ಗಣೇಶನ ಹಬ್ಬಕ್ಕೆ ದಾಖಲೆ ಪ್ರಮಾಣದ 316 ಕೋಟಿ ಮೌಲ್ಯದ ವಿಮಾ ಕವರ್‌ ಪಡೆದ ಮುಂಬೈನ ಜಿಎಸ್‌ಬಿ ಸೇವಾ ಮಂಡಲ…!

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದಾದ ಗೌಡ್ ಸಾರಸ್ವತ ಬ್ರಾಹ್ಮಣ (GSB) ಸೇವಾ ಮಂಡಲವು ಮುಂಬರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ 316.40 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ. ಜಿಎಸ್‌ಬಿ (GSB) ಸೇವಾ ಮಂಡಲವನ್ನು 1955 ರಲ್ಲಿ ಮಧ್ಯ ಮುಂಬೈನ ಮಾತುಂಗಾದ ಕಿಂಗ್ಸ್ ಸರ್ಕಲ್ ಬಳಿ ಸ್ಥಾಪಿಸಲಾಯಿತು. ಕೋವಿಡ್ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳಿಂದಾಗಿ … Continued

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ನಿಧನ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27, ಶನಿವಾರ ಇಟಲಿಯ ತಮ್ಮ ಮನೆಯಲ್ಲಿ ನಿಧನರಾದರು. ಅಂತ್ಯಕ್ರಿಯೆಯು ಮಂಗಳವಾರ, ಆಗಸ್ಟ್ 30 ರಂದು ನಡೆಯಿತು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. “ಶ್ರೀಮತಿ ಸೋನಿಯಾ ಗಾಂಧಿಯವರ ತಾಯಿ, ಶ್ರೀಮತಿ ಪಾವೊಲಾ ಮೈನೋ ಅವರು … Continued

ಇಮ್ಮೋರ್ಟಲ್‌ ಜೆಲ್ಲಿ ಮೀನುಗಳ ಆನುವಂಶಿಕ ಸಂಕೇತ ಭೇದಿಸಿದ ವಿಜ್ಞಾನಿಗಳು, ಇದರಿಂದ ಮಾನವನ ವಯಸ್ಸಾಗುವಿಕೆಗೆ ಉತ್ತರ ಸಿಗಬಹುದೇ..?

ದೀರ್ಘಾಯುಷ್ಯ, ವಯಸ್ಸಾಗುವಿಕೆ ಮತ್ತು ಅಮರತ್ವವು ಮಾನವರನ್ನು ಕಾಡುವ ಕೆಲವು ಪರಿಕಲ್ಪನೆಗಳು. ಆದರೆ, ಇಲ್ಲಿಯವರೆಗೆ, ಅಮರತ್ವದ ಬಗೆಗಿನ ರಹಸ್ಯವನ್ನು ಅನ್ಲಾಕ್ ಮಾಡುವ ಯಾವುದೇ ಉತ್ತರಗಳಿಲ್ಲ. ವಿಜ್ಞಾನಿಗಳು ಈಗ ಅಮರತ್ವದ ಬಗ್ಗೆ ಜೆಲ್ಲಿ ಮೀನುಗಳಲ್ಲಿ ಉತ್ತರಗಳನ್ನು ಹುಡುಕುತ್ತಿದ್ದಾರೆ, ಇದು ಯಾಕೆಂದರೆ ಅದು ಪದೇಪದೇ ಪುನರ್ಯೌವನಗೊಳ್ಳುವ ಸ್ಥಿತಿಗೆ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೇನ್‌ನ ಸಂಶೋಧಕರು ಅಮರ ಜೆಲ್ಲಿ ಮೀನುಗಳ (immortal … Continued

ಬೆಳಗಾವಿ: ನಕಲಿ ನೋಟು ಚಲಾವಣೆಗೆ ಯತ್ನ, ಮೂವರ ಬಂಧನ

ಬೆಳಗಾವಿ: ಜಿಲ್ಲೆಯ ಘಟಪ್ರಭಾದಲ್ಲಿ ಮಂಗಳವಾರ ರಾತ್ರಿ, ಬಾರ್ ನಲ್ಲಿ ನಕಲಿ ನೋಟು ಚಲಾಯಿಸಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹500 ಮುಖಬೆಲೆಯ 473 ನಕಲಿ ನೋಟುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬಾರಿನಲ್ಲಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿದ ಮೇಲೆ, ಮೂವರೂ ಬಾರಿನ ಮಂದ ಬೆಳಕಿನ ಲಾಭ ಪಡೆದು ನಕಲಿ ನೋಟುಗಳನ್ನು ನೀಡಿ ಬಾರ್ ಮಾಲೀಕರನ್ನು ಯಾಮಾರಿಸಲು … Continued

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ

ಬೆಳಗಾವಿ : ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ಕಾರು ಬುಧವಾರ ಬೆಳಗಾವಿ ಜಿಲ್ಲೆಯ ಹಾರೂಗೇರಿ ಬಳಿ ಪಲ್ಟಿಯಾಗಿದ್ದು, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅಪಾಯದಿಂದ ಪಾರಾಗಿದ್ದಾರೆ. ಲಕ್ಷ್ಮಣ ಸವದಿ ಅವರಿದ್ದ ಕಾರು ರಾಯಬಾಗ ತಾಲೂಕು ಹಾರೂಗೇರಿ ಮತ್ತು ಹಿಡ್ಕಲ್ ಬಳಿ ಅಪಘಾತಕ್ಕೀಡಾಗಿದೆ.ಸವದಿ ಅವರು ಅಥಣಿಯಿಂದ ಬೆಳಗಾವಿಗೆ ತೆರಳುತ್ತಿದ್ದರು ಎಂದು … Continued

