ಡಿಸೆಂಬರ್‌ 18ರಂದು ಹುಬ್ಬಳ್ಳಿಯಲ್ಲಿ ಶ್ರೀ ಅಜಿತ ಸಾಹಿತ್ಯೋತ್ಸವ ಕಾರ್ಯಕ್ರಮ, 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ : ಭವರಲಾಲ್‌ ಜೈನ್‌

ಹುಬ್ಬಳ್ಳಿ: ಶ್ರೀ ಅಜಿತ್ ಸಾಹಿತ್ಯ ಮಹೋತ್ಸವ ಸಮಿತಿ ಹಾಗೂ ಅರ್ಹಂ ಪರಿವಾರ ಟ್ರಸ್ಟ್ ವತಿಯಿಂದ ಡಿಸೆಂಬರ್‌ 18ರಂದು ಶ್ರೀ ಅಜಿತ ಸಾಹಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಯಲಿರುವ ಭವ್ಯ ಟೆಂಟ್‌ನಲ್ಲಿಯೇ ಮಾಧ್ಯಮದವರಿಗೆ ವಿವರ ನೀಡಿದ ಅಜಿತ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಭವರಲಾಲ್ ಸಿ. ಜೈನ ಅವರು ಮಾತನಾಡಿ, ಜೈನಾಚಾರ್ಯರಾದ ಅಜಿತಶೇಖರ ಸುರೀಶ್ವರ ಅವರು ಕಳೆದ ಒಂದು … Continued

ಸುಲಿಗೆ ಯತ್ನದ ಆರೋಪ: ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷನ ಬಂಧನ

ಮಂಗಳೂರು: ಚಿನ್ನ ಮತ್ತು ನಗದು ಬೇಡಿಕೆ ಈಡೇರದಿದ್ದರೆ ಉದ್ಯಮಿಯೊಬ್ಬರ ಖಾಸಗಿ ಮಾಹಿತಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಕೋವೂರು ನಿವಾಸಿ ಸುರೇಶ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಾವು ಮತ್ತು ಪವಿತ್ರನ್ ಸುರತ್ಕಲ್‌ನಲ್ಲಿ ಪಾಲುದಾರಿಕೆ ಆಧಾರದ ಮೇಲೆ ವ್ಯಾಪಾರ … Continued

ಮಂಗಳೂರು ಆಟೋ ಸ್ಫೋಟ ಪ್ರಕರಣ : ತನಿಖೆ ಮಾಡದೆ ಉಗ್ರಗಾಮಿ ಎಂದು ಹೇಗೆ ಹೇಳಿದ್ರಿ ಎಂದು ಡಿಕೆ ಶಿವಕುಮಾರ ಪ್ರಶ್ನೆ

ಬೆಂಗಳೂರು: ಕಳೆದ ತಿಂಗಳು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ತನಿಖೆ ನಡೆಸದೆ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು “ಭಯೋತ್ಪಾದಕ” ಎಂದು ಕರೆದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದ್ದಾರೆ. ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣವು ಮುಂಬೈ ದಾಳಿ ಅಥವಾ … Continued

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್‌. ಪಾಟೀಲ, ಮುಖಂಡ ಶ್ರೀನಿವಾಸ ಭಟ್‌ ದಾತ್ರಿ

ಬೆಂಗಳೂರು: ಇಂದು ಗುರುವಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲ ಹಾಗೂ ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಪ್ರಮುಖ ಶ್ರೀನಿವಾಸ ಭಟ್‌ ದಾತ್ರಿ ಶ್ರೀನಿವಾಸ ಭಟ್‌ ದಾತ್ರಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ … Continued

ವ್ಯಕ್ತಿಯ ಮೇಲೆಯೇ ಹರಿದು ಹೋದ ಬಸ್‌ : ಮ್ಯಾಜಿಕ್‌ ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ಪಾರಾದ ವ್ಯಕ್ತಿ | ವೀಕ್ಷಿಸಿ

ಮುಂಬೈ:ಬೆಚ್ಚಿಬೀಳಿಸುವ ವೀಡಿಯೊದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಕೆಳಗೆ ಸಿಲುಕಿದ ವಯೋವೃದ್ಧನೊಬ್ಬ ಜಾದು ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರ್ತಾ-ಪೈಜಾಮಾ ಧರಿಸಿದ್ದ ವ್ಯಕ್ತಿಯೊಬ್ಬ ಆ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಒಂದು … Continued

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಪ್ರಗತಿ: ದೆಹಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಅವಳದ್ದೇ ಎಂದು ಹೇಳಿದ ಡಿಎನ್‌ಎ ಪರೀಕ್ಷೆ

