುದರ ಮೂಲಕ ಮತ್ತೆ ಜಿಗಿತವನ್ನು ವರದಿ ಮಾಡಿದೆ. ಭಾರತದಲ್ಲಿ 2,994 ಹೊಸ ಕೋವಿಡ್ ಸೋಂಕುಗಳು ದಾಖಲಾದ ಒಂದು ದಿನದ ನಂತರ 3,823 ಹೊಸ ಕೋವಿಡ್ ಪ್ರಕರಣಗಳ ಜಿಗಿತವು ಬಂದಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ … Continued

ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ, ಶನಿವಾರ ರಾತ್ರಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜು ಝಾ ಮತ್ತು ಅವರ ಸ್ನೇಹಿತ ಕೋಲ್ಕತ್ತಾಗೆ ಹೋಗುತ್ತಿದ್ದಾಗ ಅವರು ದಾರಿಯಲ್ಲಿ ಜನಪ್ರಿಯ ಪಿಟ್ ಸ್ಟಾಪ್ ಶಕ್ತಿಗಢದಲ್ಲಿ ನಿಂತರು, ಅವರ ಕಾರನ್ನು ಹೆದ್ದಾರಿಯಲ್ಲಿ ನಿಲ್ಲಿಸಿದಾಗ, ಮತ್ತೊಂದು ಕಾರು ಅದರ ಪಕ್ಕದಲ್ಲಿ ನಿಂತಿತು ಮತ್ತು … Continued

ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ತ್ಯಾಗವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಆದರೆ …: ಶರದ್ ಪವಾರ್

ನಾಗ್ಪುರ: ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ದಿವಂಗತ ವಿ.ಡಿ. ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗೂ ಅವರ ಮೇಲಿನ ಭಿನ್ನಾಭಿಪ್ರಾಯಗಳನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅನೇಕ ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಇದೇ ವೇಳೆ ವಿದೇಶಿ … Continued

ಗೂಗಲ್‌ನಲ್ಲಿ ಉಚಿತ ತಿಂಡಿ-ಪಾನೀಯಗಳಿಗೂ ಬಿತ್ತು ಕತ್ತರಿ..! : ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ಗೆ ಆದ್ಯತೆ ನೀಡಲು ವೆಚ್ಚ ಕಡಿತ ಎಂದ ಕಂಪನಿ

ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುವ ಹಾಗೂ ಕೃತಕ ಬುದ್ಧಿಮತ್ತೆಗೆ ಆದ್ಯತೆ ನೀಡುವ ಪ್ರಯತ್ನದಲ್ಲಿ, ಗೂಗಲ್ ಹಲವಾರು ವೆಚ್ಚ ಕಡಿತದ ಉಪಕ್ರಮಗಳನ್ನು ಅನಾವರಣಗೊಳಿಸಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಗೂಗಲ್ ಬಿಡುಗಡೆ ಮಾಡಿದ ಜ್ಞಾಪಕ ಪತ್ರದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಶುಕ್ರವಾರ ಸಿಬ್ಬಂದಿಗೆ ಕಳುಹಿಸಲಾದ ಜ್ಞಾಪಕ ಪತ್ರದ ಪ್ರಕಾರ, ಉಚಿತ ತಿಂಡಿಗಳು, … Continued

ಅತಿದೊಡ್ಡ ಡೇಟಾ ಕಳ್ಳತನ ಭೇದಿಸಿದ ಸೈಬರಾಬಾದ್ ಪೊಲೀಸರು : 66.9 ಕೋಟಿ ಜನರು, ಸಂಸ್ಥೆಗಳ ಮಾಹಿತಿ ಕಳುವು…!?

