ಮಠಕ್ಕೆ ಮುರುಘಾ ಶ್ರೀಗಳು ವಾಪಸ್-ಸಂಕಟವನ್ನು ಧೈರ್ಯವಾಗಿ ಎದುರಿಸ್ತೇನೆ, ಸಹನೆಯಿಂದ ಇರಿ: ಭಕ್ತರಿಗೆ ಶ್ರೀಗಳ ಮನವಿ

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ. ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿd ಶ್ರೀಗಳು, ಬಂದಿರುವ ಸಂಕಟವನ್ನು ಧೈರ್ಯವಾಗಿ ಎದುರಿಸುತ್ತೇನೆ. ಈ ನೆಲದ ಕಾನೂನನ್ನು ಗೌರವಿಸಬೇಕುಯಾವುದೇ ಪಲಾಯನವಾದವಿಲ್ಲ. ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಸಂಕಷ್ಟದ ಸಮಯವಾಗಿದೆ. ಯಾರಿಗೂ ಆತಂಕ ಬೇಡ. ಎಲ್ಲರೂ ಧೈರ್ಯ ಸಹನೆಯಿಂದ ಇರಿ … Continued

ಮಂಗಳೂರು ಮೂಲದ ದಿವಿತಾ ರೈಗೆ ‘ಲಿವಾ ಮಿಸ್ ದಿವಾ ಯೂನಿವರ್ಸ್’ ಕಿರೀಟ

ಮುಂಬೈ: ಸೌಂದರ್ಯ ಸ್ಪರ್ಧೆ ಲಿವಾ ಮಿಸ್ ದಿವಾ ಯುನಿವರ್ಸ್-2022 ಪ್ರಶಸ್ತಿಯನ್ನು ಈ ಬಾರಿ ಕನ್ನಡತಿ, ಕರಾವಳಿ ಮೂಲತದ ದಿವಿತಾ ರೈ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ದಿವಿತಾ, ಮಿಸ್‌ ಯೂನಿವರ್ಸ್‌ 2022ಕ್ಕೆ ಭಾರತವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022ರ ಪ್ರಶಸ್ತಿ ಕಿರೀಟವನ್ನು ದಿವಿತಾ … Continued

ಹಿಜಾಬ್ ಮೇಲಿನ ನಿಷೇಧ: ಹೈಕೋರ್ಟ್ ಆದೇಶದ ವಿರುದ್ಧದ ಅರ್ಜಿಗಳ ಮೇಲೆ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಅರ್ಜಿಗಳ ಕುರಿತು ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಿ ಸೆಪ್ಟೆಂಬರ್ 5 ರಂದು ವಿಚಾರಣೆಗೆ ಮುಂದೂಡಿತು. … Continued

ರಾಮನಗರದಲ್ಲಿವರುಣನ ಅಬ್ಬರಕ್ಕೆ ಜನ ತತ್ತರ: ಅರ್ಧ ಮುಳುಗಿದ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರ ರಕ್ಷಣೆ, ಎರಡು ತಾಲೂಕಿನಲ್ಲಿ ಶಾಲೆಗಳಿಗೆ ರಜೆ, ತೇಲಿಹೋದ ವಾಹನಗಳು

ರಾಮನಗರ: ಜಿಲ್ಲೆಯಾದ್ಯಂತ ಕುಂಭದ್ರೋಣ ಮಳೆಗೆ ರಾಮನಗರದಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ಮಳೆಯಿಂದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ‌ ವಾಹನಗಳು ತೇಲುತ್ತಿದ್ದು, ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ರಾಮನಗರ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಮದ್ದೂರಿನಿಂದ … Continued

ಸ್ಟಾಕರ್ ಬೆಂಕಿ ಹಚ್ಚಿದ ನಂತರ ಜಾರ್ಖಂಡ್ ವಿದ್ಯಾರ್ಥಿನಿ ಸಾವು: ಪೊಲೀಸರು

ದುಮ್ಕಾ: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತನ್ನ ಮಾತಿಗೆ ಮರುಳಾಗದ ಕಾರಣ ಬೆಂಕಿ ಹಚ್ಚಿದ ನಂತರ ವಿದ್ಯಾರ್ಥಿನಿಯೊಬ್ಬಳು ಭಾನುವಾರ ಮುಂಜಾನೆ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ಯುವತಿಯನ್ನು ಮೊದಲು 90 ಪ್ರತಿಶತ ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ದುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ … Continued

ವಿದ್ಯುತ್ ತಂತಿ ಸ್ಪರ್ಷ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ಸಾವು

ಬಳ್ಳಾರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದ ಸಾರಥಿ ಪಂಪಾಪತಿ (68) ಮತ್ತು ಅವರ ಪತ್ನಿ ದ್ಯಾಮವ್ವ ಅವರು (66) ವಿದ್ಯುತ್‌ ಸ್ಪರ್ಷದಿಂದ ಭಾನುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಳ್ಳಾರಿಯ ಕೌಲ್‌ ಬಜಾರ್‌ನ ಬಂಡಿಹಟ್ಟಿಯ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪತ್ನಿಗೆ ವಿದ್ಯುತ್‌ ಶಾಕ್‌ ಹೊಡೆದಾಗ ಜೀವ ಉಳಿಸಲು ಹೋಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ … Continued