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಅಂತಿಮವಾಗಿ ಕೆಲವು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ – ದೆಹಲಿಯ ಮೆಹ್ರೌಲಿ ಪ್ರದೇಶದ ಕಾಡಿನಲ್ಲಿ ಪೊಲೀಸರಿಗೆ ಸಿಕ್ಕ ಮೂಳೆಗಳು ನಿಜವಾಗಿಯೂ ಅವಳದ್ದೇ ಎಂದು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ. ಆಕೆಯ ತಂದೆಯ ಡಿಎನ್‌ಎ ಮಾದರಿಗಳನ್ನು ಬಳಸಿಕೊಂಡು ನಡೆಸಿದ ಪರೀಕ್ಷಾ ವರದಿಯು ಇಂದು, ಗುರುವಾರ ಬಂದಿದ್ದು, ತಂದೆಯ ಡಿಎನ್‌ಎಯೊಂದಿಗೆ ಸಿಕ್ಕ ಎಲುಬಿನ … Continued

ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ವಿದ್ಯಾರ್ಥಿನಿಯರು…!

ಮಂಡ್ಯ: ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕನೋರ್ವನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿಯರೆಲ್ಲ ಸೇರಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪ್ರೌಢ … Continued

ಕರ್ನಾಟಕ ವಿಧಾನಸಭಾ ಚುನಾವಣೆ : 36 ಸದಸ್ಯರ ಕಾಂಗ್ರೆಸ್‌ ಚುನಾವಣಾ ಸಮಿತಿ ರಚನೆ-ಸದಸ್ಯರ ಪಟ್ಟಿ ಇಲ್ಲಿದೆ…

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದೆ. ದೆಹಲಿಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಹಂಚಿಕೆ ಮಾಡಲು 36 ಮಂದಿ ಸದಸ್ಯರ ಕೆಪಿಸಿಸಿ ಚುನಾವಣಾ ಸಮಿತಿ ರಚಿಸಿದೆ. ಬುಧವಾರ ರಾತ್ರಿ (ಡಿಸೆಂಬರ್ 14) ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಪ್ರಕಟಿಸಿದ್ದು, ಟಿಕೆಟ್​​ಗಾಗಿ ಸಲ್ಲಿಸಿದ್ದ … Continued

‘ಒಸಾಮಾ ಬಿನ್ ಲಾಡೆನ್ಗೆ ಆತಿಥ್ಯ …ಸಂಸತ್ತಿನ ಮೇಲೆ ದಾಳಿ…’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಜೈಶಂಕರ್

ವಿಶ್ವಸಂಸ್ಥೆ: ಪಾಕಿಸ್ತಾನವು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದ ನಂತರ ಭಾರತವು ಪಾಕಿಸ್ತಾನಕ್ಕೆ ಬಲವಾಗಿ ತಿರುಗೇಟು ನೀಡಿದೆ. ಹತ್ಯೆಯಾದ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ ಮತ್ತು ನೆರೆಯ ರಾಷ್ಟ್ರದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶಕ್ಕೆ “ಬೋಧನೆ” ಮಾಡುವ ಅರ್ಹತೆ ಇಲ್ಲ ಎಂದು ಭಾರತವು ಬಲವಾಗಿ ಪ್ರತಿಪಾದಿಸಿದೆ. ನಾವು ಇಂದು … Continued

ಡಿಜೆ ಸಂಗೀತ, ಬ್ಯಾಂಡ್ ನುಡಿಸಿದರೆ ನಿಕಾಹ್ ಮಾಡಬೇಡಿ: ಧರ್ಮಗುರುಗಳಿಗೆ ಮುಸ್ಲಿಂ ಸಂಘಟನೆ ಸೂಚನೆ

ನವದೆಹಲಿ: ಕಾರ್ಯಕ್ರಮದಲ್ಲಿ ಡಿಜೆ ಮ್ಯೂಸಿಕ್ ಅಥವಾ “ಬ್ರಾಸ್ ಬ್ಯಾಂಡ್” ನುಡಿಸಿದರೆ ‘ನಿಕಾಹ್’ (ಮುಸ್ಲಿಂ ವಿವಾಹ) ಮಾಡಬೇಡಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುಸ್ಲಿಂ ಮಹಾಸಭಾವು ಧರ್ಮಗುರುಗಳನ್ನು ಒತ್ತಾಯಿಸಿದೆ. ವಿವಾಹ ಸಮಾರಂಭಗಳನ್ನು “ಸರಳವಾಗಿ” ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು … Continued