26 ದಿನದ ಕಾರ್ಯಾಚರಣೆ ಮುಗಿಸಿ ಭೂಮಿಗೆ ಮರಳಿದ ನಾಸಾದ ಓರಿಯಾನ್‌ ಬಾಹ್ಯಾಕಾಶನೌಕೆ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಮುಂದಿನ ತಲೆಮಾರಿನ ವ್ಯೋಮನೌಕೆ ತನ್ನ 26 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸಿ ಮರಳಿ ಭೂಮಿಗೆ ಬಂದಿಳಿದಿದೆ. ಬಾಹ್ಯಾಕಾಶದ ಮೂಲಕ 14 ಲಕ್ಷ ಮೈಲುಗಳಷ್ಟು ಪ್ರಯಾಣಿಸಿದ ನಂತರ, ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯು ಆರ್ಟೆಮಿಸ್ I ಮಿಷನ್‌ನ ಅಂತಿಮ ಪ್ರಮುಖ ಮೈಲಿಗಲ್ಲು ಭೂಮಿಯ ಮೇಲೆ ಇಳಿದಿದೆ. … Continued

ಪ್ರಧಾನಿ ಮೋದಿ, 200 ಸಾಧುಗಳು, ಮೂರು ವೇದಿಕೆ: ಇದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸಮಾರಂಭದ ವಿಶೇಷತೆ

ಗಾಂಧಿನಗರ: ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಗಳಿಸಿದ ನಂತರ, ಪ್ರಸ್ತುತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರಾಜ್ಯದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಇಂದು ಸೋಮವಾರ ಗಾಂಧಿನಗರದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಗುಜರಾತ್‌ ಹಾಗೂ ದೇಶದ ವಿವಿಧ ಭಾಗಗಳ 200 ಸಾಧುಗಳನ್ನು ವಿಶೇಷವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಹಿಂದೆ ವಿಜಯ್ ರೂಪಾನಿ ಅವರ ಸ್ಥಾನಕ್ಕೆ ಭೂಪೇಂದ್ರ … Continued

ನಾಯಿಗಳು ಅಟ್ಟಿಸಿಕೊಂಡು ಬಂದ ನಂತರ ಎಟಿಎಂನಲ್ಲಿ ಸಿಕ್ಕಿಬಿದ್ದ ಜಿಂಕೆ | ವೀಕ್ಷಿಸಿ

ಅಂತರ್ಜಾಲದಲ್ಲಿ ಲಭ್ಯವಿರುವ ಹಲವಾರು ವೀಡಿಯೋಗಳು ಪ್ರಾಣಿಗಳಿಗೆ ಮಾನವ ಸಹಾಯದ ಅಗತ್ಯವಿರುವ ಜಿಗುಟಾದ ಸಂದರ್ಭಗಳಲ್ಲಿ ಹೇಗೆ ಸಿಲುಕಿಕೊಳ್ಳುತ್ತವೆ ಎಂಬುದನ್ನು ತೋರಿಸುತ್ತದೆ. ಅಂತಹ ಒಂದು ಘಟನೆ ಗುಜರಾತ್‌ನಲ್ಲಿ ದಾಖಲಾಗಿದ್ದು, ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಕೊಂಡಿದೆ. ಗುಜರಾತ್‌ನ ಧರಿಯ ಅಮ್ರೇಲಿಯಲ್ಲಿ ಈ ಘಟನೆ ನಡೆದಿದ್ದು, ಆದರೆ, ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅವರ … Continued

ಮಾಂಡೌಸ್ ಚಂಡಮಾರುತದ ಪರಿಣಾಮ: ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ, ಚಳಿ

ಬೆಂಗಳೂರು: ಮಾಂಡೌಸ್ ಚಂಡಮಾರುತದ ನಂತರ ವಾತಾವರಣದ ಬದಲಾವಣೆಗೆ ಜನ ಕಂಗಾಲಾಗಿದ್ದಾರೆ.  ಹವಮಾನ ಇಲಾಖೆ ಈಗ ಮತ್ತೆ ಮಳೆ  ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಚಳಿ ಜೊತೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಮಾಂಡೌಸ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳ ಮೇಲೆ ಆಗಿದ್ದು, ಕಳೆದ … Continued

ಕರ್ನಾಟಕ ಸೇರಿ ದೇಶದ 19 ರಾಜ್ಯಗಳಲ್ಲಿ 10%ಕ್ಕಿಂತ ಕಡಿಮೆ ಮಹಿಳಾ ಶಾಸಕರು: ಸರ್ಕಾರದ ಅಂಕಿಅಂಶಗಳು

