ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಇಂದು 22 ಶಾಲೆಗಳಿಗೆ ರಜೆ ಘೋಷಣೆ | ವೀಕ್ಷಿಸಿ

ಬೆಳಗಾವಿ : ಬೆಳಗಾವಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಇಲ್ಲಿಯ ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರೋಡ್‌ನಲ್ಲಿ ಸೋಮವಾರ ಬೆಳಿಗ್ಗೆ 6:15ರ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಮಾಹಿತಿ ನೀಡಿದ್ದಾರೆ.ಚಿರತೆ ರಸ್ತೆ ಬದಿ, ನಂತರ ರಸ್ತೆ ಮಧ್ಯೆ ಓಡಿರುವ ದೃಶ್ಯವನ್ನು ಬಸ್ ಚಾಲಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. … Continued

ಭಾರತ ಎಲೆಕ್ಟ್ರಿಕ್ ವಾಹನಗಳಲ್ಲಿ ಲೀಡರ್‌ ಆಗಲಿದೆ: ಉದ್ಯಮಿ ಆನಂದ್ ಮಹೀಂದ್ರಾ ಹೀಗೆ ಹೇಳಿದ್ದಕ್ಕೆ ಅವರೇ ಶೇರ್‌ ಮಾಡಿದ ಈ ವೀಡಿಯೊ ಕಾರಣ | ವೀಕ್ಷಿಸಿ

ಆನಂದ್ ಮಹೀಂದ್ರಾ ಅವರು ಆಗಾಗ್ಗೆ ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷರು ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಆನಂದ ಮಹೀಂದ್ರಾ ಶನಿವಾರ ಟ್ವಿಟರ್‌ನಲ್ಲಿ ಆ ವ್ಯಕ್ತಿಯ ಉದ್ಯೋಗ ಕೋರಿಕೆಯ ವಿನಂತಿಗೆ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕೀಜಾಡ್‌ನ ಗೌತಮ್ … Continued

ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ: ಇಂದು ಎನ್‌ಎಚ್‌ಆರ್‌ಸಿ ಚರ್ಚೆ ಸಾಧ್ಯತೆ

ನವದೆಹಲಿ: 2002ರ ಗುಜರಾತ್ ಗಲಭೆ ಸಮಯದಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳು ಗೋಧ್ರಾ ಉಪ-ಜೈಲಿನಿಂದ ಬಿಡುಗಡೆಯಾದ ಒಂದು ವಾರದ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೋಮವಾರ ಈ ವಿಷಯವನ್ನು “ಚರ್ಚೆಗೆ” ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಸಂಪರ್ಕಿಸಿದಾಗ, ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ … Continued

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

ನವದೆಹಲಿ: ಪ್ರತಿ ಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುವ ವರದಿಗಳ ಕುರಿತು ಕೇಂದ್ರ ಹಣಕಾಸು ಸಚಿವಾಲಯವು, ಅಂತಹ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದೆ. “ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ. ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ. ವೆಚ್ಚ … Continued

ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು: ಬಂಧನಕ್ಕೆ ಪಾಕ್ ಸರ್ಕಾರ ಸಿದ್ಧತೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆ (ಎಟಿಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ನ್ಯಾಯಾಧೀಶರು ಮತ್ತು ಇಬ್ಬರು ಉನ್ನತ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮೊದಲು, ಸಾರ್ವಜನಿಕ ರ್ಯಾಲಿಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಬೆದರಿಕೆ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ … Continued

ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟ ರಷ್ಯಾ ಅಧ್ಯಕ್ಷ ʼಪುತಿನ್ ಮೆದುಳುʼ ಎಂದು ಕರೆಯಲ್ಪಡುವ ರಷ್ಯಾದ ನಾಯಕನ ಮಗಳು…!

