ಕೇವಲ ಸ್ಕ್ರ್ಯಾಪ್‌ಗಳಿಂದ 28 ಅಡಿ ಉದ್ದದ 5 ಟನ್ ತೂಕದ ವಿಶ್ವದ ಅತಿದೊಡ್ಡ ‘ರುದ್ರ ವೀಣೆ’ ತಯಾರಿಸಿದ 15 ಕಲಾವಿದರ ತಂಡ

ಭೋಪಾಲ್ : ಭೋಪಾಲ್‌ನಲ್ಲಿ ಕಲಾವಿದರ ತಂಡವೊಂದು 5 ಟನ್ ತೂಕದ ಅಪರೂಪದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್‌ಗಳಿಂದ ಸಿದ್ಧಪಡಿಸಿದೆ. ಈ ವೀಣೆಯು 28 ಅಡಿ ಉದ್ದವಿದ್ದು, 10 ಅಡಿ ಅಗಲವಿದೆ ಮತ್ತು 12 ಅಡಿ ಎತ್ತರವಿದೆ. 15 ಸದಸ್ಯರ ತಂಡ ಇದನ್ನು ನಿರ್ಮಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದೆ ಮತ್ತು ಅದರ ತಯಾರಿಕೆಗೆ ಸುಮಾರು 10 ಲಕ್ಷ … Continued

ಉಜಿರೆ : ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆ

ಮಂಗಳೂರು: ಉಜಿರೆ ಸಮೀಪದ ಪೆರ್ಲದಲ್ಲಿ ಪುರಾತನ ಶಿವಲಿಂಗವೊಂದು ಪತ್ತೆಯಾಗಿರುವುದು ವರದಿಯಾಗಿದೆ. ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ಅಷ್ಟಮಂಗಲ ಪ್ರಶ್ನೆ ಇಟ್ಟ ವೇಳೆ ದೇವಸ್ಥಾನದ ಕುರುಹು ಇದ್ದ ಪಕ್ಕದ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಇದೆ ಹೇಳಲಾಗಿತ್ತು. ಅದರಂತೆ ಅಲ್ಲಿ ಅಗೆದಾಗ (ಡಿ.16) ರಂದು ಪುರಾತನ ಶಿವಲಿಂಗ ಪತ್ತೆಯಾಗಿದೆ. ಡಿಸೆಂಬರ್‌ 8 , 9, … Continued

ಬದುಕಿರುವಾಗಲೇ ಸಾವಿನ ದಿನ ಆಚರಣೆಯ ಆಮಂತ್ರಣ ಪತ್ರಿಕೆ…!. ಮಾಜಿ ಸಚಿವರ ಡೆತ್‌ ಡೇ ಆಮಂತ್ರಣ ಪತ್ರಿಕೆ ವೈರಲ್…!

ವಿಜಯವಾಡ : “ನನ್ನ ಸಾವಿನ ದಿನದ ಆಚರಣೆಗೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.. ಇಷ್ಟು ವರ್ಷ ಆಚರಿಸಿಕೊಂಡು ಬಂದ ಜನ್ಮದಿನ ಅರ್ಥಹೀನವಾದ ಕಾರಣ ನನ್ನ ಸಾವಿನ ದಿನವನ್ನು ಆಚರಿಸಲು ಬಯಸುತ್ತೇನೆ.. ನನ್ನ ಸಾವಿನ ವರ್ಷವನ್ನು 2034 ಎಂದು ನಿರ್ಧರಿಸಿದ್ದೇನೆ.. ನನಗೆ ಸಾಯಲು ಇನ್ನೂ 12 ವರ್ಷಗಳಿವೆ. ಹೀಗಾಗಿ ಇಂದಿನಿಂದ 12ನೇ ಪುಣ್ಯತಿಥಿಯನ್ನು ಆಚರಿಸುತ್ತಿದ್ದೇನೆ. ಆದ್ದರಿಂದ ನೀವೆಲ್ಲರೂ ಬಂದು ನನ್ನನ್ನು … Continued

2023ರ ವೇಳೆಗೆ ಚೀನಾದಲ್ಲಿ 10 ಲಕ್ಷ ಕೋವಿಡ್ ಸಾವುಗಳು ಸಂಭವಿಸಬಹುದು: ಹೊಸ ಅಧ್ಯಯನದ ಊಹೆ

ಚಿಕಾಗೋ: ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್ (IHME) ನ ಹೊಸ ಪ್ರಕ್ಷೇಪಗಳ ಪ್ರಕಾರ, ಚೀನಾದ ಕಟ್ಟುನಿಟ್ಟಿನ ಕೋವಿಡ್‌-19 ನಿರ್ಬಂಧಗಳನ್ನು ಹಠಾತ್ ತೆಗೆದುಹಾಕುವುದರಿಂದ 2023ರ ವೇಳೆಗೆ ಪ್ರಕರಣಗಳು ಸ್ಫೋಟಗೊಳ್ಳಬಹುದು ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಬಹುದಾಗಿದೆ. ಗುಂಪಿನ ಪ್ರಕ್ಷೇಪಗಳ ಪ್ರಕಾರ, ಏಪ್ರಿಲ್ 1 ರ ಸುಮಾರಿಗೆ ಚೀನಾದಲ್ಲಿ ಪ್ರಕರಣಗಳು ಉತ್ತುಂಗಕ್ಕೇರುತ್ತವೆ, … Continued

