ಬರಿಕೈಯಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ | ವೀಡಿಯೊ ವೈರಲ್‌

ಭೋಪಾಲ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಾಲಕಿಯರ ಶಾಲೆಯಲ್ಲಿ ಕೊಳಕು ಶೌಚಾಲಯವನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿರುವುದನ್ನು ಸಂಸದರ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಂಡುಬಂದಿದೆ. ಯುವ ಮೋರ್ಚಾದ ಸೇವಾ ಪಖವಾಡ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಘಟಕದ ಸದಸ್ಯರು ಖತ್ಖಾರಿ ಬಾಲಕಿಯರ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಸಂಸದ ಜನಾರ್ದನ್ ಮಿಶ್ರಾ … Continued

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ‘ಪ್ರಭಾರ ಭತ್ಯೆ ಹೆಚ್ಚಳ’ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವಂತ ಪ್ರಭಾರ ಭತ್ಯೆಗಳನ್ನು (In-charge Allowance Rate) ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡಾವಳಿಗಳನ್ನು ಹೊರಡಿಸಿದ್ದಾರೆ. ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಮತ್ತೊಂದು ಹುದ್ದೆಯ … Continued

ಪಠ್ಯದಲ್ಲಿರುವ ಸಾಹಿತಿ ದೇವನೂರು ಮಹಾದೇವ ಸೇರಿದಂತೆ 7 ಲೇಖಕರ ಗದ್ಯ-ಪದ್ಯಗಳನ್ನು ಕೈಬಿಡಲು ಆದೇಶ

ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನ ‘ಪರಿಷ್ಕೃತ ಪಠ್ಯಕ್ರಮ’ದಲ್ಲಿ ತಮ್ಮ ಬರಹಗಳನ್ನು ಪರಿಗಣಿಸದಂತೆ ಕೋರಿದ್ದ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಏಳು ಜನ ಲೇಖಕರ ಗದ್ಯ-ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಗಳಿಂದ ಕೈಬಿಡುವಂತೆ ಶಿಕ್ಷಣ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿನ ದೇವನೂರು ಮಹಾದೇವ ಅವರ … Continued

2023ರ ಮಾರ್ಚ್ ವೇಳೆಗೆ ಬೆಂಗಳೂರು-ಹುಬ್ಬಳ್ಳಿ ನಡುವೆ ಓಡಲಿದೆ `ವಂದೇ ಭಾರತ್ ರೈಲು’

ಬೆಂಗಳೂರು: ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ರೈಲನ್ನು ಮಾರ್ಚ್ 2023 ರೊಳಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಓಡಿಸಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯದ ಸಂಸದರನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ. “ಈ ವಿಭಾಗದಲ್ಲಿ ಹಳಿ ದ್ವಿಗುಣಗೊಳಿಸುವ ಕಾರ್ಯ ನಡೆಯುತ್ತಿದೆ … Continued

15,000 ಶಿಕ್ಷಕರ ಹುದ್ದೆಯ ನೇಮಕಾತಿ: ವಾರಾಂತ್ಯದೊಳಗೆ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ 15,000 ಶಿಕ್ಷಕರ ಹುದ್ದೆಯ ನೇಮಕಾತಿ ಸಂಬಂಧ ಮುಂದಿನ ವಾರಾಂತ್ಯದೊಳಗೆ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿನಾಗೇಶ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಅವರು, 15,000 ಶಿಕ್ಷಕರ ಹುದ್ದೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:2 ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು … Continued

ರಾಜ್ಯದಲ್ಲಿ ಮತ್ತೆ ವಿದ್ಯುತ್‌ ದರ ಏರಿಕೆ : ಅಕ್ಟೋಬರ್‌ 1ರಿಂದ ಅನ್ವಯ

ಬೆಂಗಳೂರು : ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಶಾಕ್​ ಕೊಟ್ಟಿದೆ. ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನಲೆಯಲ್ಲಿ ಇಂಧನ ಹೊಂದಾಣಿಕೆಯ ಶುಲ್ಕವನ್ನು ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಆದೇಶ ಹೊರಡಿಸಿದೆ. ಈ ಆದೇಶದಂತೆ ವಿದ್ಯುತ್ ದರ ಏರಿಕೆಯಾಗಲಿದ್ದು, ಗ್ರಾಹಕರಿಗೆ … Continued

