ಮತದಾರರ ಗುರುತಿನ ಕಾರ್ಡಿಗೆ ಆಧಾರ್ ಲಿಂಕ್ ಮಾಡುವುದು ಐಚ್ಛಿಕ: ಲಿಂಕ್‌ ಮಾಡದಿದ್ರೆ ಹೆಸರು ರದ್ದಾಗುತ್ತದೆಯಾ ಎಂಬ ಅನುಮಾನಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ: ಮತದಾರರ ಗುರುತಿನ ಕಾರ್ಡ್‌ (ವೋಟರ್‌ ಕಾರ್ಡ್‌) ಡಾಟಾವನ್ನು ಆಧಾರ್ ಜೊತೆ ಲಿಂಕ್‌ ಮಾಡುವುದು ಐಚ್ಛಿಕ ವಿಷಯ. ಹೀಗೆ ಜೋಡಣೆ (ಲಿಂಕ್) ಮಾಡದ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ಹೆಸರನ್ನು ತೆಗೆದುಹಾಕುವುದಿಲ್ಲ ಅಥವಾ ಅಳಿಸುವುದಿಲ್ಲ ಎಂದು ಚುನಾವಣಾ ಆಯೋಗ ಸೋಮವಾರ ಹೇಳಿದೆ. ಈ ವಿಷಯದ ಬಗ್ಗೆ ಕೆಲವು ಮಾಧ್ಯಮ ವರದಿಗಳ ನಂತರ ಆಯೋಗವು ಈ ಕುರಿತು ಸ್ಪಷ್ಟನೆ … Continued

ಗುರುಗ್ರಹದ ಸುತ್ತ ಉಂಗುರಗಳನ್ನು ಗುರುತಿಸಿದ ಜೇಮ್ಸ್ ವೆಬ್ ಟೆಲಿಸ್ಕೋಪ್

ನವದೆಹಲಿ: ಜೇಮ್ಸ್ ವೆಬ್ ಟೆಲಿಸ್ಕೋಪ್ ಬೆರಗುಗೊಳಿಸುವ ವಿದ್ಯಮಾನಗಳನ್ನು ಸೆರೆಹಿಡಿದ ನಂತರ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ನೌಕೆ ಈಗ ಗುರುಗ್ರಹವನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಸೆರೆಹಿಡಿದಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್, ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರುಗ್ರಹದ ಬಗ್ಗೆ ಹೊಸ ಸುಳಿವುಗಳನ್ನು ನೀಡಿತು. ಚಿತ್ರವು ಹೊಸ ವಿವರಗಳೊಂದಿಗೆ ಪ್ರಕ್ಷುಬ್ಧ ಗ್ರೇಟ್ ರೆಡ್ ಸ್ಪಾಟ್ ಅನ್ನು ಹೈಲೈಟ್ ಮಾಡುತ್ತದೆ, … Continued

ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟದ ಚುನಾವಣೆ ಮುಂದೂಡಿದ ಸುಪ್ರೀಂ ಕೋರ್ಟ್‌; ಆಡಳಿತಗಾರರ ಸಮಿತಿ ಅವಧಿ ಅಂತ್ಯ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ (ಎಐಎಫ್‌ಎಫ್‌) ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ಮುಂದೂಡುವಂತೆ ಕೇಂದ್ರ ಸರ್ಕಾರವು ಮಾಡಿದ್ದ ಕೋರಿಕೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ. ಅಲ್ಲದೆ, ಎಐಎಫ್‌ಎಫ್‌ನ ದಿನಂಪ್ರತಿ ವ್ಯವಹಾರಗಳನ್ನು 36 ರಾಜ್ಯಗಳ ಒಕ್ಕೂಟಗಳು ಆಯ್ಕೆ ಮಾಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯವರೇ ಸದ್ಯದ ಮಟ್ಟಿಗೆ ನಿರ್ವಹಿಸುವಂತೆ ನ್ಯಾ. ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಪೀಠ … Continued

ಬಿಜೆಪಿ ನಾಯಕ ಶಹನವಾಜ್‌ ಹುಸೇನ್ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಅತ್ಯಾಚಾರದ ಅರೋಪದ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು ಪ್ರಕರಣವನ್ನು ತುರ್ತಾಗಿ ಪರಿಗಣಿಸುವಂತೆ ಕೋರಿ ಮಾಜಿ ಸಚಿವ ಶಹನವಾಜ್‌ ಹುಸೇನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆಯನ್ನು … Continued

ಹುತಾತ್ಮರ ಕುಟುಂಬಕ್ಕೆ ಪರಿಹಾರವನ್ನು 1 ಲಕ್ಷದಿಂದ 1 ಕೋಟಿ ರೂ.ಗಳಿಗೆ ಹೆಚ್ಚಿಸಿದ ಗುಜರಾತ್ ಸರ್ಕಾರ

ಅಹಮದಾಬಾದ್: ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಸೈನಿಕರನ್ನು ಸಮಾಧಾನಪಡಿಸುವ ಉದ್ದೇಶದಿಂದ ಗುಜರಾತ್ ಸರ್ಕಾರವು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವ ಪರಿಹಾರ ಮತ್ತು ಶೌರ್ಯ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಸೋಮವಾರ ಘೋಷಿಸಿದೆ. ಕರ್ತವ್ಯದ ವೇಳೆ ಮೃತಪಟ್ಟ ಯೋಧನ ಪತ್ನಿ ಅಥವಾ ಕುಟುಂಬಕ್ಕೆ ನೀಡಲಾಗುವ ಪರಿಹಾರವನ್ನು ಪ್ರಸ್ತುತ 1 ಲಕ್ಷದಿಂದ 1 ಕೋಟಿಗೆ … Continued

