ಎದೆನೋವಿನ ನಂತರ ಹಿರಿಯ ನಟ-ಜನಪ್ರಿಯ ಟಿವಿ ಪರ್ಸನಾಲಿಟಿ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

ನವದೆಹಲಿ: ಜನಪ್ರಿಯ ಟಿವಿ ಮತ್ತು ಚಲನಚಿತ್ರ ನಟ ಅನ್ನು ಕಪೂರ್ ಅವರು ಎದೆ ನೋವಿನ ಸಮಸ್ಯೆಯಿಂದ ಗುರುವಾರ ನವದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಪೂರ್ ಈಗ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೃದ್ರೋಗ ವಿಭಾಗದ ವೈದ್ಯರು ನಿಯಮಿತವಾಗಿ ಅವರ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಕಪೂರ್ ಅವರ ಆರೋಗ್ಯದ ಬಗ್ಗೆ, ಸರ್ ಗಂಗಾ … Continued

ಪಾಕಿಸ್ತಾನ-ಭಾರತದ ನಡುವೆ ಯಾವುದೇ ಬ್ಯಾಕ್‌ಚಾನಲ್ ಮಾತುಕತೆ ಇಲ್ಲ: ಹೀನಾ ರಬ್ಬಾನಿ ಖಾರ್

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ಬ್ಯಾಕ್‌ಚಾನಲ್ ಮಾತುಕತೆ ನಡೆಯುತ್ತಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ಈ ಕ್ಷಣದಲ್ಲಿ, ಅಂತಹ ಯಾವುದೇ ಮಾತಕತೆ ನಡೆಯುತ್ತಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ಅವರು ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಸೆನೆಟ್‌ಗೆ ತಿಳಿಸಿದರು. ಬ್ಯಾಕ್‌ಚಾನಲ್ ರಾಜತಾಂತ್ರಿಕತೆಯು ಫಲಿತಾಂಶ-ಆಧಾರಿತವಾಗಿದ್ದಾಗ ಅಪೇಕ್ಷಣೀಯವಾಗಿದೆ ಎಂದು ಅವರು ಹೇಳಿದರು. … Continued

ಈಗ ಲೋಕಸಭೆ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ..? ಬಿಜೆಪಿಗೆ ಎಷ್ಟು ಸ್ಥಾನ ಸಿಗಲಿದೆ..? : ಮೂಡ್‌ ಆಫ್‌ ದಿ ನೇಷನ್‌- ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ

ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಈ ವೇಳೆ ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಹೊರಬಿದ್ದಿದ್ದು, ಭಾರತದ ಜನರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯಕ್ಷಮತೆಯಿಂದ ತೃಪ್ತರಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ ಹಾಗೂ ಈಗಲೇ ಲೋಕಸಭೆ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷ 284 ಸ್ಥಾನಗಳನ್ನು ಗೆಲ್ಲಲಿದೆ … Continued

ವಿಶ್ವದ ಮೊದಲ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್‌ ಬಿಡುಗಡೆ

ನವದೆಹಲಿ : ಭಾರತದಲ್ಲೇ ತಯಾರಾದ ವಿಶ್ವದ ಮೊದಲ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್‌ ಅನ್ನು ಭಾರತ್ ಬಯೋಟೆಕ್ ಸಂಸ್ಥೆ ಗುರುವಾರ ಬಿಡುಗಡೆಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಲಸಿಕೆಯನ್ನು ಬಿಡುಗಡೆ ಮಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತೀ ಡೋಸ್‌ಗೆ 325 ರೂ.ಗಳಿಗೆ ಲಸಿಕೆ … Continued

ವಿವಾದ-ನಿಷೇಧದ ಮಧ್ಯೆ, ಕೇರಳ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕವು ಇಂದು, ಗುರುವಾರ ತಿರುವನಂತಪುರದಲ್ಲಿ ಪ್ರದರ್ಶಿಸಿತು. ಆದರೆ ಕೇಂದ್ರ ಸರ್ಕಾರವು ಭಾರತದಲ್ಲಿ ಅದನ್ನು ಸುಳ್ಳು ಮತ್ತು ಪ್ರೇರಿತ “ಪ್ರಚಾರ” ಎಂದು ಹೇಳಿ ನಿಷೇಧಿಸಿದೆ. ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರವು 2002 ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ಮೋದಿಯವರು ಗುಜರಾತ್‌ … Continued