ನವದೆಹಲಿ: ಸರಕಾರದ ಅಂಕಿಅಂಶಗಳ ಪ್ರಕಾರ ಸಂಸತ್ತಿನಲ್ಲಿ ಮತ್ತು ದೇಶದ ಬಹುತೇಕ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವು ಶೇಕಡಾ 15ಕ್ಕಿಂತ ಕಡಿಮೆಯಿದೆ. 19 ರಾಜ್ಯಗಳ ವಿಧಾನಸಭೆಗಳು ಶೇಕಡಾ 10 ಕ್ಕಿಂತ ಕಡಿಮೆ ಮಹಿಳಾ ಶಾಸಕರನ್ನು ಹೊಂದಿವೆ. ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಮಂಡಿಸಿದ ಮಾಹಿತಿಯ ಪ್ರಕಾರ, ಕರ್ನಾಟಕ, ಆಂಧ್ರಪ್ರದೇಶ, … Continued

ನಾಗಮಂಗಲ ಬಳಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

ಮಂಡ್ಯ: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ  ನಾಲ್ವರು ಸ್ಥಳದಲ್ಲಿ ಸಾವಿಗೀಡಾಗಿದ್ದು, ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಬಳಿ ಗೇಟ್ ಬಳಿ ನಡೆದ ವರದಿಯಾಗಿದೆ. ಘಟನೆಯಲ್ಲಿ ಮೂರ್ನಾಲ್ಕು ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಳ್ಳೂರು ಕ್ರಾಸ್‌ನಲ್ಲಿರುವ ಬಿಜಿಎಸ್‌ (BGS) ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ಡಿವೈಡರ್ ದಾಟಿ … Continued

ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್ ಪುತ್ರಿ ಕವಿತಾ ಮ್ಯಾರಥಾನ್ ವಿಚಾರಣೆ

ಹೈದರಾಬಾದ್‌: ಕೇಂದ್ರೀಯ ತನಿಖಾ ದಳ (ಸಿಬಿಐ) ಬಿಆರ್‌ಎಸ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರ ವಿಚಾರಣೆಯನ್ನು ಭಾನುವಾರ ಸಂಜೆ ಮುಕ್ತಾಯಗೊಳಿಸಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು  ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತಲುಪಿದ ನಂತರ ಎಂಟು ಗಂಟೆಗಳ … Continued

ರಾಜ್ಯದ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ದಿಢೀರ್ ಬುಲಾವ್

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕಾರಣವೂ ಚುರುಕು ಪಡೆಯುತ್ತಿದೆ. ಈಗ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಸೋಮವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ದೆಹಲಿಯಲ್ಲಿ ಪಕ್ಷದ ರಾಜ್ಯ ಹಿರಿಯ ನಾಯಕರ ಸಭೆ ಕರೆದು ಕಾರ್ಯತಂತ್ರದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ … Continued

ಮಳೆ : ಚಿಕ್ಕಬಳ್ಳಾಪುರ ಜಿಲ್ಲೆ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೀತಗಾಳಿ ಮತ್ತು ಮಳೆಯ ಮುನ್ಸೂಚನೆಯ ಹಿನ್ನೆಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಡಿಸೆಂಬರ್‌ 12ರಂದು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ ತಿಳಿಸಿದ್ದಾರೆ. ಈ ರಜೆ ಸರಿದೂಗಿಸಲು ಮುಂದಿನ ದಿನಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ … Continued

ಹಿರಿಯ ನಾಯಕರ ಕಡೆಗಣನೆಯಿಂದ ಕಳಪೆ ಫಲಿತಾಂಶ : ಗುಜರಾತ್‌ ಸೋಲಿಗೆ ಕಾರಣ ಹೇಳಿದ ವೀರಪ್ಪ ಮೊಯ್ಲಿ

ಬೆಂಗಳೂರು: ಗುಜರಾತ್‍ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ ಪರಿಣಾಮ ಕಾಂಗ್ರೆಸ್‌ಗೆ ಹೀನಾಯ ಸೋಲುಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷಕ್ಕೆ ಯಶಸ್ಸು ತಂದುಕೊಟ್ಟವರನ್ನು ಗೌರವಿಸಲೇಬೇಕು. ಹಿಮಾಚಲಪ್ರದೇಶದಲ್ಲಿ ವೀರಭದ್ರ ಸಿಂಗ್ ಪಕ್ಷವನ್ನು ಗೆಲ್ಲಿಸಿದರು. ಅವರ ಬಳಿಕ ಅವರ ಪತ್ನಿ ಪ್ರತಿಭಾ ಸಿಂಗ್‍ರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಲಾಯಿತು ಎಂದು … Continued