100 ಮೀಟರ್‌ಗಳಷ್ಟು ಎತ್ತರದ ನೋಯ್ಡಾ ಅವಳಿ ಗೋಪುರಗಳು ನೆಲಸಮ : ಸ್ಫೋಟಗಳಿಂದ ಕೇವಲ 9 ಸೆಕೆಂಡುಗಳಲ್ಲಿ ಉರುಳಿದ ಕಟ್ಟಡಗಳು | ದೃಶ್ಯ ವೀಕ್ಷಿಸಿ

ನವದೆಹಲಿ: ತಿಂಗಳುಗಟ್ಟಲೆ ಸಿದ್ಧತೆ ಮತ್ತು ಯೋಜನೆಯ ನಂತರ ನೋಯ್ಡಾದ ಬಹುಮಹಡಿ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಭಾನುವಾರ (ಆಗಸ್ಟ್ 28) ಮಧ್ಯಾಹ್ನ 2:30 ಕ್ಕೆ ಕೆಡವಲಾಯಿತು. ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ‘ಅಪೆಕ್ಸ್ ಟವರ್ (Apex Tower) 32 ಹಾಗೂ ಸಯಾನಿ (Ceyane) 29 ಮಹಡಿಗಳನ್ನು ಹೊಂದಿದೆ. ಅಪೆಕ್ಸ್​ ಟವರ್​ನ ಎತ್ತರ 103 ಮೀಟರ್ ಇದೆ. ಹಾಗೂ … Continued

ವೀಡಿಯೊ ಶೇರ್‌ ಮಾಡಿ ಭಾರತದ ಗ್ರಾಮೀಣ ರಸ್ತೆಗಳಲ್ಲಿ ಇದನ್ನು ಮಾಡಿ ಎಂದು ಸಚಿವ ನಿತಿನ್ ಗಡ್ಕರಿಗೆ ಒತ್ತಾಯಿಸಿದ ಉದ್ಯಮಿ ಆನಂದ್ ಮಹೀಂದ್ರಾ | ವೀಕ್ಷಿಸಿ

ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಆಕರ್ಷಕ ಟ್ವಿಟರ್ ಪೋಸ್ಟ್‌ಗಳು ಸಾಮಾನ್ಯವಾಗಿ ಯಾವುದೇ ಸಮಯದಲ್ಲಿ ವೈರಲ್ ಆಗುತ್ತವೆ. ಶನಿವಾರ, ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ ಮಹಿಂದ್ರಾ ಅವರು, ಸುಂದರವಾದ ಮರದ ಸುರಂಗದ ವೀಡಿಯೊವನ್ನು ಮರುಟ್ವೀಟ್ ಮಾಡಿದ್ದಾರೆ – ಇದನ್ನು “ಟ್ರನಲ್” ಎಂದೂ ಕರೆಯುತ್ತಾರೆ ಎಂದು ಹೇಳಿರುವ ಅವರು, … Continued

ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ: ತನಿಖೆ ನಂತರ ಸತ್ಯಾಂಶ ತಿಳಿಯಲಿದೆ ಎಂದ ಸಿಎಂ

ಬೆಂಗಳೂರು : ಮುರುಘಾಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಕುರಿತಾಗಿನ ಸತ್ಯಾಂಶ ಏನು ಎಂಬುದು ತನಿಖೆ ಬಳಿಕ ಹೊರಬಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ಮಾಡಲು ಪೊಲೀಸರು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದು, ಆ … Continued

ಕಾಂಗ್ರೆಸ್‌ಗೆ ತೆಲಂಗಾಣ ನಾಯಕ ಎಂ.ಎ.ಖಾನ್‌ ರಾಜೀನಾಮೆ, ರಾಹುಲ್ ಗಾಂಧಿ ಪಕ್ಷದ ಪತನಕ್ಕೆ ಕಾರಣ ಎಂದ ಹಿರಿಯ ನಾಯಕ

ಹೈದರಾಬಾದ್‌: ಕಾಂಗ್ರೆಸ್‌ಗೆ ಮತ್ತೊಂದು ಆಘಾತವಾಗಿ, ತೆಲಂಗಾಣದ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಎಂ.ಎ. ಖಾನ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ರಾಹುಲ್‌ ಗಾಂಧಿಗೆ ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ” ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಅನುಭವಿ ರಾಜಕಾರಣಿಯಾದ ಖಾನ್ ಅವರು, ರಾಹುಲ್ … Continued

ಗೌರಿ-ಗಣೇಶನ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್‌ಗಳ ಸಂಚಾರ: ಟಿಕೆಟ್​ನಲ್ಲಿ ವಿಶೇಷ ಡಿಸ್ಕೌಂಟ್‌

