ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಮೂರು ದಿನಗಳ ಗಣೇಶೋತ್ಸವ ಆಚರಣೆಗೆ ಅವಕಾಶ

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ‌ ಮೈದಾನದಲ್ಲಿ ಮೂರು ದಿನಗಳ ಕಾಲ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಅವಕಾಶ ನೀಡಿದೆ. ಈ ಕುರಿತು ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಗಣೇಶ ಪ್ರತಿಷ್ಠಾಪನೆಗೆ ಒಟ್ಟು ಆರು ಸಂಘಟನೆಗಳು ಮನವಿ ಮಾಡಿದ್ದವು. ಸಂಘಟನೆಗಳ ಮನವಿ ಪರಿಶೀಲನೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ … Continued

2021ರ ಕೊರೊನಾ ಸಮಯದಲ್ಲಿ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳ: ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಕರ್ನಾಟಕಕ್ಕೆ ಎಷ್ಟನೆ ಸ್ಥಾನ ಗೊತ್ತಾ..?

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ವರದಿಯ ಪ್ರಕಾರ, 2021 ರಲ್ಲಿ ಭಾರತದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2020 ಕ್ಕೆ ಹೋಲಿಸಿದರೆ (1,53,052) ಶೇಕಡಾ 7.2 ರಷ್ಟು ಹೆಚ್ಚಳವಾಗಿದೆ ದೇಶದ ಎಲ್ಲಾ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಆತ್ಮಹತ್ಯೆಗಳನ್ನು ವರದಿ ಮಾಡಿದೆ, ತಮಿಳುನಾಡು, ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ. ಆತ್ಮಹತ್ಯೆಗೆ ಮುಖ್ಯ ಕಾರಣಗಳು ವೃತ್ತಿಪರ … Continued

ಹುಬ್ಬಳ್ಳಿ: ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ, 20 ಜನರ ರಕ್ಷಣೆ

ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಬೆಣ್ಣೆಹಳ್ಳದ ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ. ದಿಢೀರ್‌ ಪ್ರವಾಹಕ್ಕೆ 32 ಜನ ಸಿಲುಕಿಕೊಂಡಿದ್ದರು. 20 ಜನರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಕರೆ ತರುವ ರಕ್ಷಣಾ ಕಾರ್ಯ ನಡೆದಿದೆ. ಇಂಗಳಹಳ್ಳಿಯ ಮೇಲ್ಭಾಗದಲ್ಲಿ ರಭಸದ ಮಳೆಯಾಗುತ್ತಿರುವುದರಿಂದ ಇಂಗಳಹಳ್ಳಿ ಗ್ರಾಮದ ಬಳಿ ಬರುವ ಬೆಣ್ಣೆಹಳ್ಳ ಉಕ್ಕಿ ಹರಿಯಲಾರಂಭಿಸಿದೆ. ಈ ಸಮಯದಲ್ಲಿ ಕುಸ್ತಿ … Continued

ಮುರುಘಾ ಶರಣರ ವಿರುದ್ಧ ಆರೋಪ; ಸಂಪೂರ್ಣ ಹೊಣೆ ತನಿಖಾಧಿಕಾರಿಗೆ, ಯಾವುದೇ ಒತ್ತಡವಿಲ್ಲ: ಎಡಿಜಿಪಿ ಅಲೋಕಕುಮಾರ್

ಹುಬ್ಬಳ್ಳಿ: ಚತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣದ ಕುರಿತು ಎಲ್ಲ ವಿಧದಲ್ಲೂ ತನಿಖೆ ನಡೆಯುತ್ತಿದೆ.ಸಂಪೂರ್ಣ ತನಿಖೆ ಹೊಣೆಯನ್ನು ಪ್ರಕರಣದ ತನಿಖಾಧಿಕಾರಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾರಿಂದಲೂ ಒತ್ತಡ ಬಂದಿಲ್ಲ’ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣಕ್ಕೆ … Continued

ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ: ಗಣೇಶ ಕೊಲೆಕಾಡಿಗೆ ‘ಪಾರ್ತಿಸುಬ್ಬ ಪ್ರಶಸ್ತಿ’, ಪುತ್ತಿಗೆ ರಘುರಾಮ ಹೊಳ್ಳ, ಉಮೇಶ ಭಟ್‌ ಬಾಡ, ಕೆ.ಪಿ.ಹೆಗಡೆ, ಪಟ್ಲರಿಗೆ ಗೌರವ ಪ್ರಶಸ್ತಿ- ಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಪ್ರಸಂಗಕರ್ತ ಹಾಗೂ ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಅವರು ಆಯ್ಕೆಯಾಗಿದ್ದಾರೆ. ‘ಪಾರ್ತಿಸುಬ್ಬ ಪ್ರಶಸ್ತಿ’ಯು ₹ 1 ಲಕ್ಷ ನಗದು ಒಳಗೊಂಡಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದರು. 2022ನೇ ಸಾಲಿನ … Continued

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 320 ಹುದ್ದೆಗಳಿಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ. ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್​ 28ರ ಒಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀಧರ್​, … Continued

ಬೆಂಗಳೂರು ಚಾಮರಾಜಪೇಟೆ ಮೈದಾನ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ವಕ್ಫ ಮಂಡಳಿ

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್‌ 30) ವಿಚಾರಣೆ ನಡೆಸಲಿದೆ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶದ … Continued

ದೀಪಾವಳಿ ವೇಳೆಗೆ ರಿಲಯನ್ಸ್ ಜಿಯೊದಿಂದ ನಾಲ್ಕು ಮಹಾನಗರಗಳಲ್ಲಿ 5G ಸೇವೆ ಆರಂಭ: ಮುಖೇಶ್ ಅಂಬಾನಿ ಘೋಷಣೆ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅಕ್ಟೋಬರ್ 24 ರಂದು ಬರುವ ದೀಪಾವಳಿಯ ವೇಳೆಗೆ ರಿಲಯನ್ಸ್ ಜಿಯೋ ದೇಶದ ಆಯ್ದ ನಗರಗಳಲ್ಲಿ ಸ್ವತಂತ್ರ 5G ಸೇವೆಗಳನ್ನು ಆರಂಭಿಸಲಿದೆ ಎಂದು ಸೋಮವಾರ ಘೋಷಿಸಿದ್ದಾರೆ. ರಿಲಯನ್ಸ್ ಜಿಯೋ ತನ್ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) 2022ರಲ್ಲಿ ಅವರು ಈ ಘೋಷಣೆಗಳನ್ನು ಮಾಡಿದ್ದಾರೆ. ಪ್ಯಾನ್-ಇಂಡಿಯಾ … Continued

ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಆರು ಕಡೆ ಬಿಜೆಪಿ ಸಮಾವೇಶ : ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪಕ್ಷದ ಸಂಘಟನೆ, ಪ್ರವಾಸ, ಜನಸಂಪರ್ಕದ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದ ಆರು ಕಡೆ ದೊಡ್ಡ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು, ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ … Continued

G23 ಪತ್ರ ಬರೆದಾಗಿನಿಂದ ಕಾಂಗ್ರೆಸ್‌ಗೆ ನನ್ನ ಜೊತೆ ಸಮಸ್ಯೆಯಾಗಿತ್ತು : ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ, ಗುಲಾಂ ನಬಿ ಆಜಾದ್ ಸೋಮವಾರ ಕಾಂಗ್ರೆಸ್‌ನ ಗಾಂಧಿಗಳ ಮೇಲೆ ಮತ್ತೆ ವಾಗ್ದಾಳಿ ನಡೆಸಿದರು. G-23 ಗುಂಪು ಪತ್ರ ಬರೆದಾಗಿನಿಂದ ಕಾಂಗ್ರೆಸ್‌ ಪಕ್ಷವು ತನಗೆ ತೊಂದರೆ ನೀಡುತ್ತ ಬಂದಿದೆ ಎಂದು ಅವರು ಆರೋಪಿಸಿದ್ದಾರೆ. ಹೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ಷಮಿಸಿ, ಆದರೆ ತನಗೆ ತನ್ನಮನೆಯಿಂದ ಹೊರಹೋಗುವಂತೆ … Continued