ಕಾಂಗ್ರೆಸ್‌ ಸೇರಿದ ಬಿಜೆಪಿ ಮಾಜಿ ಶಾಸಕ ಕಿರಣಕುಮಾರ್, ಜೆಡಿಎಸ್‌ನ ಸಂದೇಶ ನಾಗರಾಜ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ತುಮುಕೂರು ಜಿಲ್ಲೆಯ ಬಿಜೆಪಿಯ ಮಾಜಿ ಶಾಸಕ ಕಿರಣಕುಮಾರ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಮೈಸೂರಿನ ಸಂದೇಶ ನಾಗರಾಜ ಇಂದು, ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ತುಮಕೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾದ ಎಚ್. ನಿಂಗಪ್ಪ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ … Continued

ಶಿವಸೇನೆಯ ಹೆಸರು, ಚಿಹ್ನೆ ಕಳೆದುಕೊಂಡ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉದ್ಧವ್ ಠಾಕ್ರೆ

ಮುಂಬೈ: ತಮ್ಮ ಪ್ರತಿಸ್ಪರ್ಧಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ನಿರ್ಧಾರವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಉದ್ಧವ್‌ ಠಾಕ್ರೆ … Continued

ಕಡಬ: ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಸಾವು

ಮಂಗಳೂರು: ಇಂದು, ಸೋಮವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಯಿಂದ ಯುವತಿ ಸೇರಿ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿ ಗ್ರಾಮದ ಬಳಿ ನೈಲ ಎಂಬಲ್ಲಿ ನಡೆದ ವರದಿಯಾಗಿದೆ. ಇಂದು, ಸೋಮವಾರ ಬೆಳಿಗ್ಗೆ 6:30ರ ಸುಮಾರಿಗೆ ಕಾಡಾನೆ ದಾಳಿ ನಡೆಸಿದೆ. ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(21) ಎಂಬವರು ಸೋಮವಾರ ಮನೆಯಿಂದ ಹಾಲು ಡೈರಿಗೆ … Continued

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್ (90 ವರ್ಷ) ಅವರು ಇಂದು, ಸೋಮವಾರ ಬೆಳಿಗ್ಗೆ ಬೆಳಗ್ಗೆ 6 ಗಂಟೆಗೆ ( ಫೆಬ್ರವರಿ 20 ) ನಿಧನರಾಗಿದ್ದಾರೆ. ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಗವಾನ್ ಅವರು ಇಬ್ಬರು ಪುತ್ರರು, ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಡಾ.ರಾಜಕುಮಾರ ಅವರ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿ ಹಲವು … Continued

ಟ್ವಿಟರ್‌ ನಂತ್ರ ಈಗ ಫೇಸ್‌ಬುಕ್-ಇನ್‌ಸ್ಟಾಗ್ರಾಂಗೂ ಬಂತು ಹಣ ನೀಡಿ ಪಡೆಯುವ ನೀಲಿ ಬ್ಯಾಡ್ಜ್ ವೆರಿಫಿಕೇಶನ್‌ ವ್ಯವಸ್ಥೆ…!

ಟ್ವಿಟರ್‌ ನಂತರ ಈಗ ಫೇಸ್‌ಬುಕ್-ಇನ್‌ಸ್ಟಾಗ್ರಾಂಗೂ ಬಂತು ಪಾವತಿಸಿದ ನೀಲಿ ಬ್ಯಾಡ್ಜ್ ಪರಿಶೀಲನಾ ಸೇವೆ ಪ್ರಾರಂಭಿಸಲಿದೆ ಮೆಟಾ ಮೆಟಾ ಪ್ಲಾಟ್‌ಫಾರ್ಮ್‌ಗಳ ಮಾಲೀಕರಾದ ಮಾರ್ಕ್ ಜುಕರ್‌ಬರ್ಗ್ (ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿತ್ತು) ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಚಂದಾದಾರಿಕೆ ಸೇವೆ ಪ್ರಾರಂಭಿಸುವುದಾಗಿ ಫೆಬ್ರವರಿ 19ರಂದು ಘೋಷಿಸಿದ್ದಾರೆ. ಅದು ಬಳಕೆದಾರರಿಗೆ ಪರಿಶೀಲಿಸಿದ ಖಾತೆಯ ನೀಲಿ ಬ್ಯಾಡ್ಜ್‌ಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. … Continued

ಹೊಸ ಸರ್ವೆ ನಂತರ 7,000ಕ್ಕೂ ಹೆಚ್ಚು ಹೊಸ ಅಜ್ಞಾತ ದ್ವೀಪಗಳನ್ನು ಪತ್ತೆ ಮಾಡಿದ ಜಪಾನ್‌…!