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಆರೋಪಿ ಶಾರೀಕ್‌ ಬೆಂಗಳೂರಿಗೆ ಸ್ಥಳಾಂತರ

ಮಂಗಳೂರು: ಮಂಗಳೂರು ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ನವೆಂಬರ್‌ 19ರಂದು ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ನನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೊಹಮ್ಮದ್‌ ಶಾರೀಕ್‌ ಗಂಭೀರ ಗಾಯಗಳಿಂದ ಚೇತರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನಲೆಯಲ್ಲಿ ಆತನನ್ನು ಬೆಂಗಳೂರಿನ ವಿಕ್ಟೋರಿಯಾ … Continued

ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳ ಕ್ಷಮಾಪಣೆ ಅರ್ಜಿಗಳನ್ನು ಅಸ್ತಿತ್ವದಲ್ಲಿರುವ ನೀತಿಯಂತೆ ಪರಿಗಣಿಸಬೇಕು ಎಂಬ  2022ರ ಮೇ ತಿಂಗಳ ತೀರ್ಪನ್ನು ಮರುಪರಿಶೀಲಿಸುವಂತೆ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರ … Continued

ಮನೆಗೆ ಬೆಂಕಿ ತಗುಲಿ 6 ಮಂದಿ ಸಜೀವ ದಹನ

ಹೈದರಾಬಾದ್‌: ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಯೊಂದರಲ್ಲಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಸದಸ್ಯರು ದಹನಗೊಂಡಿದ್ದಾರೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50), ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಅವರ ಇಬ್ಬರು ಪುತ್ರಿಯರು ಸಾವಿಗೀಡಾಗಿದ್ದಾರೆ.ಮಂದಮರಿ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ … Continued

14 ಬಾರಿ ಚಿನ್ನದ ಅಂಬಾರಿ ಹೊತ್ತ ದಸರಾ ಆನೆಗೆ ಗುಂಡೇಟು: ಜಮೀನು ಮಾಲೀಕನ ಬಂಧನ

ಮೈಸೂರು: ಮೈಸೂರು ದಸರಾದಲ್ಲಿ (Mysuru Dasara) 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಗ್ಗಳಿಕೆಯ ‘ಬಲರಾಮ’ ಆನೆಗೆ ಗುರುವಾರ ರಾತ್ರಿ ಗುಂಡು ಹಾರಿಸಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಡಿಸೆಂಬರ್ 15ರಂದು ಆನೆ ಬಲರಾಮ ಹೋಗಿದ್ದು, ಇದರಿಂದ ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ ಎಂಬಾತ ಆನೆಗೆ ಗುಂಡು … Continued

ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ-ರಾಜತಾಂತ್ರಿಕ ಮಾರ್ಗವೇ ಪರಿಹಾರ: ರಷ್ಯಾ ಅಧ್ಯಕ್ಷ ಪುತಿನ್ ಜೊತೆ ಮಾತುಕತೆ ವೇಳೆ ಪ್ರಧಾನಿ ಮೋದಿ ಪುನರುಚ್ಚಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ “ಒಂದೇ ಮಾರ್ಗ” ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ಉಭಯ ನಾಯಕರು ಇಂಧನ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು. “ಮೋದಿಯವರ ಕೋರಿಕೆಯ ಮೇರೆಗೆ … Continued

6,700 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಪಿಎನ್‌ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ 3 ಹೊಸ ಪ್ರಕರಣಗಳು ದಾಖಲು

ನವದೆಹಲಿ: ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಪರಾರಿಯಾಗಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಹೊಸ ಪ್ರಕರಣಗಳನ್ನು ದಾಖಲಿಸಿದೆ. ತನ್ನ ಸೋದರಳಿಯ ನೀರವ್ ಮೋದಿ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB)ಗೆ 13,000 ಕೋಟಿ ರೂ.ಗಳಿಗೆ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ ಈಗ 6,700 ಕೋಟಿ ರೂ.ಗಳಿಗೂ ಹೆಚ್ಚು ಸಾಲದ … Continued