ಬೆಳಗಾವಿ: ರಾಮನವಮಿ ಮೆರವಣಿಗೆ ವೇಳೆ ಕನ್ನಡ ಧ್ವಜ ಹಿಡಿದಿದ್ದ ಯುವಕನ ಮೇಲೆ ಹಲ್ಲೆ

ಬೆಳಗಾವಿ : ರಾಮನವಮಿ ಮೆರವಣಿಗೆ ವೇಳೆ ನಗರದ ಟಿಳಕಚೌಕ ಬಳಿಯ ರಾಮಲಿಂಗಖಿಂಡಗಲ್ಲಿಯ ಶಿವಸೇನೆ ಕಚೇರಿ ಎದುರು ಮೆರವಣಿಗೆ ಹೋಗುವಾಗ ಯುವಕನ ಮೇಲೆ ಗುರುವಾರ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಯುವಕ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಾರಿಸಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. ನಗರದ ತಿಲಕ ಚೌಕ್‌ ಬಳಿ ರಾಮನವಮಿ ಮೆರವಣಿಗೆ ವೇಳೆ ನೂರಾರು … Continued

ಟೋಲ್‌ ಸಂಗ್ರಹ ಆರಂಭವಾದ 17 ದಿನದಲ್ಲೇ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇ ಟೋಲ್ ದರ ಶೇಕಡಾ 22ರಷ್ಟು ಹೆಚ್ಚಳ…!

ಬೆಂಗಳೂರು :ಮಾರ್ಚ್‌ 14ರಿಂದ ಆರಂಭವಾಗಿದ್ದ ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಟೋಲ್‌ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಟೋಲ್‌ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್‌ ದರವನ್ನು ಶೇಕಡಾ 22ರಷ್ಟು ಹೆಚ್ಚಳ ಮಾಡಿದ್ದು ಏಪ್ರಿಲ್ 1ರಿಂದ ಜಾರಿಯಾಗಲಿದೆ. ಟೋಲ್ ಹೊಸ ದರದ ವಿವರಗಳು ಕಾರು/ವ್ಯಾನ್/ಜೀಪ್ ಗಳ ಸಂಚಾರ: ಏಕಮುಖದ ಸಂಚಾರಕ್ಕೆ … Continued

ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ: ಒಂದೇ ಕುಟುಂಬದ ಆರು ಮಂದಿ ಸಾವು

ನವದೆಹಲಿ: ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ರಾತ್ರಿಯಲ್ಲಿ ಉರಿಯುತ್ತಿದ್ದ ಸೊಳ್ಳೆ ಬತ್ತಿಗೆ ಬೆಂಕಿಹೊತ್ತಿಕೊಂಡ ನಂತರ ಬಿಡುಗಡೆಯಾದ ವಿಷಕಾರಿ ಅನಿಲ ಉಸಿರಾಡಿದ ಕುಟುಂಬದ ಆರು ಸದಸ್ಯರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರಾತ್ರಿ ವೇಳೆ ಹಚ್ಚಿದ್ದ ಸೊಳ್ಳೆ ಕಾಯಿಲ್‌ ಮನೆಯೊಳಗಿನ ಹಾಸಿಗೆಯ ಮೇಲೆ ಬಿದ್ದಿದೆ, ಹಾಗೂ ಬೆಂಕಿ ಹೊತ್ತಿಕೊಂಡಿದೆ, ಇದರಿಂದ ಬಿಡುಗಡೆಯಾದ ವಿಷಕಾರಿ ಅನಿಲದಿಂದ ಸಾವು ಸಂಭವಿಸಿದೆ … Continued

ಜೆಡಿಎಸ್‌ ನಾಯಕ ಎ. ಟಿ. ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ: ಕಾಂಗ್ರೆಸ್‌ ಸೇರುತ್ತಾರೆಯೇ ?

