ಮಗನಿಗಾಗಿ ರಾಮನಗರ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ, ರಾಮನಗರ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದಿಂದ ಪುತ್ರ ನಿಖಿಲ್‌ ಸ್ಪರ್ಧಿಸಲಿದ್ದಾರೆ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಶನಿವಾರ ಘೋಷಿಸಿದ್ದು, ಈ ಮೂಲಕ ಊಹಾಪೋಹಹಳಿಗೆ ತೆರೆ … Continued

ನೇಕಾರರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸಹಾಯಧನ ಶೇ.50ರಷ್ಟು ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಬೆಂಗಳೂರು: ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುತ್ತಿರುವ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ, 2 ಲಕ್ಷ ರೂ.ಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, 5 ಎಚ್ ಪಿ ವರೆಗೆ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ 48 ಜಿಎಸ್ ಟಿ ಕೌನ್ಸಿಲ್ ಸಭೇಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ … Continued

ನನ್ನ ಮರಣದ ನಂತರ ನನ್ನ ದೇಹವನ್ನು ಶಿಗ್ಗಾಂವಿ ಕ್ಷೇತ್ರದ ಮಣ್ಣಿನಲ್ಲೇ ಹೂಳಬೇಕು: ಸಿಎಂ ಬೊಮ್ಮಾಯಿ ಭಾವುಕ ಮಾತು

ಹಾವೇರಿ: ಯಾವ ಜನ್ಮದ ಋಣವೋ ನನಗೆ ಗೊತ್ತಿಲ್ಲ, ನಾನು ಬಂದಾಗ ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆ ಇದೇ ಕ್ಷೇತ್ರದಲ್ಲಿ ಮಾಡಬೇಕು, ನನ್ನನ್ನು ಇದೇ ಮಣ್ಣಿನಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ ನಡೆದ ಕಂದಾಯ ಸಚಿವ ಆರ್‌. ಅಶೋಕ ಅವರ … Continued

ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯದ ನಡುವಿನ ರೈಲು ಮಾರ್ಗದ ಡ್ರೋನ್‌ನಿಂದ ತೆಗೆದ ಅದ್ಭುತ ರಮಣೀಯ ದೃಶ್ಯಕ್ಕೆ ಇಂಟರ್ನೆಟ್ ಮಂತ್ರಮುಗ್ಧ | ವೀಕ್ಷಿಸಿ

ಬೆಂಗಳೂರು : “ಇನ್‌ಕ್ರೆಡಿಬಲ್ ಇಂಡಿಯಾ”ದ ಮೋಡಿ ಮಾಡುವ ಸೌಂದರ್ಯದಿಂದ ಮತ್ತೊಮ್ಮೆ ಬೆರಗುಗೊಂಡಿರುವ ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಉಡುಪಿ ರೈಲ್ವೆ ಮಾರ್ಗದ ರಮಣೀಯ ಹಾಗೂ ರೋಮಾಂಚಕಾರಿ ಮಾರ್ಗದ ಡ್ರೋನ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಸೋಲ್ಹೈಮ್ ಅವರು ಬುಧವಾರ ಟ್ವಿಟರ್‌ನಲ್ಲಿ ಕ್ಲಿಪ್ ಹಂಚಿಕೊಂಡಿದ್ದಾರೆ ಮತ್ತು ಇದು 86,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 4,000ಕ್ಕೂ ಹೆಚ್ಚು ಇಷ್ಟಗಳನ್ನು … Continued

ಪ್ರಧಾನಿಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ಪಾಕಿಸ್ತಾನದ ಬಿಲಾವಲ್ ಭುಟ್ಟೋ ಶಿರಚ್ಛೇದ ಮಾಡಿದವರಿಗೆ 2 ಕೋಟಿ ರೂ. ಬಹುಮಾನ ಘೋಷಿಸಿದ ಬಿಜೆಪಿ ನಾಯಕ…!

ಬಾಗ್‌ಪತ್‌ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿರುವಾಗ, ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ವಿದೇಶಾಂಗ ಸಚಿವರ ಶಿರಚ್ಛೇದ ಮಾಡುವವರಿಗೆ 2 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಶನಿವಾರ ಹೇಳಿದ್ದಾರೆ. ಇಲ್ಲಿನ ಕಲೆಕ್ಟರೇಟ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ … Continued

