ದೆಹಲಿ ಮದ್ಯ ನೀತಿ ಪ್ರಕರಣ: ಉದ್ಯಮಿ ಅಮಿತ್ ಅರೋರಾ ಬಂಧಿಸಿದ ಇ.ಡಿ.

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿಕಟವರ್ತಿ ಅಮಿತ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಅರೋರಾ ಗುರುಗ್ರಾಮ ಮೂಲದ ಬಡ್ಡಿ ರಿಟೇಲ್‌ನ ನಿರ್ದೇಶಕರಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಇ.ಡಿ. ಬಂಧಿಸಿದೆ. ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು … Continued

ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನ

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88 ವರ್ಷ) ಅವರು ಬುಧವಾರ ನಿಧನರಾಗಿದ್ದಾರೆ. ಯಕ್ಷಗಾನದ ತೆಂಕತಿಟ್ಟು ಶೈಲಿಯ ಖ್ಯಾತ ಕಲಾವಿದರಾಗಿದ್ದ ಇವರು ಧರ್ಮಸ್ಥಳ, ಸುರತ್ಕಲ್ ಮತ್ತು ಇರಾ ಸೋಮನಾಥೇಶ್ವರ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಯರ್ಕಾಡಿ … Continued

ಮಂಜುಗಡ್ಡೆಯಲ್ಲಿ ಹೂಳಿದ್ದ 48,500 ವರ್ಷಗಳಷ್ಟು ಪುರಾತನ ‘ಜೊಂಬಿ ವೈರಸ್ʼ ಪುನರುಜ್ಜೀವನಗೊಳಿಸಿದ ವಿಜ್ಞಾನಿಗಳು…!

ಹೆಚ್ಚಿದ ಜಾಗತಿಕ ತಾಪಮಾನವು ಉತ್ತರ ಗೋಳಾರ್ಧದ ಕಾಲುಭಾಗವನ್ನು ಆವರಿಸಿರುವ ಪ್ರಾಚೀನ ಪರ್ಮಾಫ್ರಾಸ್ಟ್ (ಶಾಶ್ವತವಾಗಿ ಹೆಪ್ಪುಗಟ್ಟಿದ ನೆಲ) ಕರಗುವಿಕೆಗೆ ಕಾರಣವಾಗಿದೆ. ಹೀಗಾಗಿ ಇಲ್ಲಿಯವರೆಗೆ ಮಂಜುಗಡ್ಡೆಯ ಕೆಳಗೆ ಲಾಕ್ ಆಗಿದ್ದ 48,000 ವರ್ಷಗಳಷ್ಟು ಹಳೆಯದಾದ ಜೊಂಬಿ ವೈರಸ್ ಅನ್ನು ವಿಜ್ಞಾನಿಗಳು ಪುನರುಜ್ಜೀವನಗೊಳಿಸಿದ್ದಾರೆ. ಇದು ಐವತ್ತು ಸಾವಿರ ವರ್ಷಗಳಿಂದ ರಷ್ಯಾದ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಸಿಕ್ಕಿಬಿದ್ದಿದ್ದ ‘ಜೊಂಬಿ ವೈರಸ್’ ಪುನರುತ್ಥಾನಗೊಂಡ … Continued

ಹರಿಯಾಣ ಜಿಲ್ಲಾ ಪರಿಷತ್ ಚುನಾವಣೆ: 411 ಸ್ಥಾನಗಳಲ್ಲಿ 350ರಲ್ಲಿ ಗೆದ್ದ ಸ್ವತಂತ್ರ ಅಭ್ಯರ್ಥಿಗಳು ; ಪ್ರಮುಖ ರಾಜಕೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಿದ್ದು ಯಾಕೆ..?

ನವದೆಹಲಿ: ಭಾನುವಾರ ಪ್ರಕಟವಾದ ಹರಿಯಾಣ ಜಿಲ್ಲಾ ಪರಿಷತ್ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ ಹೀಗೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗಿಂತ ಹೆಚ್ಚಾಗಿ ಮತದಾರರು ಸ್ವತಂತ್ರ ಅಭ್ಯರ್ಥಿಗಳನ್ನು ಹೆಚ್ಚು ನಂಬಿರುವುದು ಕಂಡುಬಂದಿದೆ. ಜಿಲ್ಲಾ ಪರಿಷತ್‌ಗಳ 411 ಸ್ಥಾನಗಳಲ್ಲಿ 350ರಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಆಡಳಿತಾರೂಢ ಬಿಜೆಪಿ … Continued

ಬೆಂಗಳೂರು: ಬೈಕ್ ಟ್ಯಾಕ್ಸಿ ಚಾಲಕ-ಆತನ ಸ್ನೇಹಿತನಿಂದ ಕೇರಳ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಕಳೆದ ವಾರ ಶುಕ್ರವಾರ ಬೆಂಗಳೂರಿನಲ್ಲಿ 22 ವರ್ಷದ ಮಹಿಳೆಯೊಬ್ಬಳ ಮೇಲೆ ಬೈಕ್ ಟ್ಯಾಕ್ಸಿ ಚಾಲಕ ಮತ್ತು ಆತನ ಸಹಚರ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕೇರಳ ಮೂಲದ ಮಹಿಳೆ ಶುಕ್ರವಾರ ಮಧ್ಯರಾತ್ರಿ ತನ್ನ ಸ್ನೇಹಿತನ ಮನೆಗೆ ಬೈಕ್ ಟ್ಯಾಕ್ಸಿ … Continued