ಬೆಂಗಳೂರು ; ಶುಕ್ರವಾರ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಶಾಸಕ ಎ. ಟಿ. ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದು, ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ತೆರಳಿದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಅಂತಿಮವಾಗಿ ಇಂದು ಶಾಸಕ … Continued

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ; ಮುಂದಿನ ವಾರ ಶರಣಾಗುವ ಸಾಧ್ಯತೆ

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರದ ಆರಂಭದಲ್ಲಿ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ (ಡಿಎ) ಕಚೇರಿಗೆ ಶರಣಾಗುವ ಸಾಧ್ಯತೆಯಿದೆ ಎಂದು ಅವರ ವಕೀಲ ಜೋ ಟಕೋಪಿನಾ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷರ ಕಾನೂನು ತಂಡವು ಪ್ರಾಸಿಕ್ಯೂಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರ ವಿಚಾರಣೆಯು ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ ಎಂದು … Continued

ಮಂಗಳೂರು ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆ

ಮಂಗಳೂರು: ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದ್ದು, ಅವರೆಲ್ಲ ಒಂದೇ ಕುಟುಂಬದವರೆಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನವರೆಂದು ತಿಳಿದು ಬಂದಿದ್ದು, ದೇವೆಂದ್ರ, ಅವರ ಪತ್ನಿ ನಿರ್ಮಲಾ ಹಾಗೂ ಇಬ್ಬರು ಅವಳಿ ಹೆಣ್ಣುಮಕ್ಕಳು ಎಂದು ಹೇಳಲಾಗಿದೆ. ಪಕ್ಕದಲ್ಲೇ ಡೆತ್‌ನೋಟ್‌ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ನಾಲ್ವರ ಪೈಕಿ ದೇವೇಂದ್ರ ಅವರು ನೇಣು ಬಿಗಿದ … Continued

ಭೂ ಮಂಜೂರಾತಿ ಅಕ್ರಮ: ಜೆಡಿಎಸ್‌ ಶಾಸಕ ಲಿಂಗೇಶ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶ

ಬೆಂಗಳೂರು: ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಜೆಡಿಎಸ್‌ ಶಾಸಕ ಕೆ .ಎಸ್‌. ಲಿಂಗೇಶ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ. ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್‌ ಅವರು ಆದೇಶಿಸಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆ … Continued

ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿತ: ಸಾವಿನ ಸಂಖ್ಯೆ 35 ಕ್ಕೆ ಏರಿಕೆ

ಇಂದೋರ್‌ : ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿ ಬೆಳಗಿನ ಜಾವದಂದು ನಡೆದ ಧಾರ್ಮಿಕ ವಿಧಿವಿಧಾನದ ವೇಳೆ ‘ಬಾವಡಿ’ (ಬಾವಿ)ಯನ್ನು ಮುಚ್ಚುವ ಚಪ್ಪಡಿ ಒಡೆದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿದೆ. ಬಾವಿಯ ಮೇಲ್ಛಾವಣಿಯನ್ನು ಕಾಂಕ್ರೀಟ್ ಚಪ್ಪಡಿ ಹಾಕಿ, ಕಬ್ಬಿಣದ ರಾಡ್‌ಗಳಿಂದ ಆಸರೆಯಾಗಿ, ಬಾವಡಿಯನ್ನು ಮುಚ್ಚಲು ಮೇಲ್ಛಾವಣಿ ನಿರ್ಮಿಸಲಾಗಿತ್ತು. ಇಂದೋರ್ ವಿಭಾಗದ ಕಮಿಷನರ್ ಪವನ್ … Continued

ನಾನು ಶರಣಾಗುತ್ತಿಲ್ಲ : ಯೂ ಟ್ಯೂಬ್‌ ಲೈವ್ ನಲ್ಲಿ ಪರಾರಿಯಾದ ಅಮೃತಪಾಲ್ ಸಿಂಗ್ ಹೇಳಿಕೆ

ನವದೆಹಲಿ: ಕಳೆದ 13 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡಿರುವ ಖಾಲಿಸ್ತಾನೀ ಪ್ರತಿಪಾದಕ ಅಮೃತಪಾಲ್ ಸಿಂಗ್ ಸತತ ಎರಡನೇ ದಿನವೂ ಯೂಟ್ಯೂಬ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದು, ತಾನು ಶರಣಾಗುವುದಿಲ್ಲ ಎಂದು ಹೇಳಿದ್ದಾರೆ. 30 ವರ್ಷದ ಅಮೃತಪಾಲ್ ಸಿಂಗ್, ಸಿ ಮಾರ್ಚ್ 18 ರಂದು ಆತನ ಖಾಲಿಸ್ತಾನ್ ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸ್ ಕ್ರಮದ … Continued