ತನ್ನ ಕೋರ್ಸ್‌ಗಳ ಖರೀದಿಗೆ ಆಮಿಷದ ಆರೋಪ : ಬೈಜೂಸ್‌ ಸಿಇಒಗೆ ಸಮನ್ಸ್ ನೀಡಿದ ಎನ್‌ಸಿಪಿಸಿಆರ್‌

ನವದೆಹಲಿ : ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (NCPCR) ಬೈಜು (BYJU) ಸಿಇಒ ಬೈಜು ರವೀಂದ್ರನ್ ಅವರಿಗೆ ಸಮನ್ಸ್ ನೀಡಿದೆ. BYJU’S ನ ಮಾರಾಟ ತಂಡವು ತಮ್ಮ ಮಕ್ಕಳಿಗೆ ತಮ್ಮ ಕೋರ್ಸ್‌ಗಳನ್ನು ಖರೀದಿಸಲು ಪೋಷಕರಿಗೆ ಆಮಿಷವೊಡ್ಡಲು ದುಷ್ಕೃತ್ಯಗಳಲ್ಲಿ ತೊಡಗಿದೆ ಎಂಬ ಸುದ್ದಿ ವರದಿ ಆಧರಿಸಿ ಆಯೋಗವು ಕ್ರಮ ಕೈಗೊಂಡಿದೆ. ಕೆಲವು ಗ್ರಾಹಕರು ತಮ್ಮನ್ನು ಶೋಷಣೆಗೆ … Continued

ಹೊಸದಾಗಿ 921 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಜೊತೆ ಬಿಎಂಟಿಸಿ ಒಪ್ಪಂದ

ಬೆಂಗಳೂರು; ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಕಂಪನಿಯು ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ ಹಾಗೂ ಮುಂದಿನ 12 ವರ್ಷಗಳ ಅವಧಿಗೆ ನಗರದಲ್ಲಿ ಅವುಗಳ ಓಡಾಟದ ಜೊತೆಗೆ ನಿರ್ವಹಣೆಯ ಜವಾಬ್ದಾರಿಯನ್ನು ಅದಕ್ಕೆ ನೀಡಲಾಗುತ್ತದೆ. ಬೆಂಗಳೂರು ನಗರದ ಜೀವನಾಡಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಶುಕ್ರವಾರ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯೊಂದಿಗೆ ಹೊಸ … Continued

‘ಪಠಾಣ್‌ನ ಬಿಡುಗಡೆ ನಿರ್ಬಂಧಿಸಿ’: ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಕ್ಕೆ ಈಗ ಮುಸ್ಲಿಂ ಮಂಡಳಿಯಿಂದ ಶಾರುಖ್ ಖಾನ್ ಸಿನೆಮಾಕ್ಕೆ ವಿರೋಧ

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಪಠಾಣ್‌’ ಚಿತ್ರವು ಅದರ “ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳನ್ನು ಎದುರಿಸುತ್ತಿದೆ. ಹಿಂದೂ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸಿನೆಮಾಕ್ಕೆ ಈಗ, ಮಧ್ಯಪ್ರದೇಶದ ಮುಸ್ಲಿಂ ಉಲೇಮಾ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಪಠಾಣ್‌ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಮಂಡಳಿ ಒತ್ತಾಯಿಸಿದೆ. ಚಿತ್ರದಲ್ಲಿನ ಅಸಭ್ಯತೆಯ … Continued

ಪತ್ನಿಯೊಂದಿಗೆ ಜಗಳ: 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದು ನಂತರ ತಾನೂ ಜಿಗಿದ ವ್ಯಕ್ತಿ

ನವದೆಹಲಿ: ಪತ್ನಿಯೊಂದಿಗೆ ಜಗಳ ಮಾಡಿದ ನಂತರ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ತಾನೂ ಜಿಗಿದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂದೆ ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್‌)ಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ … Continued

ಕಾಲುವೆಗೆ ಈಜಲು ಹೋಗಿ ನೀರು ಪಾಲಾದ ಮೂವರು ವಿದ್ಯಾರ್ಥಿಗಳು

ಬಳ್ಳಾರಿ : ಕಾಲುವೆಗೆ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದ ವರದಿಯಾಗಿದೆ. ಒಟ್ಟು ಆರು ವಿದ್ಯಾರ್ಥಿಗಳು ಈಜಲು ತೆರಳಿದ್ದರು ಎಂದು ಹೇಳಲಾಗಿದ್ದು, ಅವರಲ್ಲಿ ಮೂವರು ನೀರು ಪಾಲಾಗಿದ್ದಾರೆ. ಮೂವರು ಪಾರಾಗಿ ಬಂದಿದ್ದಾರೆ. ಮೃತರನ್ನು ಯಶವಂತ​​, ಅಂಜಿನಿ, ಗುರುರಾಜ ಎಂದು ಗುರುತಿಸಲಾಗಿದೆ. ಹೊಸಪೇಟೆಯ ವಿಜಯನಗರ ಕಾಲೇಜ್​ನಲ್ಲಿ ಇಬ್ಬರು ಪಿಯುಸಿ … Continued