ಪ್ರಧಾನಿ ಮೋದಿ ಭೇಟಿ ಮಾಡಿದ ದೇವೇಗೌಡ : ಅಂತಾರಾಜ್ಯ ನದಿ ನೀರು ಹಂಚಿಕೆ ಸೇರಿ ಕೆಲ ವಿಚಾರಗಳ ಬಗ್ಗೆ ಚರ್ಚೆ

ನವದೆಹಲಿ: ಅಂತಾರಾಜ್ಯ ನದಿ ನೀರಿನ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು, ಮಂಗಳವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ, ಕೃಷ್ಣಾ, ಮಹದಾಯಿ ಅಂತರ್ ರಾಜ್ಯ ನದಿ … Continued

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬೇಡಿಕೆ: ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರವು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸಮಿತಿಗೆ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷರಾದರೆ ಸಚಿವರಾದ ಗೋವಿಂದ ಎಂ.ಕಾರಜೋಳ, ಎಸ್.ಅಂಗಾರ, ಪ್ರಭು ಚವ್ಹಾಣ ಹಾಗೂ ಡಾ.ಕೆ.ಸುಧಾಕರ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಕುರಿತು … Continued

ಲಂಚ ಪ್ರಕರಣ: ವಿಚಕ್ಷಣ ದಳದ ಕೈಗೆ ಸಿಕ್ಕಿಬಿದ್ದ ತಕ್ಷಣ ನೋಟು ನುಂಗಿದ ಪೊಲೀಸ್‌ | ದೃಶ್ಯ ವೀಡಿಯೊದಲ್ಲಿ ಸೆರೆ

ಹರ್ಯಾಣದ ಫರಿದಾಬಾದ್‌ನಲ್ಲಿ ವಿಚಕ್ಷಣದ ದಳದ (ವಿಜಿಲೆನ್ಸ್) ಅಧಿಕಾರಿಗಳ ತಂಡವು ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ನಂತರ ನಡೆದಿದ್ದು ತನಿಖಾ ಸಂಸ್ಥೆಗೂ ಅಚ್ಚರಿ ಮೂಡಿಸಿದೆ. ಘಟನೆಯ ವೀಡಿಯೋ ಹೊರಬಿದ್ದಿದ್ದು, ಸಬ್ ಇನ್ಸ್‌ಪೆಕ್ಟರ್  ಅವರನ್ನು ವಿಜಿಲೆನ್ಸ್ ಇಲಾಖೆ ಅಧಿಕಾರಿಗಳು ಹಿಡಿದಿದ್ದಾರೆ. ಆದರೆ ಆ ಸಬ್ ಇನ್ಸ್‌ಪೆಕ್ಟರ್ ವಿಚಕ್ಷಣ … Continued

ರಾಜೀವ್ ಗಾಂಧಿ ಫೌಂಡೇಶನ್ ಜಾಕಿರ್ ನಾಯ್ಕ್‌, ಚೀನಾದಿಂದ ಅನುದಾನ ತೆಗೆದುಕೊಂಡಿದೆ : ಅಮಿತ್ ಶಾ

ನವದೆಹಲಿ: ರಾಜೀವ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿ ಮತ್ತು ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ ಅವರಿಂದ ಅನುದಾನ ಪಡೆದಿದೆ ಮತ್ತು ಆದ್ದರಿಂದ ಅದರ ನೋಂದಣಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ. ಆರ್‌ಜಿಎಫ್‌ನ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ) ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ತಪ್ಪಿಸಲು ಕಾಂಗ್ರೆಸ್ … Continued

ಇಬ್ಬರು ಪುಟ್ಟ ಹೆಣ್ಣಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ

ವಿಜಯಪುರ: ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರಭಾಗದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ತಾಯಿ ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ … Continued