ಕೇಶವ ಹೆಗಡೆ ಕೊಳಗಿಗೆ ನೆಬ್ಬೂರು ನಾರಾಯಣ ಭಾಗವತ ಪ್ರಶಸ್ತಿ : ಜನವರಿ 29ರಂದು ಪ್ರದಾನ

ಶಿರಸಿ: ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದಿಂದ ಯಕ್ಷಗಾನದ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ದಿ.ನಾರಾಯಣ ಭಾಗವತರ ಹೆಸರಿನಲ್ಲಿ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಕಟಿಸಲಾಗಿದೆ. ಸುಮಾರು 40 ವರ್ಷಗಳಿಂದ ಯಕ್ಷಗಾನದ ಭಾಗವತರಾಗಿರುವ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್.ಹೆಗಡೆ ಹಾವಳಿಮನೆ ತಿಳಿಸಿದ್ದಾರೆ. ಪ್ರಶಸ್ತಿಯನ್ನು … Continued

ಸಾಲ ಪಡೆಯಲು ಕರೆನ್ಸಿಯ ಮೇಲಿನ ನಿಯಂತ್ರಣ ಸಡಿಲಗೊಳಿಸಿದ ಪಾಕಿಸ್ತಾನ : ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ..

ನವದೆಹಲಿ: ಅಮೆರಿಕದ ಡಾಲರ್‌ ಎದುರು ಪಾಕಿಸ್ತಾನದ ಕರೆನ್ಸಿ ಇಂದು, ಗುರುವಾರ ದಾಖಲೆಯ ಕನಿಷ್ಠಮಟ್ಟ ₹ 255ಕ್ಕೆ ಕುಸಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಣದ ಕೊರತೆಯಿಂದಾಗಿ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಹೆಚ್ಚು ಅಗತ್ಯವಿರುವ ಸಾಲಗಳನ್ನು ಪಡೆಯಲು ವಿನಿಮಯ ದರದ ಮೇಲೆ ತನ್ನ ಹಿಡಿತವನ್ನು ಸಡಿಲಿಸಿದ ನಂತರ ಈ ಕುಸಿತವು ಬಂದಿದೆ. ಪಾಕಿಸ್ತಾನದ … Continued

ಯಡಿಯೂರಪ್ಪ ಜೊತೆಗಿನ ರಾಜಕೀಯ ಸಂಘರ್ಷಕ್ಕೆ ಇನ್ಮುಂದೆ ಪೂರ್ಣ ವಿರಾಮ : ಯತ್ನಾಳ

ವಿಜಯಪುರ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಹಿರಿಯರ ಸಲಹೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡಲು ನಿರ್ಧರಿಸಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುರಿತು ಮಾತನಾಡದಂತೆ … Continued

ನಿರೀಕ್ಷಿಸಿರಲಿಲ್ಲ, ಪದ್ಮವಿಭೂಷಣ ನನಗೆ ಬಯಸದೆ ಬಂದ ಭಾಗ್ಯ, ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುವೆ : ಎಸ್.ಎಂ.ಕೃಷ್ಣ

ಬೆಂಗಳೂರು: ನನಗೆ ನಿಜವಾಗಿಯೂ ಸಂತೋಷವಾಗಿದೆ. ನನಗೆ ಈ ದೊಡ್ಡ ಗೌರವವನ್ನು ನೀಡಿದ ಪ್ರಧಾನಿ ಮೋದಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆ ಎಂದು ಎಸ್‌ಎಂ ಕೃಷ್ಣ ಹೇಳಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಅವರಿಗೆ ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದ್ದು, ಈ … Continued

3,900 ಉದ್ಯೋಗಗಳ ವಜಾಗೊಳಿಸಲು ಯೋಜಿಸಿದ ಐಬಿಎಂ

ಐಟಿ ವಲಯದಲ್ಲಿ ವಜಾಗೊಳಿಸುವಿಕೆಯ ಅಲೆಯ ನಡುವೆ, ಮತ್ತೊಂದು ಟೆಕ್ ದೈತ್ಯ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆ ಪ್ರಕಟಿಸಿದೆ. ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ (IBM) ಸುಮಾರು 3,900 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಅಧಿಕೃತ ಹೇಳಿಕೆಯಲ್ಲಿ, ವಜಾಗೊಳಿಸುವಿಕೆಯು ಅದರ ಕಿಂಡ್ರಿಲ್ ವ್ಯವಹಾರದ ಸ್ಪಿನ್‌ಆಫ್ ಮತ್ತು AI ಘಟಕ ವ್ಯಾಟ್ಸನ್ ಹೆಲ್ತ್‌ನ ಒಂದು … Continued