ಅಶೋಕ್ ಗೆಹ್ಲೋಟ್ ವರ್ಸಸ್‌ ಸಚಿನ್ ಪೈಲಟ್: ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಯಾರು..? ಇಂದು ಸಂಜೆ ಕಾಂಗ್ರೆಸ್‌ ಮಹತ್ವದ ಸಭೆ

ನವದೆಹಲಿ: ಅಶೋಕ್‌ ಗೆಹ್ಲೋಟ್‌ ಅವರು ಕಾಂಗ್ರೆಸ್‌ ಅಧ್ಯಕ್ಷರಾದ ನಂತರ ಸಚಿನ್‌ ಪೈಲಟ್‌ ಮುಖ್ಯಮಂತ್ರಿಯಾಗಬಹುದು ಎಂಬ ಗುಸುಗುಸು ನಡುವೆಯೇ ಭಾನುವಾರ ಸಂಜೆ ಜೈಪುರದಲ್ಲಿ ರಾಜಸ್ಥಾನದ ಶಾಸಕರ ಸಭೆಯನ್ನು ಕಾಂಗ್ರೆಸ್‌ ಕರೆದಿದೆ. ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ರಾಜ್ಯ ಉಸ್ತುವಾರಿ ಅಜಯ್ ಮಾಕನ್ ಕೂಡ ಪಾಲ್ಗೊಳ್ಳಲಿದ್ದಾರೆ. ಅಶೋಕ್ ಗೆಹ್ಲೋಟ್ … Continued

ಪಾಕಿಸ್ತಾನ ಸಿಂಧ್‌ನಲ್ಲಿ ಹಿಂದೂ ಮಹಿಳೆ, ಅಪ್ರಾಪ್ತ ಬಾಲಕಿಯರ ಅಪಹರಿಸಿ ಬಲವಂತವಾಗಿ ಮತಾಂತರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧದ ಇತ್ತೀಚಿನ ಅಪರಾಧಗಳ ಘಟನೆಗಳಲ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಸಮುದಾಯದ ಮಹಿಳೆ ಮತ್ತು ಇಬ್ಬರು ಹದಿಹರೆಯದ ಹುಡುಗಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಲಾಗಿದೆ ಮತ್ತು ಮುಸ್ಲಿಮರೊಂದಿಗೆ ಮದುವೆ ಮಾಡಲಾಗಿದೆ. ಮೊದಲ ಪ್ರಕರಣದಲ್ಲಿ, ಸಿಂಧ್‌ನ ನಾಸರ್‌ಪುರ ಪ್ರದೇಶದಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ, ಸಿಂಧ್‌ನ ಮಿರ್ಪುರ್ಖಾಸ್ ಪಟ್ಟಣದ … Continued

ಮಾಜಿ ಸಿಎಂ ಎಸ್‌ಎಂ ಕೃಷ್ಣ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಶನಿವಾರ ಸಂಜೆ ಎಸ್ ಎಂ ಕೃಷ್ಣ ಅವರಿಗೆ ಜ್ವರ ಕಾಣಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಹತ್ತಿರದ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ … Continued

ಯುವಕನಿಗೆ ಬಲವಂತದಿಂದ ಖತ್ನಾ ಮಾಡಿಸಿ ಮತಾಂತರ ಯತ್ನದ ಆರೋಪ: ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ : ಮಂಡ್ಯದ ಯಾದವನಹಳ್ಳಿ ಗ್ರಾಮದ ಯುವಕನೊಬ್ಬನಿಗೆ ಮರ್ಮಾಂಗದ ಖತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ತನ್ನನ್ನು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು 11 ಮಂದಿ … Continued

ಅಕ್ಟೋಬರ್ 1ರಂದು ಭಾರತದಲ್ಲಿ 5G ಇಂಟರ್ನೆಟ್ ಸೇವೆ ಆರಂಭ, ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಅಕ್ಟೋಬರ್ 1ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. ಬಿಡುಗಡೆ ಸಂದರ್ಭದಲ್ಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಅದರ ಅಧಿಕೃತ ವೆಬ್‌ಸೈಟ್ ಪ್ರಕಾರ, ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದೆ, ಇದನ್ನು ದೂರಸಂಪರ್ಕ ಇಲಾಖೆ (DoT) ಮತ್ತು … Continued