ಐಪಿಎಲ್‌ 2023 ಹರಾಜಿಗೆ 405 ಆಟಗಾರರ ಪಟ್ಟಿ ಪ್ರಕಟ: ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಐಪಿಎಲ್ 2023 ಹರಾಜಿಗೆ ಲಭ್ಯ ಇರುವ 405 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಆರಂಭದಲ್ಲಿ 991 ಆಟಗಾರರ ಆರಂಭಿಕ ಪಟ್ಟಿ ಸಿದ್ಧವಾಗಿತ್ತು. ಅದನ್ನು ಈಗ ಅಂತಿಮವಾಗಿ 405 ಆಟಗಾರರಿಗೆ ಇಳಿಸಲಾಗಿದೆ. ಆರಂಭದಲ್ಲಿ, ಒಟ್ಟು 369 ಆಟಗಾರರನ್ನು 10 ತಂಡಗಳು ಶಾರ್ಟ್‌ಲಿಸ್ಟ್ ಮಾಡಿದವು. ನಂತರ ಮೂವತ್ತಾರು ಹೆಚ್ಚುವರಿ ಆಟಗಾರರನ್ನುಸೇರಿಸಲು … Continued

ಅರುಣಾಚಲದಲ್ಲಿ ಭಾರತ-ಚೀನಾ ಘರ್ಷಣೆ: ‘ವಿವಾದಿತ’ ಗಡಿ ದಾಟಿದ ಭಾರತದ ಪಡೆಗಳು, ಚೀನಾ ಸೇನೆಯ ಆರೋಪ

ನವದೆಹಲಿ: ಡಿಸೆಂಬರ್ 9ರಂದು ಭಾರತೀಯ ಪಡೆಗಳು ‘ವಿವಾದಿತ’ ಗಡಿಯನ್ನು ‘ಕಾನೂನುಬಾಹಿರವಾಗಿ’ ದಾಟಿದೆ ಎಂದು ಚೀನಾ ಸೇನೆ ಮಂಗಳವಾರ ಹೇಳಿಕೊಂಡಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಭಾರತದೊಂದಿಗಿನ ಗಡಿಯುದ್ದಕ್ಕೂ ಪರಿಸ್ಥಿತಿ “ಒಟ್ಟಾರೆಯಾಗಿ ಸ್ಥಿರವಾಗಿದೆ” ಎಂದು ಪ್ರತಿಪಾದಿಸಿದ ದಿನದ ನಂತರ ಈ ಹೇಳಿಕೆ ಬಂದಿದೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವೆಸ್ಟರ್ನ್ ಥಿಯೇಟರ್‌ನ ವಕ್ತಾರ … Continued

ಪತ್ನಿ-ನಾಲ್ವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಚೆನ್ನೈ: ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಹತ್ಯೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಮತ್ತೋರ್ವ ಪುತ್ರಿ 9 ವರ್ಷದ ಬಾಲಕಿಯನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಯ ಪ್ರಕಾರ, ಪಳನಿಸಾಮಿ (45) ಎಂದು ಗುರುತಿಸಲಾದ ವ್ಯಕ್ತಿ ತನ್ನ ಪತ್ನಿ … Continued

ಚಿತ್ರದುರ್ಗ ಮುರುಘಾಮಠದ ಟ್ರಸ್ಟ್‌-ಶಿಕ್ಷಣ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ನಿವೃತ್ತ ಐಎಎಸ್‌ (IAS) ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಚಿತ್ರದುರ್ಗ ಮುರುಘಾಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಇಂದು (ಡಿಸೆಂಬರ್ 13) ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ಮುರುಘಾಮಠದ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ … Continued

ಅರುಣಾಚಲದಲ್ಲಿ ಭೂಕಬಳಿಕೆ ಮಾಡುವ ಚೀನಾ ಪಡೆಗಳ ಯತ್ನವನ್ನು ತಡೆದ ಭಾರತದ ಸೈನಿಕರು ; ರಕ್ಷಣಾ ಸಚಿವ ರಾಜನಾಥ ಸಿಂಗ್‌

ನವದೆಹಲಿ: ಕಳೆದ ವಾರ ತವಾಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸುವ ಮೂಲಕ ಅರುಣಾಚಲ ಪ್ರದೇಶದಲ್ಲಿ “ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ” ಚೀನಾ ಪಡೆಗಳ ಪ್ರಯತ್ನವನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ ಎಂದು ಸರ್ಕಾರ ಇಂದು, ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ. ಉಭಯ ಸದನಗಳಲ್ಲಿ ಹೇಳಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತೀಯ ಸೈನಿಕರು ಅರುಣಾಚಲ ಪ್ರದೇಶದಲ್ಲಿ … Continued