ಧಾರವಾಡದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿ ನ.ವಜ್ರಕುಮಾರ : ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ

ಧಾರವಾಡ: ಜೀವನದ ಪ್ರತಿ ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು. ಒಂದು ಮರ ತಾನು ಧರೆಗುರುಳಿದ ನಂತರವೂ, ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ತನ್ನ ಜೀವನವನ್ನು ಮುಕ್ತಾಯಗೊಳಿಸುತ್ತದೆ. ನದಿ ಸಮುದ್ರ ಸೇರುವವರೆಗೂ ಪ್ರತಿಕ್ಷಣವೂ ತನ್ನನ್ನು ಇತರರಿಗೆ ಸಮರ್ಪಿಸಿಕೊಳ್ಳುತ್ತದೆ. ಆ ರೀತಿ ಮಾನವ ನಿಸರ್ಗ ನೋಡಿಯಾದರೂ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ವಜ್ರಕುಮಾರವರು ಬದುಕಿರುವ ವರೆಗೂ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟವರು. ವಿದ್ಯಾಸೌಧಗಳನ್ನು … Continued

ಅಯ್ಯೋ ದೇವ್ರೆ…: ಬೈದು ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಗುಂಡು ಹಾರಿಸಿ ಗಾಯಗೊಳಿಸಿದ 10ನೇ ತರಗತಿ ವಿದ್ಯಾರ್ಥಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೊ: ಉತ್ತರ ಪ್ರದೇಶದ ಸೀತಾಪುರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಮೇಲೆ ದೇಶಿ ನಿರ್ಮಿತ ಪಿಸ್ತೂಲ್‌ನಿಂದ ಗುಂಡು ಹಾರಿಸಿರುವ ಘಟನೆ ಇಂದು, ಶನಿವಾರ ನಡೆದಿದೆ. 10ನೇ ತರಗತಿಯ ಬಾಲಕ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಜಗಳವಾಡಿದ ಬಳಿಕ ಶಿಕ್ಷಕ ಆತನಿಗೆ ಬೈದಿದ್ದರಿಂದ ಮನನೊಂದಿದ್ದ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿ ಶಿಕ್ಷಕರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ … Continued

ಥೇಟ್‌ ನಾಯಿಯಂತೆ ಬೊಗಳುವ ಬಿಳಿ ಗಿಳಿ: ನೆಟಿಜನ್‌ಗಳು ತಬ್ಬಿಬ್ಬು | ವೀಕ್ಷಿಸಿ

ಗಿಳಿಗಳು ಸುಂದರವಾದ ಮತ್ತು ಹೆಚ್ಚು ಬೌದ್ಧಿಕ ಪಕ್ಷಿಗಳಾಗಿದ್ದು ಅವು ಮಾನವನ ಮಾತನ್ನು ಅನುಕರಿಸುತ್ತವೆ. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ಗಿಳಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಗಿಳಿಗಳು ತಮ್ಮ ಮಾಲೀಕರೊಂದಿಗೆ ಮಾತನಾಡಲು ಸಮರ್ಥರಾಗಿರುತ್ತವೆ. ಬಿಳಿ ಕಾಕಟೂ ಗಿಣಿಯು ತನ್ನ ಸಹ ಸಾಕುಪ್ರಾಣಿಯಾದ ಜರ್ಮನ್ ಶೆಫರ್ಡ್‌ನೊಂದಿಗೆ ತನ್ನ ಮನೆಯ ಸುತ್ತಲೂ ಅದನ್ನೇ ಅನುಕರಿಸುತ್ತ ಓಡಾಡುವ ವೀಡಿಯೊ ವೈರಲ್ … Continued

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ

ಹುಬ್ಬಳ್ಳಿ: “ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಲಾಗಿದ್ದು, ಅವರು ಕಾರ್ಮಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಯವ್ಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಮ್ಮ ವಾಸಸ್ಥಳದಿಂದ ಗರಿಷ್ಟ್ 45 ಕಿ.ಮೀ ವರೆಗೆ ಸಾರಿಗೆ ಸಂಸ್ಥೆ … Continued

ಧಾರವಾಡ ಐಐಐಟಿಗೆ ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ಮುರ್ಮು ಭೇಟಿ: ಬುಡಕಟ್ಟು ಭಾಷೆಗಳಿಗೆ ಧ್ವನಿ ಭಾಷಾನುವಾದ ಮಾಡುವ ರೋಬೋಟ್ ಅಭಿವೃದ್ಧಿ…!