ಜಲ ಸಂಪನ್ಮೂಲ ಇಲಾಖೆ 155 ಎಸ್​ಡಿಎ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ರಾಜ್ಯ ಜಲ ಸಂಪನ್ಮೂಲ ವಿಭಾಗದಲ್ಲಿ (Water Resources Department) 155 ಬ್ಯಾಕ್​ಲಾಗ್​ ದ್ವಿತೀಯ ದರ್ಜೆ ಸಹಾಯಕ ಹುದ್ದೆ ನೇಮಕಾತಿಗೆ ನೀಡಿದ್ದ ತಡೆಯನ್ನು ರದ್ದು ಪಡಿಸಿ ಸರ್ಕಾರ ಈಗ ಮತ್ತೆ ಹೊಸದಾಗಿ ಅಧಿಸೂಚನೆ ಹೊರಡಿಸಿದೆ. ಗ್ರೂಪ್​ ಸಿ ವೃಂದದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ … Continued

ನಟ ರಮೇಶ ಅರವಿಂದಗೆ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ

ಉಡುಪಿ: ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯತ ನೀಡುವ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಗೆ ಕನ್ನಡದ ಖ್ಯಾತ ನಟ ರಮೇಶ ಅರವಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 10ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಳೆದ ಹದಿನೇಳು ವರ್ಷಗಳಿಂದ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡುತ್ತ ಬರಲಾಗುತ್ತಿದೆ. … Continued

ರೆಸಾರ್ಟ್‌ ಅತಿಥಿಗಳಿಗೆ ʼವಿಶೇಷ ಸೇವೆʼಗೆ ಬಲವಂತ ಮಾಡುತ್ತಿದ್ದರು”: ಕೊಲೆಯಾದ ಉತ್ತರಾಖಂಡ ಸ್ವಾಗತಕಾರಿಣಿಯ ವಾಟ್ಸಾಪ್ ಸಂದೇಶ

ಋಷಿಕೇಶ: ಹತ್ಯೆಗೀಡಾದ ಉತ್ತರಾಖಂಡ ಮಹಿಳೆಯಿಂದ ಆಕೆಯ ಸ್ನೇಹಿತೆಗೆ ಕಳುಹಿಸಿದ ವಾಟ್ಸಾಪ್ ಸಂದೇಶಗಳು ಬಂಧಿತ ಆರೋಪಿಗಳು 19  ವರ್ಷದ ಹುಡುಗಿಯನ್ನು ವೇಶ್ಯಾವಾಟಿಕೆಗೆ ಬಲವಂತ ಮಾಡುತ್ತಿದ್ದರು ಎಂಬ ಆರೋಪವನ್ನು ದೃಢಪಡಿಸುವಂತಿದೆ. “ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತನ್ನ ಸ್ನೇಹಿತರಿಗೆ ಕಳುಹಿಸಿದ ಸಂದೇಶ ಹೇಳುತ್ತದೆ ಎಂದು ವರದಿಯಾಗಿದೆ, ಈಗ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಹಿರಿಯ ಬಿಜೆಪಿ ನಾಯಕನ ಮಗನ … Continued

ಪುಣೆಯಲ್ಲಿ ಪಿಎಫ್‌ಐ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ : ತನಿಖೆ ಆರಂಭ

ಪುಣೆ: ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿ ಹಾಗೂ ನಾಯಕರ ಮೇಲೆ ನಡೆದ ಬೃಹತ್‌ ದಾಳಿಯ ನಡುವೆ ಶುಕ್ರವಾರ ಪುಣೆಯಲ್ಲಿ ಪಿಎಫ್‌ಐ ಸಂಘಟನೆಯ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಯಿತು. ವರದಿಗಳ ಪ್ರಕಾರ, ನಗರದ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು ಕೇಳಿಬಂದವು, ಅಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ … Continued

ಏಕನಾಥ್ ಶಿಂಧೆ ಪುತ್ರ ಸಿಎಂ ಕುರ್ಚಿ ಮೇಲೆ ಕುಳಿತಿರುವ ಫೋಟೋ ವೈರಲ್: ಶ್ರೀಕಾಂತ ಶಿಂಧೆ ಹೇಳಿದ್ದೇನು..?

ಥಾಣೆ: ‘ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಶಿವಸೇನಾದ ಸಂಸದ ಶ್ರೀಕಾಂತ್ ಶಿಂಧೆ ಅವರು ಮುಖ್ಯಮಂತ್ರಿಗಳಿಗೆ ಮೀಸಲಾದ ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರು ಸೂಪರ್ ಸಿಎಂ ಆಗಿದ್ದಾರೆ’ ಎಂದು ಟೀಕಿಸಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಈ ಫೋಟೊವನ್ನೇ ಇಟ್ಟುಕೊಂಡು ಪ್ರತಿಪಕ್ಷಗಳು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. … Continued