ಸೈಬರಾಬಾದ್ ಪೊಲೀಸರು ದೇಶದ 24 ರಾಜ್ಯಗಳು ಮತ್ತು 8 ಮಹಾನಗರಗಳಲ್ಲಿ 104 ವಿಭಾಗಗಳಲ್ಲಿ 66.9 ಕೋಟಿ ಜನರು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಆರೋಪಿಯು ಬೈಜಸ್ ಮತ್ತು ವೇದಾಂತು ಸಂಘಟನೆಗಳ ವಿದ್ಯಾರ್ಥಿಗಳ ಡೇಟಾವನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಎಂಟು ಮೆಟ್ರೋ ನಗರಗಳ … Continued

ವೀಕೆಂಡ್ ಟ್ರಿಪ್ಪಿಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ಜಲಾಶಯದಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ: ವೀಕೆಂಡ್‌ನಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದ ವರದಿಯಾಗಿದೆ. ಮೃತರನ್ನು ರಾಧಿಕಾ(19), ಪೂಜಾ (20) ಹಾಗೂ ಇಮ್ರಾನ್ ಖಾನ್(20) ಎಂದು ಗುರುತಿಸಲಾಗಿದೆ. ವೀಕೆಂಡ್ ಎಂದು ಬೆಂಗಳೂರಿನ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ವಿಕಾಸ್, ಚನ್ನರಾ, ಇಮ್ರಾನ್ ಖಾನ್ ಎಂಬ ಆರು ವಿದ್ಯಾರ್ಥಿಗಳು … Continued

ಲಂಚ ಪ್ರಕರಣ: ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಏಪ್ರಿಲ್‌ 11ರ ವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಲೋಕಾಯುಕ್ತ ಪೊಲೀಸ್‌ ಕಸ್ಟಡಿ ಶನಿವಾರ ಅಂತ್ಯವಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರಿಗೆ ಏಪ್ರಿಲ್‌ 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ವಿರೂಪಾಕ್ಷಪ್ಪ ಅವರ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಐದು ದಿನಗಳ ಲೋಕಾಯುಕ್ತ ಪೊಲೀಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ … Continued

ಭಾರತದ ಬಹುತೇಕ ಭಾಗಗಳಲ್ಲಿ ಏಪ್ರಿಲ್‌ನಿಂದ ಜೂನ್‌ ವರೆಗೆ ಸುಡಲಿದೆ ಶಾಖ: ಹವಾಮಾನ ಇಲಾಖೆ

ನವದೆಹಲಿ: ವಾಯುವ್ಯ ಮತ್ತು ಭಾರತದ ಪರ್ಯಾಯ ದ್ವೀಪದ ಭಾಗಗಳನ್ನು (ಮೂರು ಕಡೆ ಸಮುದ್ರಗಳಿಂದ ಆವೃತವಾದ ಭಾಗ) ಹೊರತುಪಡಿಸಿ ಭಾರತದ ಬಹುತೇಕ ಭಾಗಗಳು ಏಪ್ರಿಲ್‌ನಿಂದ ಜೂನ್‌ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಅನುಭವಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು, ಶನಿವಾರ ತಿಳಿಸಿದೆ. ಈ ಅವಧಿಯಲ್ಲಿ ಮಧ್ಯ, ಪೂರ್ವ ಮತ್ತು ವಾಯುವ್ಯ ಭಾರತದ … Continued

ಮೋದಿ ಉಪನಾಮ ವಿವಾದ: ಮತ್ತೊಂದು ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಪಾಟ್ನಾ ನ್ಯಾಯಾಲಯದ ಸಮನ್ಸ್

ಪಾಟ್ನಾ : ಮೋದಿ ಉಪನಾಮದ ಕುರಿತು ರಾಹುಲ್‌ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರದ ಬಿಜೆಪಿ ನಾಯಕ ಸುಶೀಲಕುಮಾರ ಮೋದಿ ಅವರು 2019ರಲ್ಲಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ನಡೆಯಲಿರುವ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಪಾಟ್ನಾ ನ್ಯಾಯಾಲಯ ಶುಕ್ರವಾರ ನೋಟಿಸ್‌ ನೀಡಿರುವುದಾಗಿ ವರದಿಯಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 313 ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು … Continued