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆಪ್ತ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಡರ್ ಡುಗಿನ್ ಅವರ ಪುತ್ರಿ ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಷ್ಯಾದ ಮಾಧ್ಯಮಗಳು ಉಲ್ಲೇಖಿಸಿದ ಕುಟುಂಬ ಸದಸ್ಯರ ಪ್ರಕಾರ, ಉಕ್ರೇನ್‌ನಲ್ಲಿ ಕ್ರೆಮ್ಲಿನ್‌ನ ಆಕ್ರಮಣದ ಪ್ರಬಲ ಬೆಂಬಲಿಗರಾದ ಡುಗಿನ್ – ಅವರೇ ನಿಜವಾದ ಟಾರ್ಗೆಟ್‌ ಆಗಿತ್ತು, … Continued

ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನಗಳ ಮೇಲೆ ದಾಳಿ : ಹಲವು ವಾಹನಗಳು ಜಖಂ | ವೀಕ್ಷಿಸಿ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಪಟ್ನಾದಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟದ ಸಮಯದಲ್ಲಿ ಅವರು ಯಾವುದೇ ವಾಹನದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜುಗಳು ಒಡೆದಿವೆ. ನಿತೀಶ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ ಘಟನೆ ಪಾಟ್ನಾ ಜಿಲ್ಲೆಯ … Continued

ಮದ್ಯ ನೀತಿ ತನಿಖೆ: ಸಿಸೋಡಿಯಾ ವಿರುದ್ಧ ಲುಕ್‌ಔಟ್ ನೋಟಿಸ್ ಇಲ್ಲ, 8 ಆರೋಪಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ: ಸಿಬಿಐ ಮೂಲಗಳು

ನವದೆಹಲಿ: ದೆಹಲಿ ಅಬಕಾರಿ ನೀತಿಯ ಜಾರಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಂದು ಹೆಸರಿಸಲಾದ ಎಂಟು ಖಾಸಗಿ ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಲುಕ್ ಔಟ್ ನೋಟಿಸ್ (ಎಲ್‌ಒಸಿ) ಹೊರಡಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದವರ ಪೈಕಿ 8 ಜನರ ವಿರುದ್ಧ ಫೆಡರಲ್ ತನಿಖಾ … Continued

ನನಗೆ ವಯಸ್ಸಾಯ್ತು, ನನ್ನ ವಯಸ್ಕ ಅಂಗವಿಕಲ ಮಗನಿಗೆ ನೆರವು ನೀಡಿ: ತಾಯಿ ಕೂಗಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ತನ್ನ ವಯಸ್ಕ ಅಂಗವಿಕಲ ಮಗನನ್ನು ಎತ್ತಿಕೊಂಡು ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿದ ತಾಯಿಯೊಬ್ಬಳು ವಯಸ್ಕ ಮಗನ ಪೋಷಣೆಯ ಬಗ್ಗೆ ತಮ್ಮ ನೋವನ್ನು ತೋಡಿಕೊಂಡು ಆರ್ಥಿಕ ನೆರವಿಗಾಗಿ ಮೊರೆಯಿಟ್ಟರು. ತಾಯಿಯ ಕರುಳಿನ ಕೂಗಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ತಕ್ಷಣವೇ ನೆರವು ನೀಡುವ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದಾರೆ. ಕೊಡಗಿನ ಶನಿವಾರ ಸಂತೆಯ … Continued

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದ ಕಾಂಗ್ರೆಸ್‌

ನವದೆಹಲಿ: ಕಾಂಗ್ರೆಸ್ ಪಕ್ಷವು ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಭಾನುವಾರ ಆರಂಭಿಸಿದ್ದು, ಸೆಪ್ಟೆಂಬರ್ 20 ರೊಳಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ವೇಳಾಪಟ್ಟಿಗೆ ಅಂಟಿಕೊಳ್ಳಲಿದೆ ಎಂದು ಪಕ್ಷದ ಚುನಾವಣಾ ಪ್ರಾಧಿಕಾರ ತಿಳಿಸಿದೆ. ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಕಾಂಗ್ರೆಸ್ ಮುಖ್ಯಸ್ಥರ ಆಯ್ಕೆಯ … Continued