ಕ್ಯೋಡೋ ನ್ಯೂಸ್ ಪ್ರಕಾರ, 1987ರ ನಂತರ ಜಪಾನ್‌ ಸರ್ಕಾರವು ತನ್ನ ಪ್ರಾದೇಶಿಕ ಜಲಪ್ರದೇಶದಲ್ಲಿ ಮೊದಲ ಸಮೀಕ್ಷೆಯನ್ನು ನಡೆಸಿದ ನಂತರ ಜಪಾನ್‌ನಲ್ಲಿನ ಅಧಿಕೃತ ದ್ವೀಪಗಳ ಸಂಖ್ಯೆಯು 6,852 ರಿಂದ 14,125 ಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಅಂದರೆ ಹೊಸದಾಗಿ 7,273 ದ್ವೀಪಗಳನ್ನು ಪತ್ತೆ ಮಾಡಿದೆ. ಜಪಾನ್, ಸುಮಾರು 1,46,000 ಚದರ ಮೈಲುಗಳಷ್ಟು ಭೂಪ್ರದೇಶವನ್ನು ಹೊಂದಿರುವ ಪರ್ವತ ರಾಷ್ಟ್ರವಾಗಿದ್ದು, ಪೆಸಿಫಿಕ್ … Continued

ಎಂಥ ಲೋಕವಯ್ಯಾ…47 ವರ್ಷದ ವ್ಯಕ್ತಿಯ ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ 16 ವರ್ಷದ ಬಾಲಕಿ ಮೇಲೆ ಹಲ್ಲೆ ನಡೆಸಿ, ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ: ದೃಶ್ಯ ವೀಡಿಯೊದಲ್ಲಿ ಸೆರೆ

ರಾಯ್‌ಪುರ: ಛತ್ತೀಸ್‌ಗಢದ ರಾಯ್‌ಪುರದ ಗುಧಿಯಾರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದೊಯ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಗುಧಿಯಾರಿ ಪ್ರದೇಶದಲ್ಲಿ ಶನಿವಾರ ಸಂಜೆ ಮಧ್ಯವಯಸ್ಕನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಇರಿತದ ಗಾಯಗಳೊಂದಿಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು … Continued

ಕೇರಳದ ದೇಗುಲಕ್ಕೆ ಬಂತು ರೋಬೋಟ್‌ ಆನೆ…! ಫೆಬ್ರವರಿ 26 ರಂದು ದೇವಸ್ಥಾನಕ್ಕೆ ಅರ್ಪಣೆ: ಇದರ ತೂಕ 800 ಕೆ.ಜಿ

ತ್ರಿಶೂರ್ : ಇದೇ ಮೊದಲ ಬಾರಿಗೆ, ಫೆಬ್ರವರಿ 26 ರಂದು ನಾದೈರುತಲ್ (ದೇವಾಲಯಗಳಲ್ಲಿ ದೇವರ ಮುಂದೆ ಆನೆಗಳನ್ನು ಅರ್ಪಿಸುವ ಆಚರಣೆ) ಸಮಾರಂಭಕ್ಕಾಗಿ ಇರಿಂಜಲಕುಡ ಬಳಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ರಾಮನ್‌ ಎಂಬ ರೋಬೋಟ್ ಆನೆ ಸಿದ್ಧವಾಗಿದೆ. ದೇವಸ್ಥಾನದ ಭಕ್ತ ಸಮೂಹದಿಂದ ಐದು ಮೋಟಾರುಗಳಲ್ಲಿ ಕಾರ್ಯನಿರ್ವಹಿಸುವ ರೋಬೋಟ್‌ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ದೇವಾಲಯದ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಲ್ಲಿ … Continued

ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್, ಏಕದಿನ ಸರಣಿಗೆ ಭಾರತದ ತಂಡ ಪ್ರಕಟ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಟೆಸ್ಟ್‌ಗಳಿಗೆ ತಂಡವನ್ನು ಭಾನುವಾರ (ಫೆಬ್ರವರಿ 19) ಪ್ರಕಟಿಸಿದೆ. ಅಲ್ಲದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ನಂತರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನಾಗ್ಪುರ ಮತ್ತು ದೆಹಲಿ ಟೆಸ್ಟ್‌ಗಳಲ್ಲಿ ಗೆಲುವು ದಾಖಲಿಸಿರುವ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ … Continued

ತನ್ನ ಯಕೃತ್ತಿನ ಭಾಗವನ್ನು ಅನಾರೋಗ್ಯ ಪೀಡಿತ ತಂದೆಗೆ ನೀಡಿ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿಯಾದ ಮಗಳು…!

ತ್ರಿಶೂರ್: ಕೇರಳದ 17 ವರ್ಷದ ಬಾಲಕಿಯೊಬ್ಬಳು ತನ್ನ ಯಕೃತ್ತಿನ(liver) ಭಾಗವನ್ನು ತಂದೆಗೆ ದಾನ ಮಾಡುವ ಮೂಲಕ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ದೇಶದಲ್ಲಿ ಅಪ್ರಾಪ್ತ ವಯಸ್ಕರಿಗೆ ಅಂಗಾಂಗ ದಾನ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ವಿನಾಯಿತಿ ಕೋರಿ 12ನೇ ತರಗತಿಯ ವಿದ್ಯಾರ್ಥಿನಿಯಾದ ದೇನನಂದಾ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಳು. ನ್ಯಾಯಾಲಯದ … Continued