ಕಾರ್ಯಕ್ರಮದಲ್ಲೇ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ : ಅಧಿಕಾರಿಗಳು ತೀವ್ರ ತರಾಟೆಗೆ-ಕಾರಣ ಇಲ್ಲಿದೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಮಂಗಳವಾರ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ಅದು ಇನ್ನೂ ಸ್ಥಳಕ್ಕೆ ತಲುಪಿಲ್ಲ ಎಂದು ತಿಳಿದ ನಂತರ ಅವರು ತಮ್ಮ ಶಾಂತತೆ ಕಳೆದುಕೊಂಡರು ಮತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಉತ್ತರ 24 ಪರಗಣ ಜಿಲ್ಲೆಯಲ್ಲಿದ್ದರು. ಸಿಟ್ಟು ಗೋಚರವಾಗುವಂತೆ … Continued

ಗುಜರಾತ್ ಕಾಂಗ್ರೆಸ್‌ ಸಮಾವೇಶಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ ಬೃಹತ್‌ ಗೂಳಿ : ಇದಕ್ಕೆ ಬಿಜೆಪಿ ಕಾರಣ ಎಂದ ರಾಜಸ್ಥಾನ ಸಿಎಂ ಗೆಹ್ಲೋಟ್ | ವೀಕ್ಷಿಸಿ

ನವದೆಹಲಿ: ಗುಜರಾತ್‌ನ ಮೆಹ್ಸಾನಾದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡುತ್ತಿದ್ದಾಗ ದಾರಿ ತಪ್ಪಿದ ಗೂಳಿಯೊಂದು ನುಗ್ಗಿ ಕೋಲಾಹಲ ಎಬ್ಬಿಸಿದೆ.. ಸಮಾವೇಶಕ್ಕೆ ನುಗ್ಗಿದ ಗೂಳಿ ನಂತರ ಗೊಂದಲಕ್ಕೊಳಗಾಗಿ ಅತ್ತ ಇತ್ತ ಓಡುತ್ತಿರುವ ದೃಶ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರೇಕ್ಷಕರನ್ನು ಶಾಂತವಾಗಿರುವಂತೆ ಸೂಚಿಸಿದ ಅಶೋಕ ಗೆಹ್ಲೋಟ್, ಇದೇವೇಳೆ ಭಾರತೀಯ ಜನತಾ … Continued

ಅಂಜನಾದ್ರಿ ಬೆಟ್ಟದಲ್ಲಿ ಹಾಕಿದ್ದ ಬ್ಯಾನರ್ ತೆರವುಗೊಳಿಸಿದ ಜಿಲ್ಲಾಡಳಿತ

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಅನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್‌ 5ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಪೋಸ್ಟರ್‌ ಹಾಕಲಾಗಿತ್ತು. ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸುತ್ತಾರೆ. … Continued

ಹೊಸ ಕೋವಿಡ್ ಮುಂದಿನ ರೂಪಾಂತರವು ಒಮಿಕ್ರಾನ್‌ಗಿಂತ ಹೆಚ್ಚು ಅಪಾಯಕಾರಿಯಾಗಿರಬಹುದು-ಲ್ಯಾಬ್ ಅಧ್ಯಯನ: ವರದಿ

ನವದೆಹಲಿ : ಆರು ತಿಂಗಳ ಕಾಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯಿಂದ ಕೋವಿಡ್ -19 ಮಾದರಿಗಳನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾದ ಪ್ರಯೋಗಾಲಯದ ಅಧ್ಯಯನವು ವೈರಸ್ ಹೆಚ್ಚು ರೋಗಕಾರಕವಾಗಿ ವಿಕಸನಗೊಂಡಿತು ಎಂದು ತೋರಿಸಿದೆ, ಅಲ್ಲದೆ, ಹೊಸ ರೂಪಾಂತರವು ಪ್ರಸ್ತುತ ಪ್ರಧಾನ ಒಮಿಕ್ರಾನ್ ಸ್ಟ್ರೈನ್‌ಗಿಂತ ಹೆಚ್ಚಿನ ತೀವ್ರ ಅನಾರೋಗ್ಯ ಉಂಟುಮಾಡಬಹುದು ಎಂದು ಅಧ್ಯಯನ ಹೇಳಿದೆ. ಕಳೆದ ವರ್ಷ ಲಸಿಕೆಗಳ … Continued

ರಕ್ಷಣಾ ಸಚಿವಾಲಯದಿಂದ ಧರ್ಮಸ್ಥಳ ‘ಮಂಜೂಷಾ’ ವಸ್ತು ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆ

ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪುಣೆಯ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ. 1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಟಿ-565 ಟ್ಯಾಂಕ್ ಬಳಕೆಯಾಗಿದೆ. 40 ಟನ್‌ಗಳಷ್ಟು ತೂಕ … Continued