ರೈತರ ಪರಿಹಾರ ಕೋರಿಕೆ ಅರ್ಜಿಗಳ ನಿರ್ವಹಣೆಗೆ ಮೂರು ತಿಂಗಳಲ್ಲಿ ತಂತ್ರಾಂಶ ಅಭಿವೃದ್ಧಿ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು : ರೈತರ ಭೂಮಿ ಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಭೂಸ್ವಾಧೀನದ ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ತಂತ್ರಾಂಶದ ಅಡಿ ಆನ್‌ಲೈನ್‌ನಲ್ಲಿ ನಿರ್ವಹಿಸಲು ಮೂರು ತಿಂಗಳೊಳಗೆ ತಂತ್ರಾಂಶ (ಸಾಫ್ಟ್‌ವೇರ್‌) ಸಿದ್ಧಪಡಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಇ-ಆಡಳಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ … Continued

ವೇಗದಿಂದ ಬಂದ ಕಾರು ಸ್ಕಿಡ್ ಆಗಿ ಅದೆಷ್ಟು ಬಾರಿ ಪಲ್ಟಿ ಹೊಡೆದಿದೆ | ವೀಕ್ಷಿಸಿ

ಛಿಂದ್ವಾರಾ: ವೇಗವಾಗಿ ಬಂದ ಕಾರೊಂದು ಪಲ್ಟಿ ಹೊಡೆದು, ರಸ್ತೆಯಿಂದ ಸ್ಕಿಡ್ ಆಗಿ ನಂತರ ಆಮೆಯಂತೆ ಅನೇಕ ಬಾರಿ ಪಲ್ಟಿ ಹೊಡೆಯುವ ನಾಟಕೀಯ ದೃಶ್ಯಗಳು ಮಧ್ಯಪ್ರದೇಶದ ಛಿಂದ್‌ವಾರಾ-ನಾಗ್ಪುರ ಹೆದ್ದಾರಿಯಲ್ಲಿ ಕಾಣಿಸಿಕೊಂಡಿವೆ. ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗದ್ದೆಗೆ ಪಲ್ಟಿಯಾಗಿ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ರಸ್ತೆಯ ಮೇಲೆ ಸಂಗ್ರಹವಾದ ನೀರಿನಿಂದ ಸ್ಕಿಡ್‌ ಆಗಿದೆ. … Continued

ಬೂಟುಗಳಿಂದ ಹೊಡೆದರೆ ನಮ್ಮನ್ನು ದೂಷಿಸಬೇಡಿ: ಬಿಜೆಪಿ, ಸಿಪಿಐ(ಎಂ) ಪಕ್ಷಗಳಿಗೆ ಟಿಎಂಸಿ ಸಂಸದ ಸೌಗತ ರಾಯ್ ಎಚ್ಚರಿಕೆ

ಕೋಲ್ಕತ್ತಾ:ಕೆಲವರ ದುಷ್ಕೃತ್ಯಗಳಿಗಾಗಿ ತಮ್ಮ ಪಕ್ಷದ ಮೇಲೆ ದಾಳಿ ಮಾಡುವಾಗ ಸಭ್ಯತೆಯ ಮಿತಿಯನ್ನು ದಾಟಬೇಡಿ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರು ಬಿಜೆಪಿ ಮತ್ತು ಸಿಪಿಐ(ಎಂ) ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಬೂಟುಗಳಿಂದ ಥಳಿಸಿ ಸ್ಥಳದಿಂದ ಓಡಿಸಿದರೆ ದೂರು ಹೇಳಬೇಡಿ ಎಂದು ಸಂsದ ರಾಯ್‌ ಬಿಜೆಪಿ ಮತ್ತು ಸಿಪಿಐ(ಎಂ) ಮುಖಂಡರಿಗೆ ಹೇಳಿದ್ದಾರೆ. … Continued

ಒಂದು ವರ್ಷದ ಬಳಿಕ ಆಫ್ಘಾನಿಸ್ತಾನ ಚಿತ್ರಮಂದಿರಗಳು ಓಪನ್: ಆದ್ರೆ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಕತ್ತರಿ, 37 ಸಿನೆಮಾಗಳಲ್ಲಿ ಒಂದರಲ್ಲಿ ಮಾತ್ರ ಮಹಿಳೆ ನಟನೆ…!!

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಒಂದು ವರ್ಷದ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಆದರೆ ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರ ಪಾತ್ರಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಒಂದು ವರ್ಷದ ನಂತರ, ದೇಶದ ಚಿತ್ರಮಂದಿರಗಳು ಚಲನಚಿತ್ರಗಳನ್ನು … Continued