ಮಾನವ ರೂಪಿ ಮುಖದ ಗಣೇಶ ವಿಗ್ರಹ ಹೊಂದಿರುವ ವಿಶ್ವದ ಏಕೈಕ ದೇವಾಲಯ….ಮಾಹಿತಿ ಇಲ್ಲಿದೆ

ಗಣೇಶನಿಗೆ ಸಮರ್ಪಿತವಾದ ದೇಶಾದ್ಯಂತ ನೀವು ಅನೇಕ ವಿಶಿಷ್ಟ ಮತ್ತು ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ನಿಮಗೆ ಎಲ್ಲೆಡೆಯೂ ಸಿಗುವುದು ಗಜಮುಖದ ಗಣಪತಿಯ ವಿಗ್ರಹ ಅಥವಾ ಮೂರ್ತಿಯೇ. ಆದರೆ ಇದಕ್ಕೆ ಭಿನ್ನವಾದ ದೇವಾಲಯ ತಮಿಳುನಾಡಿನ ತಿರುವರೂರ್ ಜಿಲ್ಲೆಯ ಕೊತ್ತನೂರಿನ ತಿಲತರ್ಪಣಪುರಿಯ ಗಣೇಶನ ದೇವಾಲಯ. ಇಲ್ಲಿ … Continued

ಎರಡು ದೊಡ್ಡ ಕಾಂಗರೂಗಳ ‘ಜಂಗಿ ನಿಖಾಲಿ ಕುಸ್ತಿ’: ಹೊಡೆದಾಟದಲ್ಲಿ ತಗಡಿನ ಶೆಡ್‌ಗೆ ಅಪ್ಪಳಿಸಿದ ಒಂದು ಕಾಂಗರೂ : ವೀಕ್ಷಿಸಿ

ಕಾಂಗರೂಗಳ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತವೆ. ಇಂಟರ್ನೆಟ್ ಬಳಕೆದಾರರು ಕಾಂಗರೂಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈಗ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಎರಡು ಕಾಂಗರೂಗಳ ನಡುವಿನ ತೀವ್ರವಾದ ಹೊಡೆದಾಟದ ವೀಡಿಯೊವೊಂದು ವೈರಲ್‌ ಆಗಿದೆ. ಆಸ್ಟ್ರೇಲಿಯದ ನಿಸರ್ಗಧಾಮದಲ್ಲಿ ಎರಡು ಕಾಂಗರೂಗಳ ಬಾಕ್ಸಿಂಗ್ ಪಂದ್ಯವನ್ನು ಒಳಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ನೌ ದಿಸ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ … Continued

ಭಾರತದ ಗೌತಮ್ ಅದಾನಿ ಈಗ ವಿಶ್ವದ 3ನೇ ಅತಿದೊಡ್ಡ ಶ್ರೀಮಂತ, ಈ ಸ್ಥಾನ ತಲುಪಿದ ಮೊದಲ ಏಷ್ಯನ್…!

ನವದೆಹಲಿ: ಕೆಲವೇ ವರ್ಷಗಳ ಹಿಂದೆ ಗೌತಮ್ ಅದಾನಿ ಬಗ್ಗೆ ಭಾರತದ ಹೊರಗಿನ ಕೆಲವರು ಮಾತ್ರ ಕೇಳಿದ್ದರು. ಇದೀಗ ಭಾರತೀಯ ಉದ್ಯಮಿ, ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರು ಸ್ಥಾನಗಳಿಗೆ ಪ್ರವೇಶಿಸಿದ್ದು ಇದೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಚೀನಾದ … Continued

2020ರ ವಿವಾದಾತ್ಮಕ ಟ್ವೀಟ್‌ಗಾಗಿ ನಟ ಕಮಲ್ ಆರ್ ಖಾನ್ ಬಂಧನ

ಮುಂಬೈ: ಕೆಆರ್‌ಕೆ ಎಂಬ ಮೊದಲಕ್ಷರಗಳಿಂದ ಪರಿಚಿತರಾಗಿರುವ ನಟ ಕಮಲ್ ಆರ್ ಖಾನ್ ಅವರನ್ನು ಎರಡು ವರ್ಷಗಳ ಹಿಂದಿನ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಇಂದು, ಮಂಗಳವಾರ ಬಂಧಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮಂಗಳವಾರ ಖಾನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಮುಂಬೈನ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಕಮಲ್ ರಶೀದ್ ಖಾನ್ … Continued

