ದೇಶದ ಟಾಪ್ 1000 ನಗರಗಳಲ್ಲಿ 5G ಸೇವೆಗೆ ಸಜ್ಜಾದ ಜಿಯೊ…!

ಮುಂಬೈ: ಜಿಯೋ ಕಂಪನಿಯು ದೇಶದ ಟಾಪ್ 1,000 ನಗರಗಳಲ್ಲಿ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಮತ್ತು ತನ್ನ ಸ್ವದೇಶಿ 5G ಟೆಲಿಕಾಂ ಗೇರ್‌ಗಳ ಕ್ಷೇತ್ರ ಪ್ರಯೋಗಗಳನ್ನು ನಡೆಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ವರದಿಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) 2021-22ರ ಅವಧಿಯಲ್ಲಿ ತನ್ನ 100% ಸ್ಥಳೀಯ ತಂತ್ರಜ್ಞಾನದೊಂದಿಗೆ 5G ಗಾಗಿ … Continued

ಡಿ ಕೆ ಶಿವಕುಮಾರ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು: ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್ಕಾಲಾವಕಾಶ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಸಲ್ಲಿಸಿರುವ … Continued

ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಂದ ಗೂಗಲ್‌ ಸ್ಥಗಿತದ ವರದಿ

ಸೋಮವಾರದ ಕೊನೆಯಲ್ಲಿ ಹಾಗೂ ಮಂಗಳವಾರ ಬೆಳಗ್ಗೆ ಸ್ವಲ್ಪ ಸಮಯ ಗೂಗಲ್ ಸರ್ಚ್ ಕೆಲಸ ಮಾಡಲಿಲ್ಲ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com Google ಸ್ಥಗಿತವನ್ನು ದೃಢಪಡಿಸಿದೆ. ಗೂಗಲ್ ಸರ್ಚ್‌ನಲ್ಲಿ ಅಮೆರಿಕದಲ್ಲಿಯೇ 40,000 ಕ್ಕೂ ಹೆಚ್ಚು ಸಮಸ್ಯೆಗಳ ಘಟನೆಗಳು ವರದಿಯಾಗಿವೆ ಎಂದು ಅದು ಹೇಳಿದೆ. ಜಪಾನ್‌ನಲ್ಲಿ ಸುಮಾರು 5,900 ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಟ್ರ್ಯಾಕಿಂಗ್ ವೆಬ್‌ಸೈಟ್ … Continued

8ನೇ ವೇತನ ಆಯೋಗ ರಚಿಸುವ ಯಾವುದೇ ಯೋಜನೆ ಪರಿಗಣನೆಯಲ್ಲಿಲ್ಲ : ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗದ ರಚನೆಗೆ ಅಂತಹ ಯಾವುದೇ ಪ್ರಸ್ತಾಪವನ್ನು ಸರ್ಕಾರವು ಪರಿಗಣಿಸುತ್ತಿಲ್ಲ” ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಚೌಧರಿ … Continued

ಸಿಇಟಿಗೆ ಪಿಯು ಅಂಕ ವಿವಾದ; ಮುಂದಿನ ವಿಚಾರಣೆ ವರೆಗೆ ಕೌನ್ಸೆಲಿಂಗ್ ಆರಂಭಿಸುವುದಿಲ್ಲ ಎಂದು ಹೈಕೋರ್ಟಿಗೆ ತಿಳಿಸಿದ ಸರ್ಕಾರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ … Continued

ಇಟ್‌ ಹ್ಯಾಪನ್ಸ್‌ ಓನ್ಲಿ ಇನ್‌ ಇಂಡಿಯಾ..: ಸಚಿವರು, ಅವರ ಪರಿವಾರದ ವಾಹನಗಳು ಹಾದು ಹೋಗುವವರೆಗೆ ಆಂಬ್ಯುಲೆನ್ಸ್ ಅನ್ನೇ ತಡೆದು ನಿಲ್ಲಿಸಿದ ಪೊಲೀಸರು…! ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ವಿವಿಐಪಿ ಸಂಸ್ಕೃತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಚಿವರು ಹಾಗೂ ಅವರ ಪರಿವಾರದ ಕಾರುಗಳ ಗುಂಪು ರಸ್ತೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್ ಅನ್ನು ಪೊಲೀಸರು ತಡೆಹಿಡಿದ ಆಘಾತಕಾರಿ ಹಾಗೂ ವಿಲಕ್ಷಣ ಘಟನೆಯ ಮೊಬೈಲ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಶುಕ್ರವಾರ, ಆಗಸ್ಟ್ 5 ರಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ … Continued

ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಅಂತ್ಯವೋ..? ಮುಂದುವರಿಕೆಯೋ…? : ಬಿಹಾರ ಸಿಎಂ ನಿತೀಶಕುಮಾರ ಇಂದು ಕರೆದ ಜೆಡಿಯು ಪ್ರಮುಖರ ಸಭೆಗೆ ಎಲ್ಲಿಲ್ಲದ ಮಹತ್ವ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ, ಆಗಸ್ಟ್ 9 ರಂದು ಜನತಾ ದಳ (ಯುನೈಟೆಡ್) ಶಾಸಕರು ಮತ್ತು ಸಂಸದರ ಪ್ರಮುಖ ಸಭೆ ಸಭೆ ಕರೆದಿದ್ದು, ಬಿಜೆಪಿಯೊಂದಿಗೆ ಜೆಡಿಯು ಸಂಬಂಧಗಳು ಮುರಿದು ಬೀಳುವ ಕಾಲ ಸನ್ನಿಹಿತವಾಗಿದೆ ಎಂಬ ವದಂತಿಗಳ ನಡುವೆ ಅವರು ಈ ಸಭೆ ಕರೆದಿದ್ದರಿಂದ ಅದಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಬಿಜೆಪಿಯ ನಿಕಟವರ್ತಿ … Continued

ನಾಪತ್ತೆಯಾದ 50 ವರ್ಷಗಳ ನಂತರ ನ್ಯೂಯಾರ್ಕ್‌ನಲ್ಲಿ ₹ 1.7 ಕೋಟಿ ಮೌಲ್ಯದ 12ನೇ ಶತಮಾನದ ಪಾರ್ವತಿ ದೇವಿಯ ವಿಗ್ರಹ ಪತ್ತೆ

ಚೆನ್ನೈ: ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ ದೇವಾಲಯದಿಂದ ನಾಪತ್ತೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವು ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ತಿಳಿಸಿದೆ. ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಹೌಸ್‌ನಲ್ಲಿ ವಿಗ್ರಹ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ. 1971ರಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು ಮತ್ತು … Continued

ಏಷ್ಯಾ ಕಪ್ 2022: 15 ಸದಸ್ಯರ ಭಾರತದ ಕ್ರಿಕೆಟ್‌ ತಂಡ ಪ್ರಕಟ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್‌ಗೆ ಬುಲಾವ್‌

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ 2022ಕ್ಕಾಗಿ ಭಾರತ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಪ್ರಸಕ್ತ ವರ್ಷದಲ್ಲಿ ಪ್ರಮುಖ T20 ಪಂದ್ಯಾವಳಿಗಳಲ್ಲಿ ಸ್ಥಾನ ಪಡೆಯದ ಅವರು ಈಗ ತಂಡಕ್ಕೆ ಮರಳಿದ ಇಬ್ಬರು ಪ್ರಮುಖ ಆಟಗಾರರು. ಹಾರ್ದಿಕ್ ಪಾಂಡ್ಯ ಅವರ … Continued

ಕಾಮನ್‌ವೆಲ್ತ್ ಗೇಮ್ಸ್‌ – 2022: 22 ಚಿನ್ನ ಸೇರಿ 61 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ನವದೆಹಲಿ: 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟಾರೆ 61 ಪದಕಗಳೊಂದಿಗೆ ಭಾರತವು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ 4 ನೇ ಸ್ಥಾನವನ್ನು ಗಳಿಸಿದೆ. ಬರ್ಮಿಂಗ್ಹ್ಯಾಮ್ ಗೇಮ್ಸ್ 2006 ರ ಮ್ಯಾಂಚೆಸ್ಟರ್ ಗೇಮ್ಸ್‌ನೊಂದಿಗೆ ಸಮನಾಗಿ ಗೆದ್ದ ಚಿನ್ನದ ಪದಕಗಳ ವಿಷಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ನಾಲ್ಕನೇ ಅತ್ಯುತ್ತಮ ಪ್ರದರ್ಶನವಾಗಿದೆ. 2010ರಲ್ಲಿ … Continued