ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಇನ್ನೂ ನಾಲ್ಕು ದಿನ ಇನ್ನೂ ಜೋರಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕೋಲಾರ, ಚಾಮರಾಜ ನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್‌ ನೀಡಲಾಗಿದೆ.  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಹಾಸನ … Continued

ಬೆಂಗಳೂರು ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ: ಎರಡು ದಿನದಲ್ಲಿ ತೀರ್ಮಾನ

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಇನ್ನೆರೆಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಂಬಂಧ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಜೊತೆ ಈ ವಿಚಾರದ ಬಗ್ಗೆ ಚರ್ಚಿಸಿದ ನಂತರ ಅವರ … Continued

ಮಾಲ್ ಒಳಗೆ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳಿಂದ ಭಜನೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಮಾಲ್‌ನಲ್ಲಿ ನಮಾಜ್ ಮಾಡುವ ಕುರಿತು ಶನಿವಾರ ವಿವಾದ ಭುಗಿಲೆದ್ದಿದೆ. ಬಲಪಂಥೀಯ ಹಿಂದೂಪರ ಸಂಘಟನೆಗಳ ಸದಸ್ಯರು ಮಾಲ್‌ನಲ್ಲಿ ಮುಸ್ಲಿಂ ನೌಕರರು ನಮಾಜ್ ಮಾಡುವುದನ್ನು ವಿರೋಧಿಸಿದರು. ಶನಿವಾರ, ಮಾಲ್‌ನ ನೆಲಮಹಡಿಯಲ್ಲಿನ ಅಗ್ನಿಶಾಮಕ ನಿರ್ಗಮನದ ಬಳಿ ಕೆಲವು ಉದ್ಯೋಗಿಗಳು ನಮಾಜ್ ಮಾಡುತ್ತಿದ್ದಾಗ, ಕೆಲವು ಹಿಂದೂಪರ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಆಗಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇಂದು … Continued

ಬಿಹಾರದ ಮೂವರು ಅಧಿಕಾರಿಗಳ ಮನೆ ಮೇಲೆ ವಿಚಕ್ಷಣ ದಳ ದಾಳಿ: 4 ಕೋಟಿ ರೂಪಾಯಿ ನಗದು ವಶ

ಪಾಟ್ನಾ: ಬಿಹಾರದ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿ) ದಾಳಿ ನಡೆಸಿದ ನಂತರ 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್‌ ಅವರಿಗೆ ಸಂಬಂಧಿಸಿದ ಬಿಹಾರದ ಪಾಟ್ನಾ ಮತ್ತು ಕಿಶನ್‌ಗಂಜ್‌ನಲ್ಲಿ ವಿಐಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ … Continued

ಪಿಎಸ್​ಐ ನೇಮಕಾತಿ ಪರೀಕ್ಷೆ ಹಗರಣ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದವಳ ಬಂಧನ

ಕಲಬುರ್ಗಿ: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಿಂದ ನಾಪತ್ತೆಯಾಗಿದ್ದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಅವಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. 545 ಪಿಎಸ್​ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ಆರೋಪಿಯಾಗಿರುವ ರಚನಾ ಹನುಮಂತಳನ್ನು ಸಿಐಡಿ (CID) ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ … Continued

ಡಿಆರ್‌ಡಿಒದಲ್ಲಿ 1901 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (CEPTAM) ನೇಮಕಾತಿ, ಹಿರಿಯ ತಾಂತ್ರಿಕ ಸಹಾಯಕ-B (STA-B) ಮತ್ತು ತಂತ್ರಜ್ಞ- ಹುದ್ದೆಗಳಿಗೆ 1901 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅಪೇಕ್ಷಿತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಬಿ ಮತ್ತು ಟೆಕ್ನಿಷಿಯನ್-ಎ … Continued

ಹೊಲದಲ್ಲಿ ಮಲಗಿದ್ದ ಮಹಿಳೆ ಮೈಮೇಲೆ ಹೆಡೆ ಎತ್ತಿ ನಿಂತ ಸರ್ಪ…!

ಕಲಬುರಗಿ: ಹೊಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಮೇಲೆ ಹಾವು ಹೆಡೆ ಎತ್ತಿ ನಿಂತ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಸ್ಮಯಕಾರಿ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ ನಡೆದಿದೆ. ಭಾಗಮ್ಮ ಬಡದಾಳ ಎಂಬ ಮಧ್ಯವಯಸ್ಸಿನ ಮಹಿಳೆ, ಮಧ್ಯಾಹ್ನದ … Continued

ಸಿಎಂ ಹೇಮಂತ್‌ ಸೊರೇನ್‌ ಅನರ್ಹತೆ ಭೀತಿ ಎದುರಿಸುತ್ತಿರುವ ಮಧ್ಯೆ ಜಾರ್ಖಂಡ್‌ನಲ್ಲಿ ಜೋರಾಯ್ತು ರೆಸಾರ್ಟ್ ರಾಜಕೀಯ..!

ನವದೆಹಲಿ: ಜಾರ್ಖಂಡ್ ವಿಧಾನಸಭೆಯಿಂದ ಹೇಮಂತ್ ಸೊರೇನ್‌ ಅನರ್ಹತೆ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ರಂಗೇರಿದೆ. ಶನಿವಾರ ಹೇಮಂತ್ ಸೊರೇನ್ ಮತ್ತು ಆಡಳಿತಾರೂಢ ಶಾಸಕರು ಹಲವು ಬಸ್‌ಗಳಲ್ಲಿ ತೆರಳುತ್ತಿರುವುದು ಕಂಡುಬಂದಿದೆ. ಶಾಸಕರನ್ನು ಜಾರ್ಖಂಡ್‌ನ ಲಟ್ರಾಟು ಅಣೆಕಟ್ಟಿನ ಬಳಿಯ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಮೂರು ಬಸ್‌ಗಳಲ್ಲಿ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಶಾಸಕರು ತೆರಳಿದ್ದು, ಭದ್ರತಾ ಸಿಬ್ಬಂದಿ … Continued

ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ದೂರು ದಾಖಲು

ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354 (ಅತ್ಯಾಚಾರಕ್ಕೆ ಯತ್ನ) ಹಾಗೂ ಬಸವರಾಜನ್ ಮತ್ತು ಸೌಭಾಗ್ಯ ಪ್ರಕರಣ ದಾಖಲಿಸಲಾಗಿದೆ. … Continued

ಪತ್ನಿ ಕಾಟಕ್ಕೆ ಬೇಸತ್ತು ಒಂದು ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆಯೇ ವಾಸಿಸುತ್ತಿರುವ ಈ ಪತಿ ಮಹಾಶಯ…!

ಲಕ್ನೋ: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಪ್ರಸಿದ್ಧ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ಪತಿರಾಯ ಮಾತ್ರ ಪತ್ನಿಯ ಜತೆ ಜಗಳವಾಡಿಕೊಂಡು ತಾಳೆಯ ಮರ ಏರಿದ್ದಾನೆ ಪತ್ನಿಯ ಜಗಳದಿಂದ ಬೇಸತ್ತ ವ್ಯಕ್ತಿಯೊಬ್ಬ ಒಂದು ತಿಂಗಳಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸವಾಗಿದ್ದಾನೆ. ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ … Continued