ಹಾಲಿನ ದರ  ಹೆಚ್ಚಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಕೆಎಂಎಫ್‌

ಬೆಂಗಳೂರು: ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ.ಗಳಂತೆ ಹೆಚ್ಚಿಸಲು ಕೋರಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಖಾಸಗಿಯಾಗಿ ಹಾಲು ಮಾರಾಟ ಮಾಡುವ ದರಕ್ಕೆ ಹೋಲಿಸಿದರೆ ಕೆಎಂಎಫ್‌ ಹಾಲಿನ ದರ ಕಡಿಮೆಯಿದೆ. ಹೀಗಾಗಿ, ದರ ಹೆಚ್ಚಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು. ಖಾಸಗಿ … Continued

ಬೆಕ್ಕು ಕೂಗಿದ್ದರಿಂದ ಸಿಟ್ಟಿಗೆದ್ದ ಅಪ್ರಾಪ್ತ ಬಾಲಕ ಬೆಕ್ಕು ಸಾಕಿದವನನ್ನೇ ಕೊಂದ…!

ಹೈದರಾಬಾದ್: ಬೆಕ್ಕಿನ ನಿರಂತರ ಕೂಗಾಟದಿಂದ ಸಿಟ್ಟಾದ ಅಪ್ರಾಪ್ತ ಬಾಲಕನೊಬ್ಬ ಸಾಕು ಬೆಕ್ಕಿನ ಮನೆಯವನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಾಲಕ ಸಾವಿಗೀಡಾಗಿದ್ದು, ಮಾಲಕನ ಸ್ನೇಹಿತ ಶನಿವಾರ ನಗರದ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) … Continued

ಪಂಜಾಬ್ ಸಿಎಂ ಭಗವಂತ್ ಮಾನ್ ವಾಲಿಬಾಲ್ ಆಡುವುದನ್ನು ನೀವು ನೋಡಿದ್ದೀರಾ? | ವೀಕ್ಷಿಸಿ

ಜಲಂಧರ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ಜಲಂಧರ್‌ನಲ್ಲಿ ನಡೆದ ಕ್ರೀಡಾಕೂಟದ ‘ಖೇದನ್ ವತನ್ ಪಂಜಾಬ್ ದಿಯಾನ್’ನ ಉದ್ಘಾಟನೆ ದಿನದಂದು ತಮ್ಮ ವಾಲಿಬಾಲ್ ಕೌಶಲ್ಯವನ್ನು ಪ್ರದರ್ಶಿಸಿದರು. ಎರಡು ತಿಂಗಳ ಅವಧಿಯ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ, ಪಂಜಾಬ್‌ ಮುಖ್ಯಮಂತ್ರಿ ಮಾನ್ ಅವರು ಗುರು ಗೋಬಿಂದ್ ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 10-15 ನಿಮಿಷಗಳ ಕಾಲ ವಾಲಿಬಾಲ್ ಪಂದ್ಯವನ್ನು ಆಡಿದರು. … Continued

ನನ್ನ ಮೇಲೆ ಆಧಾರ ರಹಿತ ಆರೋಪ; ಮಾನನಷ್ಟ ಮೊಕದ್ದಮೆ ಹಾಕ್ತೇನೆ-ಸಚಿವ ಬಿ.ಸಿ.ನಾಗೇಶ

ಬೆಂಗಳೂರು: ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಿಕ್ಷಣ ಸಚಿವ ಸಚಿವರಾದ ಬಿ.ಸಿ.ನಾಗೇಶ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದುರುದ್ದೇಶ ಹಾಗೂ ವೈಯಕ್ತಿಕ ತೇಜೋವಧೆ ಮಾಡುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ನನ್ನ ವಿರುದ್ಧ ಮಾಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಲಾಗಿದೆ. ಆದರೆ, ಈ … Continued

ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಶಾಲಾ ಕಾಲೇಜುಗಳಿಗೆ ಮಂಗಳವಾರ (ಆಗಸ್ಟ್‌ 30) ರಜೆ ಘೋಷಿಸಲಾಗಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಹಾಗೂ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮಂಗಳವಾರ ರಜೆ ಘೋಷಿಸಿದ್ದಾರೆ. ಬೆಂಗಳೂರಲ್ಲಿ ಭಾರೀ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ. … Continued

ಶಿಕ್ಷಣ ಸಂಸ್ಥೆಗಳು ಸೇರಿದಂತೆ ಈ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ : ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್‌ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷದ ಮೇಲಿನ ಮಕ್ಕಳು ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಲಾಡ್ಜ್‌, ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಪಬ್‌, ಛತ್ರಗಳು, ಸಿನಿಮಾ ಹಾಲ್‌, … Continued