ಕೋವಿಡ್‌ ಸಂಕಟದ 2021ರಲ್ಲಿ ದಿನಗೂಲಿ ಕಾರ್ಮಿಕರು ಅತಿಹೆಚ್ಚು ಆತ್ಮಹತ್ಯೆ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: 2021 ರಲ್ಲಿ ಭಾರತವು ಕೋವಿಡ್‌-19 ಸಾಂಕ್ರಾಮಿಕದ ಹಿಡಿತದಲ್ಲಿದ್ದಾಗ ಆತ್ಮಹತ್ಯೆಯಿಂದ ಮೃತಪಟ್ಟವರಲ್ಲಿ ದಿನಗೂಲಿ ಕೆಲಸಗಾರರು, ವೇತನದಾರರು, ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವರೇ ಹೆಚ್ಚಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಎನ್‌ಸಿಆರ್‌ಬಿ ಪ್ರಕಾರ, 2021 ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ ಲಕ್ಷ್ಮೀನಾರಾಯಣ ರಾಜೀನಾಮೆ

ತುಮಕೂರು: ರಾಷ್ಟ್ರೀಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಹೊರ ನಡೆಯುತ್ತಿದ್ದು, ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿಯೂ ಇಂಥದ್ದೇ ಬೆಳವಣಿಗೆ ನಡೆದಿದೆ. ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ತುಮಕೂರಿನ ತುರುವೇಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ … Continued

ರೈಲು ಬರುವ ಸೂಚನೆಯಿದ್ದರೂ ದಾಟಲು ಹೋಗಿ ಬೈಕ್‌ ಪುಡಿಪುಡಿ, ವ್ಯಕ್ತಿ ಸ್ವಲ್ಪದರಲ್ಲೇ ಪಾರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭಾರತೀಯ ರೈಲ್ವೆಯಿಂದ ಆಗಾಗ್ಗೆ ಎಚ್ಚರಿಕೆಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಹೊರತಾಗಿಯೂ, ರೈಲ್ವೆ ಕ್ರಾಸಿಂಗ್‌ನಲ್ಲಿ ನಿಯಮಗಳನ್ನು ನಿರ್ಲಕ್ಷಿಸುವಲ್ಲಿ ಅನೇಕರು ನಿಯಮಗಳನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ, ಇದು ದುರಂತ ಅಪಘಾತಗಳಿಗೆ ಕಾರಣವಾಗುತ್ತದೆ. ಆಗಸ್ಟ್ 26 ರಂದು ಉತ್ತರ ಪ್ರದೇಶದ ಇಟಾವಾದಲ್ಲಿ ಇಂಥ ಒಂದು ಘಟನೆಯೊಂದರಲ್ಲಿ ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ ಅವರ ಬೈಕ್‌ ರೈಲ್ವೆಗೆ ಸಿಕ್ಕು ಪುಡಿಪುಡಿಯಾಗಿದೆ. ಈ ಘಟನೆ … Continued

ಪಂಜಾಬಿನಲ್ಲಿ ಪಾದ್ರಿ ಕಾರಿಗೆ ಬೆಂಕಿ; ಚರ್ಚ್‌ನ ಪ್ರತಿಮೆಗೆ ಹಾನಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಂಡೀಗಡ: ಪಂಜಾಬ್‌ನ ತರನ್‌ ತಾರನ್ ಜಿಲ್ಲೆಯಲ್ಲಿ ಜನರ ಗುಂಪೊಂದು ನಿನ್ನೆ ರಾತ್ರಿ ಸ್ಥಳೀಯ ಚರ್ಚ್‌ಗೆ ಬಲವಂತವಾಗಿ ನುಗ್ಗಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ. ಸ್ಥಳದ ದೃಶ್ಯಗಳು ಕಾರು ಬೆಂಕಿ ಹೊತ್ತಿಕೊಂಡಿರುವುದನ್ನು ಮತ್ತು ಚರ್ಚ್‌ನೊಳಗೆ ಹಾನಿಗೊಳಗಾದ ಪ್ರತಿಮೆಯನ್ನು ತೋರಿಸುತ್ತವೆ. ಚರ್ಚ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಂಪು ಶಿರಸ್ತ್ರಾಣವನ್ನು ಧರಿಸಿದ ವ್ಯಕ್ತಿಯೊಬ್ಬರು ವಿಗ್ರಹಕ್ಕೆ … Continued

ದೃಷ್ಟಿ ವಿಕಲಚೇತನ ಟೆಕ್ಕಿಗೆ ಮೈಕ್ರೋಸಾಫ್ಟ್‌ ಕಂಪನಿಯಿಂದ ₹ 47 ಲಕ್ಷ ಪ್ಯಾಕೇಜ್ ಆಫರ್‌…!

ಇಂದೋರ್: ಮಧ್ಯಪ್ರದೇಶದ 25 ವರ್ಷದ ದೃಷ್ಟಿ ವಿಕಲಚೇತನ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಐಟಿ ದೈತ್ಯ ಮೈಕ್ರೋಸಾಫ್ಟ್‌ನಿಂದ ₹ 47 ಲಕ್ಷ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಬಂದಿದೆ. ಯಶ್ ಸೋನಾಕಿಯಾ ಅವರು 2021ರಲ್ಲಿ ಇಂದೋರ್ ಮೂಲದ ಶ್ರೀ ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಎಸ್‌ಜಿಎಸ್‌ಐಟಿಎಸ್) ನಿಂದ ತಮ್ಮ ಬಿ ಟೆಕ್ ಪದವಿ ಪಡೆದಿದ್ದಾರೆ, … Continued