ಬೆಂಗಳೂರು: ಗೌರಿ- ಗಣೇಶ ಹಬ್ಬದ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆಗೆ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ, ಈ ಬಾರಿ ಟಿಕೆಟ್​ ದರದಲ್ಲಿ ವಿಶೇಷ ರಿಯಾಯಿತಿಯನ್ನೂ ನೀಡಿದೆ. ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್‌ 29 ಮತ್ತು 30 ರಂದು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 500 ಹೆಚ್ಚುವರಿ ವಾಹನಗಳ … Continued

ರೈಲು ನಿಲ್ದಾಣದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಕದ್ದು ಕಳ್ಳ ಪರಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಮಥುರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪರಾಧ ಸೆರೆಯಾಗಿದೆ. ಈ ಘಟನೆಯ ವೀಡಿಯೋ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಎಸ್ಕೇಪ್ ಆಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ … Continued

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಕೆಲವು ಗಂಟೆಗಳ ಮೊದಲು ಕ್ಲಬ್‌ನಲ್ಲಿ ಬಲವಂತವಾಗಿ ಕುಡಿಸುವಂತೆ ಕಾಣುವ ವೀಡಿಯೊ ಹೊರಬಿತ್ತು | ವೀಕ್ಷಿಸಿ

ನವದೆಹಲಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದ ನೈಟ್‌ಕ್ಲಬ್‌ನಿಂದ ಹೊರಬರುವ ಮಾರ್ಗದಲ್ಲಿ ತತ್ತರಿಸುತ್ತಿರುವ ಸ್ಥಿತಿಯಲ್ಲಿಯಲ್ಲಿ ಭದ್ರತಾ ಕ್ಯಾಮೆರಾದ ದೃಶ್ಯಗಳು ತೋರಿಸಿದ ಒಂದು ದಿನದ ನಂತರ, ಈಗ ಮತ್ತೊಂದು ವೀಡಿಯೊ ಹೊರಬಿದ್ದಿದೆ. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸುವ ಗಂಟೆಗಳ ಮೊದಲಿನದ್ದು ಎಂದು ಹೇಳಲಾದ ಮತ್ತೊಂದು ಕ್ಲಿಪ್ ಹೊರಬಿದ್ದಿದ್ದು, ಅದರಲ್ಲಿ ಫೋಗಟ್‌ ಅವರಿಗೆ ಡ್ಯಾನ್ಸ್ ಫ್ಲೋರ್‌ನಲ್ಲಿ … Continued

ಬಿ.ಇಡಿ. ೩ನೇ ಸೆಮಿಸ್ಟರ್: ಧಾರವಾಡ ಜೆಎಎಸ್‌ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ನ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೨೧-೨೨ ನೇ ಸಾಲಿನ ಬಿ.ಇಡಿ. ೩ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಾಣಿ ಪಾಟೀಲ (೯೧.೮೩%), ಇಂಚರಾ ಚುಂಚೂರ ಮತ್ತು ಲತಾ ತೋರಣಗಟ್ಟಿ (೯೦.೮೩%), ಶಾಹೀನ್‌ತಾಜ್ ಗುಡದೂರ ಮತ್ತು ವಿವೇಕ ಖಾನಾಪುರ (೯೦.೫೦%) ಹಾಗೂ ನೇತ್ರಾವತಿ ಚಾಪಿ (೯೦%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. … Continued

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾದ ಆನಂದ್ ಶರ್ಮಾ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಅವರನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸ್ಟೀರಿಂಗ್ ಸಮಿತಿಯ ಮಾಜಿ ಅಧ್ಯಕ್ಷ ಆನಂದ್ ಶರ್ಮಾ ದೆಹಲಿಯಲ್ಲಿ ಭೇಟಿಯಾದರು. ದೆಹಲಿಯ ಆಜಾದ್ ಅವರ ನಿವಾಸದಲ್ಲಿ ನಡೆದ ಭೇಟಿ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ಮೂಲಗಳು ಖಚಿತಪಡಿಸಿವೆ. … Continued

ಶಿರಸಿಯಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಹೆಚ್ಚಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಮನಸೆಳೆದ ಡಾ.ರವಿಕಿರಣ ಪಟವರ್ಧನ್: ಇಳಿಯಿತು ದರ…!

ಶಿರಸಿ: ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಕೇಂದ್ರ ಸ್ಪಂದಿಸಿರುವ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಆಗುತ್ತಿದ್ದ ನಷ್ಟ ತಪ್ಪಿಸಿದೆ. ಸಮಾಜಮುಖಿ ಚಿಂತನೆಗಳಿಂದ ಗುರುತಿಸಿಕೊಂಡಿರುವ ಶಿರಸಿಯ ಖ್ಯಾತ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ, ಕಳೆದ ಜೂನ್ ಮೊದಲ ವಾರದಲ್ಲಿ ಶಿರಸಿಯಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪೆಟ್ರೋಲ್ ಮತ್ತು ಡಿಸೇಲ್ ದರ ಇರುವುದನ್ನು ಉಲ್ಲೇಖಿಸಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ … Continued