ಸಿಸೋಡಿಯಾ ವಿರುದ್ಧದ ಪ್ರಕರಣ ಕೈಬಿಡಲು ಎಎಪಿ ತೊರೆಯುವಂತೆ ಬಿಜೆಪಿ ನೀಡಿದ್ದ ಆಫರ್‌ನ ಧ್ವನಿ ರೆಕಾರ್ಡ್‌ ಇದೆ ಎಂದು ಹೇಳಿಕೊಂಡ ಎಎಪಿ ಮೂಲಗಳು

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಅದನ್ನು ಉರುಳಿಸಲು ಸಹಾಯ ಮಾಡಿದರೆ ಅವರ ವಿರುದ್ಧದ ಸಿಬಿಐ ಪ್ರಕರಣವನ್ನು ಕೈಬಿಡಲಾಗುವುದು ಎಂದು ಪ್ರಸ್ತಾವನೆಯೊಂದಿಗೆ ಬಿಜೆಪಿ ನಾಯಕರೊಬ್ಬರು ಕರೆ ಮಾಡಿದ ಆಡಿಯೋ ರೆಕಾರ್ಡ್ ಅವರ ಬಳಿ ಇದೆ ಎಂದು ಎಎಪಿ ಮೂಲಗಳು ಹೇಳಿವೆ ಎಂದು ಸೋಮವಾರ ಮಾಧ್ಯಮ ವರದಿಗಳು ತಿಳಿಸಿವೆ. … Continued

ಸೆಪ್ಟೆಂಬರ್‌ 2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ನವ ಮಂಗಳೂರು ಬಂದರು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ನೀಡಲಾಗಿದ್ದು, ಎನ್‍ಎಂಪಿಎದ ಹಲವು ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ. ನವ ಮಂಗಳೂರು ಬಂದರಿನಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಪ್ರಧಾನಿ ಭಾಗಿಯಾಗಲಿದ್ದು,ಇದೇ ವೇಳೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ … Continued

ವ್ಯಕ್ತಿಯ ಗುದನಾಳದಲ್ಲಿ ಸಿಲುಕಿದ್ದ ಸ್ಟೀಲ್ ಗ್ಲಾಸ್ …! 10 ದಿನಗಳ ನಂತರ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯ್ತು

ನವದೆಹಲಿ: ಗುಜರಾತಿನ ಸೂರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಪಾರ್ಟಿಯ ಸಂದರ್ಭದಲ್ಲಿ ವ್ಯಕ್ತಿಯ ಸ್ನೇಹಿತರು ಆತನ ಗುದನಾಳದೊಳಗೆ ಸ್ಟೀಲ್ ಗ್ಲಾಸ್ ತೂರಿಸಿರುವುದು ನಡೆದಿದೆ….! ಘಟನೆ ನಡೆದಾಗ ಒಡಿಶಾ ಮೂಲದ ಕೃಷ್ಣ ರೌತ್ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. ಆ ವ್ಯಕ್ತಿ ಒಡಿಶಾಕ್ಕೆ ಹಿಂದಿರುಗಿದ 10 ದಿನಗಳ ನಂತರ ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳದೊಳಗಿನ ಸ್ಟೀಲ್‌ ಗ್ಲಾಸನ್ನು ಹೊರಕ್ಕೆ … Continued

ಜೆಎನ್‌ಯುದಲ್ಲಿ ವಿದ್ಯಾರ್ಥಿಗಳು-ಸಿಬ್ಬಂದಿ ನಡುವೆ ಹಿಂಸಾತ್ಮಕ ಘರ್ಷಣೆ: ಎಬಿವಿಪಿ ಅಧ್ಯಕ್ಷ ಸೇರಿದಂತೆ ಹಲವರಿಗೆ ಗಾಯ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಕ್ಯಾಂಪಸ್‌ನ ವಿದ್ಯಾರ್ಥಿ ವೇತನದ ವಿಚಾರವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಡುವೆ ಸೋಮವಾರ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ ಸೇರಿದಂತೆ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎರಡು ವರ್ಷಗಳಿಂದ ತಡೆಹಿಡಿದಿರುವ … Continued

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದು ತಪ್ಪಲ್ಲ : ಪ್ರಮೋದ ಮುತಾಲಿಕ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶ ಮಾಡಿರುವುದು ತಪ್ಪೆಂದು ನಾನು ಹೇಳುವುದಿಲ್ಲ, ಬಿಜೆಪಿಯವರು ಇಂತಹ ವಿಷಯ ಬಿಟ್ಟು ವೀರ್‌ ಸಾವರ್ಕರ್ ಅವರ ಬಗ್ಗೆ ಚರ್ಚೆ ಮಾಡಲಿ ಎಂದು  ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸಾಹಾರ ಸೇವನೆ ಮಾಡಿದ್ದರಲ್ಲಿ ತಪ್ಪು ಕಾಣುವುದಿಲ್ಲ. ಹಿಂದೂಗಳಲ್ಲಿ ದೇವರಿಗೂ … Continued