ಧಾರವಾಡ: ಇಲ್ಲಿನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ (ಐಐಐಟಿ) ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿರಾಷ್ಟ್ರಪತಿಗಳ ಮೂಲ ರಾಜ್ಯವಾದ ಒಡಿಸ್ಸಾ ಹಾಗೂ ಕರ್ನಾಟಕದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26ರಂದು ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸಂಸ್ಥೆ ಉನ್ನತ … Continued

ಚೀನಾದಲ್ಲಿ ಗೃಹ ಬಂಧನದಲ್ಲಿದ್ದಾರೆಯೇ ಕ್ಸಿ ಜಿನ್‌ಪಿಂಗ್ ? ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ ಸುದ್ದಿ

ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಇಂಟರ್ನೆಟ್‌ನಲ್ಲಿನ ಹಲವಾರು ಪೋಸ್ಟ್‌ಗಳ ಪ್ರಕಾರ, ಶಾಂಘೈ ಸಹಕಾರ ಸಂಸ್ಥೆ ಅಥವಾ SCO, ಶೃಂಗಸಭೆಗಾಗಿ ಇತ್ತೀಚೆಗೆ ಸಮರ್‌ಕಂಡ್‌ನಲ್ಲಿದ್ದ ಜಿನ್‌ಪಿಂಗ್ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಥವಾ PLA ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಲಾಗಿದೆ. ಆದಾಗ್ಯೂ, ಚೀನಾದ ಕಮ್ಯುನಿಸ್ಟ್ … Continued

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವೀಡಿಯೊ ಹಂಚಿಕೆ: 19 ರಾಜ್ಯಗಳಲ್ಲಿ ಸಿಬಿಐ ದಾಳಿ

ನವದೆಹಲಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (ಸಿಎಸ್‌ಎಎಂ) ಸಂಬಂಧಿಸಿದ ಆಡಿಯೊ, ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಆಪರೇಷನ್ ‘ಮೇಘ ಚಕ್ರ’ದ ಭಾಗವಾಗಿ ಈ ಶೋಧ ನಡೆಸಲಾಗುತ್ತಿದೆ. ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಸಿಎಸ್‌ಎಎಂ ದಂಧೆ ನಡೆಸುತ್ತಿದ್ದ ಪೆಡ್ಲರ್‌ಗಳ … Continued

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಪುತ್ರನ ಬಂಧನದ ನಂತರ ಉತ್ತರಾಖಂಡ ಪಕ್ಷದ ಮುಖಂಡ ವಿನೋದ್ ಆರ್ಯ ಅವರನ್ನು ಉಚ್ಚಾಟಿಸಿದ  ಬಿಜೆಪಿ

ನವದೆಹಲಿ : 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪುಲಕಿತ್ ಆರ್ಯ ತಂದೆ ವಿನೋದ್ ಆರ್ಯ ಮತ್ತು ಸಹೋದರ ಅಂಕಿತ್ ಆರ್ಯ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಉಚ್ಚಾಟಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಬಿಜೆಪಿ ಮುಖಂಡರ ಪುತ್ರ ಪುಲಕಿತ್ ಆರ್ಯ … Continued

ಪಾಟ್ನಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಪಿಎಫ್‌ಐ: ವರದಿ

ಪಾಟ್ನಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಇಸ್ಲಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಚು ರೂಪಿಸಿತ್ತು ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಇದಲ್ಲದೆ, ಪಿಎಫ್‌ಐ ಭಯೋತ್ಪಾದನಾ ಘಟಕಗಳು ಮತ್ತು ಇತರ ದಾಳಿಗಳನ್ನು ಸಿದ್ಧಪಡಿಸುತ್ತಿದೆ ಎಂದು ಇ.ಡಿ. ಹೇಳಿಕೊಂಡಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಉತ್ತರ … Continued

ನೋಡನೋಡುತ್ತಿದ್ದಂತೆ ಕುಸಿದುಬಿದ್ದ ಗುಡ್ಡದ ಬೃಹತ್‌ ಭಾಗ, ಆದಿ ಕೈಲಾಸ ಮಾನಸ ಸರೋವರ ಯಾತ್ರೆ ಪ್ರಮುಖ ಮಾರ್ಗ ಬಂದ್‌ | ವೀಕ್ಷಿಸಿ

ಶುಕ್ರವಾರ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಬೆಟ್ಟದ ದೊಡ್ಡ ಭಾಗವು ಕುಸಿದು ಬಿದ್ದಿದ್ದು, ಇದರ ನಂತರ ಆದಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಯಾತ್ರಾರ್ಥಿಗಳು ಬಳಸುವ ಪ್ರಮುಖ ಮಾರ್ಗವನ್ನು ಬಂದ್‌ ಮಾಡಲಾಯಿತು. ಶುಕ್ರವಾರ ಸಂಜೆ ನಜಾಂಗ್ ತಂಬಾ ಗ್ರಾಮದ ಬಳಿ ಭೂಕುಸಿತ ಸಂಭವಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಸ್ಥಳೀಯರೊಂದಿಗೆ ಕನಿಷ್ಠ 40 ಯಾತ್ರಿಕರು ತವಾಘಾಟ್ ಬಳಿ … Continued