ತಜ್ಞರ ಸಮಿತಿ ಶಿಫಾರಸಿಗೆ ಹೈಕೋರ್ಟ್‌ ಒಪ್ಪಿಗೆ:, ಸಿಇಟಿ ಬಿಕ್ಕಟ್ಟು ಶಮನ, ಸೆಪ್ಟೆಂಬರ್ 29ರಂದು ಪರಿಷ್ಕೃತ ಸಿಇಟಿ ರೇಂಕಿಂಗ್ ಪ್ರಕಟ

ಬೆಂಗಳೂರು: ವೃತಿಪರ ಕೋರ್ಸ್ ಗಳ ಸಿಇಟಿ ರ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ ರ್ಯಾಂಕಿಂಗ್‌ ಪಟ್ಟಿಯನ್ನು ಸೆಪ್ಟೆಂಬರ್‌ 29ರಂದು ಬಿಡುಗಡೆ ಮಾಡಲಾಗುವುದು. ಜೊತೆಗೆ ಅಕ್ಟೋಬರ್‌ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ … Continued

ಉತ್ತರಾಖಂಡ: ರೆಸಾರ್ಟ್‌ ರಿಸೆಪ್ಶನಿಸ್ಟ್‌ ಕೊಲೆ ಆರೋಪದ ಮೇಲೆ ಬಿಜೆಪಿ ಮುಖಂಡನ ಪುತ್ರನ ಬಂಧನ-ಪೊಲೀಸರು

ಪೌರಿ: ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿ (receptionist)ಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಹುಡುಗಿಯನ್ನು ಕೊಂದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರೊಬ್ಬರ ಮಗನನ್ನು ಬಂಧಿಸಲಾಗಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ರೆಸಾರ್ಟ್‌ನಲ್ಲಿರುವ ಇಬ್ಬರು ಉದ್ಯೋಗಿಗಳನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಹೆಚ್ಎಎಲ್‌ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಹುಬ್ಬಳ್ಳಿ : ಬೆಂಗಳೂರಿನ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌)ನಲ್ಲಿ ವಿವಿಧ ವೃತ್ತಿಗಳಲ್ಲಿ ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗಲಿರುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಹಾಗೂ ಐ.ಟಿ.ಐ ಟ್ರೇಡ್‌ಗಳಾದ ಫಿಟ್ಟರ್, ಟರ್ನರ್, ಮಷಿನಿಸ್ಟ್‌, ಶೀಟ್‌ಮೆಟಲ್ ವರ್ಕರ್‌, ಪೌಂಡ್ರಿಮನ್, ಇಲೆಕ್ಟ್ರೀಷಿಯನ್, ವೆಲ್ಡರ್, ಕೋಪಾ, ಸಿಓಪಿಎಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು  http://www.apprenticeship.gov.inಅಪ್ರೆಂಟಿಸ್ ಶಿಪ್ ಪೋರ್ಟಲ್ ನಲ್ಲಿ … Continued

ಬೆಂಗಳೂರಿನಲ್ಲಿ PayCM ಪೋಸ್ಟರ್‌ ಅಂಟಿಸಿದ ಕಾಂಗ್ರೆಸ್‌ ನಾಯಕರು

ಬೆಂಗಳೂರು: ಕಾಂಗ್ರೆಸ್ ನಾಯಕರು ಪೇ ಸಿಎಂ ಪೋಸ್ಟರ್ ವಿಷಯವನ್ನು ಮತ್ತಷ್ಟು ಹೈಪ್ ಮಾಡಿದ್ದಾರೆ. ಇಂದು, ಶುಕ್ರವಾರ ಸಂಜೆ ರೇಸ್ ಕೋರ್ಸ್ ಕಾಂಪೌಂಡ್‌ಗೆ ಪ್ರತಿಭಟನಾರ್ಥವಾಗಿ ಪೇ ಸಿಎಂ ಪೋಸ್ಟರ್ ಅಂಟಿಸಿದರು. ನಂತರ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು. ಇಂದು ಸಂಜೆ 4:45 ಗಂಟೆಗೆ … Continued